• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿನಿಂದ (ನ.15) ಶಬರಿಮಲೆ ದೇವಸ್ಥಾನ ಓಪನ್; ಷರತ್ತು ಅನ್ವಯ!

|
Google Oneindia Kannada News

ತಿರುವನಂತಪುರಂ, ನವೆಂಬರ್ 15: ಎರಡು ತಿಂಗಳ ಕಾಲ ನಡೆಯುವ ಮಂಡಲ- ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವಕ್ಕಾಗಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನ ಸೋಮವಾರ (ನ.15)ದಿಂದ ಮತ್ತೆ ತೆರೆಯಲಿದೆ. ಸೋಮವಾರ ಸಂಜೆ ಅಯ್ಯಪ್ಪನಿಗೆ ಸಮರ್ಪಿತವಾದ ಬೆಟ್ಟದ ದೇಗುಲ ತೆರೆಯಲಿದ್ದು, ಮಂಗಳವಾರದಿಂದ ಭಕ್ತರ ಪೂಜೆಗೆ ಅವಕಾಶ ನೀಡಲಾಗುವುದು.

ಮಂಡಲ ಪೂಜೆಗಾಗಿ ದೇವಸ್ಥಾನವನ್ನು ಡಿಸೆಂಬರ್ 26ರವರೆಗೆ ತೆರೆದಿದ್ದು, ಮಕರವಿಳಕ್ಕು ಉತ್ಸವಕ್ಕಾಗಿ ಡಿಸೆಂಬರ್ 30 ರಂದು ಮತ್ತೆ ತೆರೆಯಲಿದ್ದು, ಜನವರಿ 20 ರವರೆಗೆ ಭಕ್ತರಿಗೆ ದೇವಾಲಯದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ನವೆಂಬರ್ 16ರಂದು ಮಾಲಾಧಾರಿಗಳ ಪಾದಯಾತ್ರೆ ಆರಂಭವಾಗಲಿದ್ದು, ಸೋಮವಾರ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ. ಜಯರಾಜ್ ಪೊಟ್ಟಿ ದೇವಾಲಯದ ಗರ್ಭಗುಡಿಯನ್ನು ತೆರೆಯಲಿದ್ದಾರೆ.

ಈ ಬಾರಿ ಶಬರಿಮಲೆ ಯಾತ್ರೆಗೆ ಪ್ರತಿ ದಿನ ತಲಾ 25 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಒಟ್ಟಾರೆ 15.25 ಲಕ್ಷ ಭಕ್ತರಿಗೆ ಮಣಿಕಂಠನ ದರ್ಶನ ಭಾಗ್ಯ ದೊರಕಲಿದೆ. ಈ ಬಾರಿ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳಲು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

"ಕೊರೊನಾ ವೈರಸ್ ಸೋಂಕು (ಕೋವಿಡ್ -19) ಹರಡುವುದನ್ನು ತಪ್ಪಿಸಲು ಯಾತ್ರಾರ್ಥಿಗಳಿಗೆ ಇಲಾಖೆಯು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು," ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ.

sabarimala temple to reopen for mandala-makaravilakku festival from Nov 15 amid strict covid-19 norms

ದೇವಸ್ಥಾನ ಪ್ರವೇಶಿಸುವವರಿಗೆ 2 ಡೋಸ್ ಲಸಿಕೆ ಕಡ್ಡಾಯ
ಜನರು ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ ಪೂರ್ಣ ವ್ಯಾಕ್ಸಿನೇಷನ್ ಪ್ರಮಾಣಪತ್ರ ಅಥವಾ 72 ಗಂಟೆಗಳಿಗಿಂತ ಹಳೆಯದಾದ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಎಲ್ಲಾ ಭಕ್ತರು ತಮ್ಮ ಆಧಾರ್ ಕಾರ್ಡ್‌ಗಳನ್ನು ಸಹ ಹಾಜರುಪಡಿಸಬೇಕು ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ. ಮಂಡಲ ಮತ್ತು ಮಕರವಿಳಕ್ಕು ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

"ಕೇರಳ ರಾಜ್ಯ ಮಟ್ಟದಲ್ಲಿ ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಚಟುವಟಿಕೆಗಳನ್ನು ಸಂಘಟಿಸಲು ವಿಶೇಷ ಸಭೆಗಳನ್ನು ಕರೆಯಲಾಗಿದೆ. ಪಂಪಾದಿಂದ ಸನ್ನಿಧಾನಂವರೆಗಿನ ಚಿಕಿತ್ಸಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ,'' ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

"ಪಂಬಾ ಮತ್ತು ಶಬರಿಮಲೆ ಸನ್ನಿಧಾನಂನಲ್ಲಿ ವೈದ್ಯಕೀಯ ಕಾಲೇಜುಗಳ ತಜ್ಞ ವೈದ್ಯರ ಸೇವೆಯನ್ನು ಖಾತ್ರಿಪಡಿಸಲಾಗಿದೆ. ಈ ಕೇಂದ್ರಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ. ಪಂಬಾದಿಂದ ಸನ್ನಿಧಾನಂವರೆಗಿನ ಪ್ರಯಾಣದ ಉದ್ದಕ್ಕೂ ಐದು ಸ್ಥಳಗಳಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಆಮ್ಲಜನಕ ಪಾರ್ಲರ್‌ಗಳನ್ನು ಸ್ಥಾಪಿಸಲಾಗುತ್ತಿದೆ," ಎಂದು ಸಚಿವೆ ವೀಣಾ ಜಾರ್ಜ್ ಹೇಳಿದರು.

"ಅಯ್ಯಪ್ಪ ದೇವಸ್ಥಾನಕ್ಕೆ ಪ್ರಯಾಣಿಸುವಾಗ ಯಾರಿಗಾದರೂ ಅತಿಯಾದ ಹೃದಯ ಬಡಿತ, ಉಸಿರಾಟದ ತೊಂದರೆ ಅಥವಾ ಎದೆನೋವು ಕಂಡುಬಂದರೆ, ಆದ್ಯತೆಯ ಮೇಲೆ ತುರ್ತು ಕೇಂದ್ರಗಳಿಗೆ ಭೇಟಿ ನೀಡಬೇಕು. ತರಬೇತಿ ಪಡೆದ ಸ್ಟಾಫ್ ನರ್ಸ್ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಇಲ್ಲಿ ಲಭ್ಯವಿದೆ," ಎಂದು ಆರೋಗ್ಯ ಸಚಿವರು ಹೇಳಿದರು.

ಶಬರಿಮಲೆ ಸನ್ನಿಧಾನಂ, ಪಂಪಾ, ನಿಲಕ್ಕಲ್, ಚರಲ್ಮೇಡು (ಅಯ್ಯಪ್ಪನ್ ರಸ್ತೆ) ಮತ್ತು ಎರುಮೇಲಿಯಲ್ಲಿ ವಿಶೇಷ ಔಷಧಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ವೀಣಾ ಗೆರೋಜ್ ಭಾನುವಾರ ಹೇಳಿದರು. ಈ ಮಧ್ಯೆ ಶಬರಿಮಲೆ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಅನ್ನು ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಮಾತ್ರ ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.

English summary
The Sabarimala temple in the Pathanamthitta district of Kerala will reopen from Monday for the two-month-long Mandala-Makaravilakku festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X