ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸೆಫೀನ್ ಪದತ್ಯಾಗ
ಕೊಚ್ಚಿ, ಜೂನ್ 25: ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸೆಫೀನ್ ಪದತ್ಯಾಗಕ್ಕೆ ಮುಂದಾಗಿದ್ದಾರೆ.
ಜೋಸೆಫೀನ್ ಕೌಟುಂಬಿಕ ಹಿಂಸೆಗೊಳಗಾಗಿರವ ಮಹಿಳೆಯಿಂದ ದೂರು ಆಲಿಸುತ್ತಿರುವಾಗ ಒರಟಾಗಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಳಲ್ಲಿ ವೈರಲ್ ಆಗಿದ್ದು ಜೋಸೆಫೀನ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು, ಈ ಕಾರಣ ಪದತ್ಯಾಗ ಮಾಡಲು ನಿರ್ಧರಿಸಿದ್ದಾರೆ.
ಮನೋರಮ ನ್ಯೂಸ್ ಲೈವ್ ಫೋನ್ ಇನ್ ಕಾರ್ಯಕ್ರಮದಲ್ಲಿ ಎರ್ನಾಕುಲಂ ಜಿಲ್ಲೆಯಿಂದ ಕರೆ ಮಾಡಿದ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ. ಹೀಗಿರುವಾಗ ಪೊಲೀಸರಿಗೆ ಯಾಕೆ ದೂರು ನೀಡಿಲ್ಲ? ಎಂದು ಜೋಸೆಫೀನ್ ಆಕೆಯಲ್ಲಿ ಕೇಳಿದಾಗ, ಅವರು ಯಾರಿಗೂ ಹೇಳಲಿಲ್ಲ ಎಂದು ಆ ಮಹಿಳೆ ಉತ್ತರಿಸಿದ್ದಾರೆ.

ಮಹಿಳೆಯ ಈ ಮಾತನ್ನು ಕೇಳಿದ ಜೋಸೆಫೀನ್ ಓಹ್, ಹಾಗಾದ್ರೆ ಸಹಿಸಿಕೊಂಡಿರು ಎಂದು ಹೇಳಿದ್ದರು.ಜೋಸೆಫೀನ್ ಅವರ ಪ್ರತಿಕ್ರಿಯೆಗಳನ್ನು ಖಂಡಿಸಿ ತನ್ನ ಹಲವಾರು ರಾಜಕೀಯ ಮುಖಂಡರು ಜೋಸೆಫೀನ್ ಅವರನ್ನು ಆ ಹುದ್ದೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಶಾಫಿ ಪರಂಬಿಲ್ ಜೋಸೆಫೀನ್ ಅವರನ್ನು ಮಹಿಳಾ ವಿರೋಧಿ ಆಯೋಗದ ಮುಖ್ಯಸ್ಥರಾಗಿ ನೇಮಕ ಮಾಡಬೇಕು" ಎಂದಿದ್ದಾರೆ.
ಈ ರೀತ ಪ್ರತಿಕ್ರಿಯಿಸಿದ ಬಗ್ಗೆ ವಾಹಿನಿಯ ಪತ್ರಕರ್ತೆ ಜೋಸೆಫೀನ್ ಅವರಲ್ಲಿ ಕೇಳಿದಾಗ ಮೊದಲು ಪ್ರತಿಕ್ರಿಯಿಸಲು ನಿರಾಕರಿಸಿದರು. ಆಮೇಲೆ ನಾನು ಯಾವ ಕೆಟ್ಟ ಪದಗಳಿಂದ ಬೈದಿಲ್ಲ. ಪೊಲೀಸರಿಗೆ ದೂರು ನೀಡಬೇಕಿತ್ತು ಎಂದಷ್ಟೇ ನಾನು ಹೇಳಿದೆ ಎಂದಿದ್ದಾರೆ.
ಕೌಟುಂಬಿಕ ಹಿಂಸೆ ಬಗ್ಗೆ ಕುಟುಂಬದ ನ್ಯಾಯಾಲಯಕ್ಕೆ ಸಮೀಪಿಸುವಂತೆ ದೂರುದಾರರಿಗೆ ಸಲಹೆ ನೀಡಿದ ಜೋಸೆಫೀನ್ ಇದರಿಂದಾಗಿ ತನ್ನ ಕುಟುಂಬವನ್ನು ಸರಿದೂಗಿಸಬಹುದು ಎಂದಿದ್ದಾರೆ.
"ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ನಿಮ್ಮ ಪತಿಯೊಂದಿಗೆ ನೀವು ವಾಸಿಸಲು ಬಯಸದಿದ್ದರೆ, ನೀವು ಉತ್ತಮ ವಕೀಲರನ್ನು ಸಂಪರ್ಕಿಸಿ ವರದಕ್ಷಿಣೆ ಹಿಂಪಡೆಯಬೇಕು ಪರಿಹಾರವನ್ನು ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಎಂದು ಹೇಳಿದ್ದಾರೆ.












Click it and Unblock the Notifications