Get Updates
Get notified of breaking news, exclusive insights, and must-see stories!

ಓಣಂ ಸೀಸನ್ ಎಲ್ಲಾ ದಾಖಲೆ ಧ್ವಂಸ, ಹರಿಯಿತು 750 ಕೋಟಿ ರು ಮದ್ಯದ ಹೊಳೆ

ತಿರುವನಂತಪುರಂ, ಆಗಸ್ಟ್ 24: ಭಾರತದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯ ಎನಿಸಿರುವ ಕೇರಳದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ಮತ್ತೊಮ್ಮೆ ದಾಖಲೆ ಪ್ರಮಾಣದಲ್ಲಿ ಮದ್ಯ ಸೇವನೆ, ಮಾರಾಟ ಕಂಡಿದೆ. ಈ ಹಿಂದಿನ ದಾಖಲೆಯನ್ನು ಮಲ್ಲುಗಳು ಮುರಿದಿದ್ದಾರೆ. ಕೊವಿಡ್ 19 ಮಾರ್ಗಸೂಚಿ ಅನ್ವಯವಾಗಿ ಮಾರಾಟ, ಖರೀದಿ ಪ್ರಕ್ರಿಯೆಗೆ ಪಿಣರಾಯಿ ವಿಜಯನ್ ಸರ್ಕಾರ ಅವಕಾಶ ನೀಡಿತ್ತು.

ಕೇರಳಿಗರ ಪ್ರಮುಖ ಹಬ್ಬ ಓಣಂ ಸಂದರ್ಭದಲ್ಲಿ ಮಲ್ಲುಗಳು ಕಳೆದ ವರ್ಷ ಸರಿ ಸುಮಾರು 487 ಕೋಟಿ ರುಗಳ ಮೊತ್ತದ ಮದ್ಯ ಮಾರಾಟಕ್ಕೆ ಕಾರಣವಾಗಿದ್ದರು. ಈ ಬಾರಿ ಕೇರಳದಲ್ಲಿ 10 ದಿನಗಳ ಹಬ್ಬದ ಸಂದರ್ಭದಲ್ಲಿ ಸುಮಾರು 750 ಕೋಟಿ ರು ಗೂ ಅಧಿಕ ಮೊತ್ತದ ಮದ್ಯ ಹೋಲ್ ಸೇಲ್ ದರದಲ್ಲಿ ಮಾರಾಟವಾಗಿದೆ.

''ಕಳೆದ ವರ್ಷ ಸೆಪ್ಟೆಂಬರ್ 3 ರಿಂದ 10ರ ಅವಧಿಯಲ್ಲಿ ಸುಮಾರು 565 ಕೋಟಿ ರು ಮೌಲ್ಯದ ಮದ್ಯ ಸೇವನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 210 ಕೋಟಿ ರು ಅಧಿಕ ವ್ಯಾಪಾರ ನಡೆದಿದೆ. ಈ ವರ್ಷ ಸುಮಾರು 750 ಕೋಟಿ ರು ವ್ಯವಹಾರ ನಡೆದಿದೆ. '' ಎಂದು ಬೆವ್ಕೊ(ಉತ್ಪಾದನೆ ಹಾಗೂ ಮಾರ್ಕೆಟಿಂಗ್) ವ್ಯವಸ್ಥಾಪಕ ನಿರ್ದೇಶಕ ಯೋಗೇಶ್ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.

ಬೆವ್ಕೊ ಮೂಲಕ ಮದ್ಯ ಮಾರಾಟ

ಬೆವ್ಕೊ ಮೂಲಕ ಮದ್ಯ ಮಾರಾಟ

ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ನಡೆಸಿದ ಲೆಕ್ಕಾಚಾರದಿಂದ ಈ ಮೊತ್ತ ಸಿಕ್ಕಿದೆ. ಕೇರಳ ರಾಜ್ಯ ಅಬಕಾರಿ ನಿಗಮ(ಕೆಎಸ್ ಬಿಸಿ) ಯಿಂದ ಭಾರತೀಯರಿಂದ ತಯಾರಾದ ವಿದೇಶಿ ಮದ್ಯ(ಐಎಂ ಎಫ್ ಎಲ್) ಗಳನ್ನು ಮಾರಾಟ ಮಾಡಲಾಗುತ್ತದೆ. ಈ ವರ್ಷ ಬಿವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (Bevco) ಮೂಲಕ ಮದ್ಯ ಹಾಗೂ ಬಿಯರ್ ಮಾರಾಟ ಮಾಡಲಾಗಿದೆ. ಈ ಬಾರಿಯ ಗಳಿಕೆಯಲ್ಲಿನ 600 ಕೋಟಿ ರು ಗೂ ಮೊತ್ತ ರಾಜ್ಯ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಂದಾಯವಾಗಲಿದೆ ಎಂದು ಬೆವ್ಕೊ(ಉತ್ಪಾದನೆ ಹಾಗೂ ಮಾರ್ಕೆಟಿಂಗ್) ವ್ಯವಸ್ಥಾಪಕ ನಿರ್ದೇಶಕ ಯೋಗೇಶ್ ಗುಪ್ತಾ ಹೇಳಿದ್ದಾರೆ.

ಕೋವಿಡ್ 19 ಸಕ್ರಿಯ ಪ್ರಕರಣ ಜೊತೆಗೆ ಮದ್ಯ ಸೇವನೆ

ಕೋವಿಡ್ 19 ಸಕ್ರಿಯ ಪ್ರಕರಣ ಜೊತೆಗೆ ಮದ್ಯ ಸೇವನೆ

ದೇಶದಲ್ಲೇ ಅತಿ ಹೆಚ್ಚು ಕೋವಿಡ್ 19 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದರೂ ಕುಡುಕರ ಉತ್ಸಾಹವೇನು ಕುಂದಿರಲಿಲ್ಲ. ಕೊರೊನಾ ಲಸಿಕೆ ಪಡೆದ ಪ್ರಮಾಣ ಪತ್ರ, ಕೋವಿಡ್ ನೆಗಟಿವ್ ಪ್ರಮಾಣ ಪತ್ರ ಹಿಡಿದುಕೊಂಡು ಮದ್ಯ ಮಾರಾಟ ಮಳಿಗೆ ಮುಂದೆ ಸಾಲುಗಟ್ಟಿ ನಿಂತಿದ್ದರು. ರೀಟೈಲ್ ಮಳಿಗೆಗಳ ಮೂಲಕ ಶೇ 70ರಷ್ಟು ಮದ್ಯ ಮಾರಾಟವಾಗಿದ್ದರೆ, ಕೆಲವೇ ಕೆಲವು ಬಾರ್ ಮೂಲಕ ಬಾಟಲಿ ಮೂಲಕ ಶೇ 30ರಷ್ಟು ಮಾರಾಟ ಮಾಡಲಾಗಿದೆ.

ನಾರಾಯಣ ಗುರು ಜಯಂತಿ ದಿನ ಮದ್ಯ ಮಾರಾಟವಿರಲಿಲ್ಲ

ನಾರಾಯಣ ಗುರು ಜಯಂತಿ ದಿನ ಮದ್ಯ ಮಾರಾಟವಿರಲಿಲ್ಲ

ಸಮಾಜ ಸುಧಾರಕ ನಾರಾಯಣ ಗುರು ಜಯಂತಿ ಅಂಗವಾಗಿ ಮದ್ಯ ಮಾರಾಟ ನಿರ್ಬಂಧಿಸಲಾಗಿತ್ತು. ಹೀಗಾಗಿ ಮರುದಿನದಂದು ಮದ್ಯ ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು.

ಆನ್ ಲೈನ್ ಮಾರಾಟಕ್ಕೂ ಬೇಡಿಕೆ: ಈ ಬಾರಿ ಆನ್ ಲೈನ್ ಮಾರಾಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿತ್ತು. ತಿರುವನಂತಪುರಂ, ಎರ್ನಾಕುಲಂ ಹಾಗೂ ಕೋಯಿಕ್ಕೋಡ್ ಜಿಲ್ಲೆಗಳಲ್ಲಿ 10 ಲಕ್ಷ ರು ಮೌಲ್ಯ ಮದ್ಯ ಆನ್ ಲೈನ್/ ಆಪ್ ಆಧಾರಿತ ಮಾರಾಟ ಕಂಡಿವೆ.

ಒಂದೇ ದಿನ ದಾಖಲೆಯ 1.04 ಕೋಟಿ ರು ಮದ್ಯ ಮಾರಾಟ

ಒಂದೇ ದಿನ ದಾಖಲೆಯ 1.04 ಕೋಟಿ ರು ಮದ್ಯ ಮಾರಾಟ

ಸೆಕ್ರೆಟ್ರಿಯೆಟ್ ಸಮೀಪದ ಪವರ್ ಹೌಸ್ ರಸ್ತೆ ಸಮೀಪದ ಮಳಿಗೆಯಲ್ಲಿ ದಾಖಲೆಯ 1.04 ಕೋಟಿ ರು ಮದ್ಯ ಒಂದೇ ದಿನದಂದು ಮಾರಾಟವಾಗಿದೆ. ಅಲ್ಲದೆ, ಪ್ರತಿ ದಿನ ಸರಾಸರಿ 85 ಲಕ್ಷ ರು ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ಬಾರಿ ಈ ದಾಖಲೆ ಬರೆದಿದ್ದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡದ ಮಳಿಗೆಯಲ್ಲಿ ಈ ಬಾರಿ 79 ಲಕ್ಷ ರು ಮದ್ಯ ಮಾರಾಟವಾಗಿದೆ. ಕಣ್ಣೂರಿನ ಪರಕಂಡಿ ಮಳಿಗೆಯಲ್ಲಿ 78 ಲಕ್ಷ ರು ಮಾರಾಟವಾಗಿದೆ ಎಂದು ಬೆವ್ಕೋ ತಿಳಿಸಿದೆ.

ಅಧಿಕ ಪ್ರಮಾಣದಲ್ಲಿ ತೆರಿಗೆ ಸುಂಕ ವಿಧಿಸಲಾಗಿದೆ

ಅಧಿಕ ಪ್ರಮಾಣದಲ್ಲಿ ತೆರಿಗೆ ಸುಂಕ ವಿಧಿಸಲಾಗಿದೆ

301ಅಧಿಕೃತ ಸರ್ಕಾರಿ ಸ್ವಾಮ್ಯದ ಮಳಿಗೆಗಳಿದ್ದು, ಕಳೆದ ವರ್ಷ ಅಬಕಾರಿ ಸುಂಕ ಶೇ 10- 35ರಷ್ಟು ಏರಿಕೆ ಮಾಡಲಾಗಿತ್ತು. ಸದ್ಯ ಭಾರತದಲ್ಲಿ ಉತ್ಪಾದಿಸುವ ಮದ್ಯ IMFL ಮದ್ಯದ ಮೇಲೆ 237% ಸೇಲ್ಸ್ ತೆರಿಗೆ ಇದ್ದು, 400 ರು ವೆಚ್ಚದ ಮದ್ಯಕ್ಕೆ ಇದೇ ಪ್ರಮಾಣದ ತೆರಿಗೆ ಇದೆ. ಅದಕ್ಕಿಂತ ಹೆಚ್ಚಿನ ವೆಚ್ಚದ ಮದ್ಯಕ್ಕೆ ಶೇ 247ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿದೆ.

ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯ

ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯ

ಭಾರತದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯಗಳ ಪೈಕಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಕುಡುಕರ ರಾಜ್ಯ ಕೇರಳದ 3.34 ಕೋಟಿ ಜನಸಂಖ್ಯೆ ಪೈಕಿ 32.9 ಲಕ್ಷ ಮಂದಿ ಮದ್ಯಸೇವನೆ ಮಾಡುತ್ತಾರೆ. ಈ ಪೈಕಿ 29. 8 ಲಕ್ಷ ಪುರುಷ ಕುಡುಕರು ಹಾಗೂ 3.1 ಕುಡುಕಿಯರಿದ್ದಾರೆ. ಸುಮಾರು 5 ಲಕ್ಷ ಮಂದಿ ಪ್ರತಿನಿತ್ಯ ಅಥವಾ ಸಂಜೆ ಮದ್ಯ ಸೇವನೆ ಕಡ್ಡಾಯವಾಗಿಸಿಕೊಂಡಿದ್ದಾರೆ.

 2014ರಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

2014ರಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

ಈ ರಾಜ್ಯದಲ್ಲಿ 2014ರಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಉಮ್ಮನ್ ಚಾಂಡಿ ಸರ್ಕಾರ ಸುಮಾರು 700 ಬಾರ್ ಗಳನ್ನು ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಲಿಕ್ಕರ್ ಲಾಬಿ ಜೋರಾಗಿ, ಆಡಳಿತ ಪಕ್ಷ ಬದಲಾಗಿ ಎಲ್ ಡಿ ಎಫ್ ಸರ್ಕಾರ ಬರುತ್ತಿದ್ದಂತೆ ಮದ್ಯ ಮಾರಾಟ ಮೇಲಿನ ನಿಷೇಧ ಹಿಂಪಡೆಯಲಾಗಿದೆ. ಮದ್ಯದ ಮೇಲೆ 200% ತೆರಿಗೆ ಹೇರಲಾಗಿದ್ದರೂ ಮಾರಾಟ ಕುಸಿದಿಲ್ಲ, ಕುಡುಕರ ಸಂಖ್ಯೆ ತಗ್ಗಿಲ್ಲ.(ಮಾಹಿತಿ ಕೃಪೆ: ಪಿಟಿಐ/ಐಎಎನ್ಎಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+