ಕೇರಳದಲ್ಲಿ ಸಕ್ರಿಯ ರಾಜಕಾರಣದಿಂದ ಮೆಟ್ರೋ ಮ್ಯಾನ್ ಶ್ರೀಧರನ್ ದೂರ ದೂರ!
ತಿರುವನಂತಪುರಂ, ಡಿಸೆಂಬರ್ 16: ಕೇರಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುನ್ನಲೆಗೆ ಬಂದಿದ್ದ ಮೆಟ್ರೋ ಮ್ಯಾನ್ ಈಗ ರಾಜಕಾರಣದಿಂದ ತೆರೆಮರೆಗೆ ಸರಿಯುವ ನಿರ್ಧಾರ ಘೋಷಿಸಿದ್ದಾರೆ. ಕಳೆದ ಬಾರಿಯ ಸೋಲಿನಿಂದ ಪಾಠ ಕಲಿತುಕೊಂಡಿದ್ದು, ಸಕ್ರಿಯ ರಾಜಕಾರಣದಿಂದ ದೂರ ಉಳಿಸುವುದಾಗಿ ಕೇರಳ ಮೆಟ್ರೋ ಮ್ಯಾನ್ ಇ ಶೀಧರನ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
"ನಾನು ಸಕ್ರಿಯ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತೇನೆ, ಅದರ ಅರ್ಥ ನಾನು ರಾಜಕೀಯದಿಂದಲೇ ದೂರ ಹೋಗುತ್ತೇನೆ ಎಂದಲ್ಲ," ಅಂತಾ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲ್ಕಕಾಡ್ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಧರನ್ ಸ್ಪರ್ಧಿಸಿದ್ದರು. ಸ್ಪಷ್ಟ ಗುರಿಯನ್ನು ಇಟ್ಟುಕೊಂಡ ಬಿಜೆಪಿಯು ಅಂದು ಪಕ್ಷ ಅಧಿಕಾರಕ್ಕೆ ಬಂದರೆ ಇವರನ್ನೇ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುವುದಾಗಿಯೂ ಘೋಷಿಸಿತ್ತು.
ಅಂದು ಶ್ರೀಧರನ್ ಅಂತಹ ನಾಯಕರು ತಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದೇ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಗೆಲುವು ಎಂದು ರಾಷ್ಟ್ರೀಯ ನಾಯಕರ ಆದಿಯಾಗಿ ಪಕ್ಷದ ಧುರೀಣರು ಹೇಳಿಕೆ ನೀಡಿದ್ದರು. ಇಂದು ಅದೇ ನಾಯಕರು ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವುದಾಗಿ ಘೋಷಿಸಿದ್ದಾರೆ.

90ರ ಹರೆಯದಲ್ಲಿ ರಾಜಕಾರಣ ಅಪಾಯಕಾರಿ:
"ನನಗೆ 90 ವರ್ಷ ವಯಸ್ಸಾಗಿದೆ, ಈ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸುವುದೇ ಅಪಾಯಕಾರಿ ಆಗಿದೆ. ಮೊದಲ ಬಾರಿ ನಾನು ರಾಜಕಾರಣವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಒಳ್ಳೆಯ ವಿಶ್ವಾಸವನ್ನು ಇಟ್ಟುಕೊಂಡಿದ್ದೆನು. ಆದರೆ ಈಗ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಕ್ಕೆ ಯಾವುದೇ ವಿಶ್ವಾಸ ಉಳಿದಿಲ್ಲ," ಎಂದು ಶ್ರೀಧರನ್ ಬೇಸರ ವ್ಯಕ್ತಪಡಿಸಿದ್ದಾರೆ. ಪಾಲಕ್ಕಾಡ್ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ಶ್ರೀಧರನ್ ತೀವ್ರವಾಗಿ ನೊಂದಿದ್ದು, ಗುರುವಾರ ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳುವ ನಿರ್ಧಾರ ಘೋಷಿಸಿದ್ದಾರೆ.
3,859 ಮತಗಳಿಂದ ಸೋತಿದ್ದ ಶ್ರೀಧರನ್:
ಕಳೆದ ಬಾರಿ ಕೇರಳದ ಪಲಕ್ಕದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್, ಹಾಲಿ ಶಾಸಕ ಶಫಿ ಪರಂಬಿಲ್ ವಿರುದ್ಧ 3,859 ಮತಗಳಿಂದ ಸೋಲು ಅನುಭವಿಸಿದ್ದರು.












Click it and Unblock the Notifications