ಸೌತ್ ಇಂಡಿಯಾದ ಇಬ್ಬರು ಮಾಡೆಲ್‌ಗಳು ಕಾರು ಅಪಘಾತದಲ್ಲಿ ಸಾವು

ತಿರುವನಂತಪುರಂ ನವೆಂಬರ್ 2: ಸೋಮವಾರ ಮುಂಜಾನೆ ಕೊಚ್ಚಿಯ ವೈಟ್ಟಿಲ್ಲಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿಸ್ ಸೌತ್ ಇಂಡಿಯಾ ಹಾಗೂ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್, ಮಾಜಿ ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜಹಾನ್ ನಿಧನರಾಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಅವರು ಪ್ರಯಾಣಿಸುತ್ತಿದ್ದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ತಿರುಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮಾಡೆಲ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಎನ್‌ಎಚ್ 66 ರ ವೈಟಿಲ್ಲಾ-ಎಡಪ್ಪಲ್ಲಿ ಮಾರ್ಗದ ಚಕ್ಕರಪರಂಬು ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಗುರುತು ಹಿಡಿಯಲಾಗದಷ್ಟು ನಜ್ಜುಗುಜ್ಜಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆನ್ಸಿ ಮತ್ತು ಅಂಜನಾ ಜೊತೆತ್ರಿಶೂರ್ ಮೂಲದ ಅಬ್ದುಲ್ ರೆಹಮಾನ್ ಮತ್ತು ಮುಹಮ್ಮದ್ ಆಸಿಫ್ ಕೂಡ ಕಾರಿನಲ್ಲಿದ್ದರು. ಗಂಭೀರ ಗಾಯಗೊಂಡ ಇಬ್ಬರನ್ನೂ ಎರ್ನಾಕುಲಂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನ್ಸಿ ಮತ್ತು ಅಂಜನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಂಗಡಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್ಸಿ 2019 ರಲ್ಲಿ ಮಿಸ್ ಕೇರಳ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಅಂಜನಾ ಈವೆಂಟ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಆನ್ಸಿ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಪಡೆದಿದ್ದರು. ಸುದ್ದಿ ತಿಳಿದ ಎರಡೂ ಮಾಡೆಲ್‌ಗಳ ಕುಟುಂಬಗಳು ಕೊಚ್ಚಿಗೆ ಧಾವಿಸಿವೆ. ಅನ್ಸಿ ಕಬೀರ್ ತಿರುವನಂತಪುರಂ ಮೂಲದವರಾಗಿದ್ದರೆ, ಅಂಜನಾ ಶಾಜನ್ ಅವರ ಹುಟ್ಟೂರು ತ್ರಿಶೂರ್ ಮೂಲದವರಾಗಿದ್ದಾರೆ. 2019 ರ ಮಿಸ್ ಕೇರಳ ಈವೆಂಟ್‌ನಲ್ಲಿ ಇಬ್ಬರೂ ಸ್ನೇಹ ಬೆಳೆಸಿದ್ದರು.

 Miss South India, former Miss Kerala runner-up killed in car crash in Kochi

ಮಾಜಿ ಮಿಸ್ ಕೇರಳ ಅನ್ಸಿ ಕಬೀರ್ ವಾಹನ ಅಪಘಾತದಲ್ಲಿ ಮೃತಪಟ್ಟ ಮಾಹಿತಿ ತಿಳಿದ ಅವರ ಅಮ್ಮ ರಸೀನ (48) ಅಘಾತಕ್ಕೊಳಗಾಗಿದ್ದಾರೆ. ಇವರನ್ನು ತಿರುವನಂತಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ಕಬೀರ್ ವಿದೇಶದಲ್ಲಿದ್ದಾರೆ . ಆಟಿಂಗಲ್ ಆಲಂಕೋಟ್, ಪಾಲಕೋಣಂ ಅನ್ಸಿ ಕೊಟ್ಟೇಜಿನಲ್ಲಿ ಆನ್ಸಿಯ ಅಮ್ಮ ವಾಸಿಸುತ್ತಿದ್ದಾರೆ. ಆನ್ಸಿಯ ಪೋಸ್ಟ್‌ಮಾರ್ಟಮ್ ಕ್ರಮಕ್ಕಾಗಿ ಸಂಬಂಧಿಗಳು ಕೊಚ್ಚಿಗೆ ಮರಳಿದ್ದಾರೆ. ಕಬೀರ್-ರಸೀನ ದಂಪತಿಗಳ ಏಕೈಕ ಪುತ್ರಿ ಆಗಿದ್ದಾರೆ ಆನ್ಸಿ. ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಮತ್ತು ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ದೊಡ್ಡ ಆಘಾತವನ್ನುಂಟು ಮಾಡಿದೆ.

ಸಾಯುವ ಕೊನೆಯ ಪಯಣಕ್ಕೂ ಮುನ್ನ "ಇದು ಹೋಗಲು ಸಮಯ" ಎಂದು ಆನ್ಸಿ ಕಬೀರ್ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದಿದ್ದಾರೆ. ಈ ಮೂಲಕ ಮಾಜಿ ಸುಂದರಿ ಕೇರಳದ ಆನ್ಸಿ ಕಬೀರ್ ಅವರ ಮಾತು ಕೇಳಿ ಅಭಿಮಾನಿಗಳು ಮತ್ತು ಸ್ನೇಹಿತರು ಶಾಕ್ ಆಗಿದ್ದಾರೆ.

ಅನ್ನಿಯ ಸಾವಿನ ದುಃಖವನ್ನು ಹಂಚಿಕೊಂಡ ಅನೇಕರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇದು ನಂಬಲಸಾಧ್ಯ ಎಂದು ಬರೆದಿದ್ದಾರೆ. ಕೆಲವು ಜನರು ಆನ್ಸಿ ಇದನ್ನು ಮೊದಲೇ ನಿರೀಕ್ಷಿಸಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್ ಗೃಹಲಕ್ಷ್ಮಿ ಫೇಸ್ ಆಫ್ ಕೇರಳ 2018 ರ ಅಂತಿಮ ಸ್ಪರ್ಧಿಯೂ ಆಗಿದ್ದರು. ಅಂಜನಾ ಶಾಜನ್, ಆನ್ಸಿಯ ಸ್ನೇಹಿತೆ ಮತ್ತು 2019 ರ ಮಿಸ್ ಕೇರಳ ರನ್ನರ್-ಅಪ್ ತ್ರಿಶೂರ್ ಮೂಲದವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+