ಕೇರಳದಲ್ಲಿ 'ಕಮಲ' ಅರಳದಿರಲು ಕಾರಣ ನೀಡಿದ ಬಿಜೆಪಿಯ ಏಕೈಕ ಶಾಸಕ
ತಿರುವನಂತಪುರಂ, ಮಾರ್ಚ್ 24: ಕೇರಳದಲ್ಲಿ ಬಿಜೆಪಿ ಸತತ ಪ್ರಯತ್ನ ನಡೆಸುತ್ತಿದ್ದರೂ ತನ್ನ ಬೇರು ಮೂಡಿಸಲು ಸಾಧ್ಯವಾಗದೆ ಇರುವುದಕ್ಕೆ ಕುತೂಹಲಕಾರಿ ಕಾರಣವನ್ನು ಕೇರಳ ಬಿಜೆಪಿಯ ಏಕೈಕ ಶಾಸಕ ಓ. ರಾಜಗೋಪಾಲ್ ತೆರೆದಿಟ್ಟಿದ್ದಾರೆ. ಕೇರಳದಲ್ಲಿ ಶಿಕ್ಷಣದ ಮಟ್ಟ ಹೆಚ್ಚಿರುವುದೇ ಇಲ್ಲಿ ಬಿಜೆಪಿ ವೇಗವಾಗಿ ಬೆಳೆಯದಿರಲು ಕಾರಣ ಎಂದು ಅವರು ಬಹಿರಂಗಪಡಿಸಿದ್ದಾರೆ.
ರಾಜಕೀಯ ಬೆಳವಣಿಗೆಯಲ್ಲಿ ಸಾಕ್ಷರತೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೇರಳದಲ್ಲಿ ಸಾಕ್ಷರತೆ ಮಟ್ಟ ಶೇ 90ರಷ್ಟಿದೆ ಎಂದು ಅವರು ಹೇಳಿದ್ದಾರೆ.
ಸುರೇಂದ್ರನ್ಗೆ ಮಂಜೇಶ್ವರದಲ್ಲಿ ಬಿಜೆಪಿ ಗೆಲುವಿನ ಸುಳಿವು ಸಿಕ್ಕಿದೆ?
'ಕೇರಳ ಬಹಳ ವಿಭಿನ್ನ ರಾಜ್ಯ. ಇಲ್ಲಿ ಎರಡು-ಮೂರು ವಿಭಿನ್ನ ಅಂಶಗಳಿವೆ. ಕೇರಳವು ಶೇ 90ರಷ್ಟು ಸಾಕ್ಷರತೆ ಪ್ರಮಾಣ ಹೊಂದಿದೆ. ಅವರು ಆಲೋಚಿಸುತ್ತಾರೆ ಮತ್ತು ಸಂವಹಿಸುತ್ತಾರೆ. ಇವುಗಳು ಸುಶಿಕ್ಷಿತರ ಹವ್ಯಾಸವೂ ಹೌದು. ಇದು ಕೂಡ ಬಿಜೆಪಿಗೆ ಸಮಸ್ಯೆಯಾಗಿದೆ' ಎಂದು ರಾಜಗೋಪಾಲ್ ತಿಳಿಸಿದ್ದಾರೆ.
'ಎರಡನೆಯ ವಿಶೇಷತೆ ಏನೆಂದರೆ ರಾಜ್ಯದಲ್ಲಿ ಶೇ 55ರಷ್ಟು ಹಿಂದೂಗಳು ಮತ್ತು ಶೇ 45ರಷ್ಟು ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಹೀಗಾಗಿ ಈ ಎಲ್ಲ ವ್ಯತ್ಯಾಸಗಳೆಲ್ಲವೂ ಲೆಕ್ಕಾಚಾರದಲ್ಲಿ ಇರುತ್ತವೆ. ಈ ಕಾರಣಕ್ಕಾಗಿಯೇ ಕೇರಳವನ್ನು ಇತರೆ ರಾಜ್ಯಗಳಿಗೆ ಹೋಲಿಸಲಾಗುವುದಿಲ್ಲ. ಇಲ್ಲಿನ ಸ್ಥಿತಿ ವಿಭಿನ್ನವಾಗಿದೆ. ಆದರೆ ನಾವು ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿದ್ದೇವೆ' ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮೂರು ಚುನಾವಣಾ ಅಖಾಡಗಳಲ್ಲಿ ರಾಜ್ಯ ಬಿಜೆಪಿ ನಾಯಕರದ್ದೇ ಪಾರುಪತ್ಯ
'ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಪ್ರಚಾರದ ಸಲುವಾಗಿ ಕಣದಲ್ಲಿರುತ್ತೇನೆ. ನನಗೆ 93 ವರ್ಷ ವಯಸ್ಸಾಗಿದೆ. ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡಲು ನನ್ನ ವಯಸ್ಸು ಸಹಕರಿಸುವುದಿಲ್ಲ. ಹೀಗಾಗಿ ನಾನು ಸ್ಪರ್ಧಿಸದೆ ಇರಲು ನಿರ್ಧರಿಸಿ, ಕುಮ್ಮಣನ್ ರಾಜಶೇಖರನ್ ಅವರನ್ನು ಅಭ್ಯರ್ಥಿಯನ್ನಾಗಿ ತಂದಿದ್ದೇನೆ. ಅತನ ಗೆಲುವು ನೋಡಲು ನಾನು ಕೆಲಸ ಮಾಡಲಿದ್ದೇನೆ' ಎಂದು ತಿಳಿಸಿದ್ದಾರೆ.