ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಕೇಸ್
ತಿರುವನಂತಪುರಂ, ಏಪ್ರಿಲ್ 27: ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಂದ ದೂರು ದಾಖಲಾಗಿದೆ.
ಏಪ್ರಿಲ್ 22ರಂದೇ ಈ ಬಗ್ಗೆ ದೂರು ನೀಡಲಾಗಿದ್ದು, ಪ್ರಾಥಮಿಕ ಪರಿಶೀಲನೆ ಬಳಿಕ ಪೊಲೀಸರು ಕೊನೆಗೂ ದೂರು ದಾಖಲಿಸಿಕೊಂಡಿದ್ದು, ಕೊಚ್ಚಿಯಲ್ಲಿರುವ ತನ್ನ ಫ್ಲಾಟ್‌ಗೆ ಕರೆಸಿಕೊಂಡು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಒಂದು ಬಾರಿಯಲ್ಲ ಅನೇಕ ಬಾರಿ ಈ ಕೃತ್ಯ ಜರುಗಿದೆ. ನಟ ವಿಜಯ್ ನಂಬಿದ್ದ ಯುವತಿಗೆ ಮೋಸ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಿಂದ ತಿಳಿದು ಬಂದಿದೆ. ಸಂತ್ರಸ್ತ ಮಹಿಳೆ ಕೋಳಿಕ್ಕೋಡ್ ಜಿಲ್ಲೆ ಮೂಲದವರು ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ವಿಚಾರಣೆ ಇನ್ನೂ ಆಗಿಲ್ಲ, ತನಿಖೆ ವಿಳಂಬವಾಗುತ್ತಿದೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಬಗ್ಗೆ ತಡರಾತ್ರಿ ಪ್ರತಿಕ್ರಿಯಿಸಿರುವ ವಿಜಯ್ ಬಾಬು ನಾನೇ ಇಲ್ಲಿ ಸಂತ್ರಸ್ತ, ನನ್ನ ಮಾನಹಾನಿ ಮಾಡಲು ಈ ರೀತಿ ಸುಳ್ಳು ದೂರು ನೀಡಲಾಗಿದೆ, ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ. ಫ್ರೈಡೇ ಫಿಲಂ ಹೌಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿರುವ ವಿಜಯ್ ಬಾಬು ಅವರು ನಿರ್ಮಾಪಕರಾಗಿ ಫಿಲಿಪ್ಸ್ ಅಂಡ್ ದಿ ಮಂಕಿ ಪೆನ್ ಮಕ್ಕಳ ಚಿತ್ರಕ್ಕಾಗಿ ಕೇರಳ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.
''ನಾನು ನನ್ನ ಪತ್ನಿ, ತಾಯಿ, ಸೋದರಿ, ಸ್ನೇಹಿತರು ಹಾಗೂ ಆಪ್ತರಿಗೆ ಮಾತ್ರ ಉತ್ತರ ನೀಡುತ್ತೇನೆ, ಆಕೆಯ ದುರುದ್ದೇಶ ಎಂದಿಗೂ ಪೂರ್ಣಗೊಳ್ಳಲು ಬಿಡುವುದಿಲ್ಲ, ಚಾಟಿಂಗ್ ವಿವರವನ್ನು ಬಹಿರಂಗಪಡಿಸುವೆ, ಕಾನೂನು ಹೋರಾಟ ನಡೆಸುವೆ,'' ಎಂದು 45 ವರ್ಷ ವಯಸ್ಸಿನ ವಿಜಯ್ ಬಾಬು ಪ್ರತಿಕ್ರಿಯಿಸಿದ್ದಾರೆ.
2018ರಿಂದ ನಟರಾಗಿ ಕೂಡಾ ವಿಜಯ್ ಬಾಬು ಕಾಣಿಸಿಕೊಂಡಿದ್ದಾರೆ. ದೂರು ನೀಡಿರುವ ನಟಿ ಜೊತೆ 2021ರ ನಂತರ ಚಾಟ್ ಮಾಡಿಲ್ಲ, ಆಕೆ ನನ್ನ ಫ್ಲಾಟಿಗೆ ಬಂದಿದ್ದು ನಿಜ, ಆಡಿಷನ್ ಮುಗಿದ ಬಳಿಕ ಆಕೆಗೆ ನಟನೆಗೆ ಸೂಕ್ತ ಅವಕಾಶ ಕಲ್ಪಿಸಲಾಗಿತ್ತು. ಅದು ಬಿಟ್ಟರೆ, ಈ ಕಾಸ್ಟಿಂಗ್ ಕೋಚ್ ಆರೋಪ, ಮೀಟೂ ಆರೋಪ ಎಲ್ಲವೂ ಸುಳ್ಳು ಎಂದಿದ್ದಾರೆ.
ಅತ್ಯಾಚಾರ, ಸಹಮತ ಸೆಕ್ಸ್ ಏನಾದರೂ ವ್ಯಾಖ್ಯಾನ ನೀಡಲಿ, ಆಕೆಯ ಆರೋಪಗಳೆಲ್ಲವೂ ಸುಳ್ಳು, ನನ್ನ ಬಳಿ ಮಾತುಕತೆ ನಡೆಸಿದ 400ಕ್ಕೂ ಅಧಿಕ ಸ್ಕ್ರೀನ್ ಶಾಟ್ ಗಳಿವೆ. ಪೊಲೀಸ್ ತನಿಖೆ ಎದುರಿಸಲು ಸಿದ್ಧ, ಸತ್ಯ ಹೊರ ಬೀಳಲಿ ಎಂದು ವಿಜಯ್ ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications