ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಬೆಲೆ ಏರಿಕೆ: ಖಾಸಗಿ ಬಸ್ ಅನಿರ್ಧಿಷ್ಟಾವಧಿ ಮುಷ್ಕರ

|
Google Oneindia Kannada News

ತಿರುವನಂತಪುರಂ, ಮಾರ್ಚ್ 24: ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕವಾಗಿ ತೈಲ ಬೆಲೆ ಏರಿಳಿತವಾಗುತ್ತಿದೆ. ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಟಿಕೆಟ್ ದರ ಏರಿಕೆಗೆ ಆಗ್ರಹಿಸಿ ಬಸ್ ನಿರ್ವಾಹಕರ ಸಮನ್ವಯ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿವೆ. ಕೇರಳದಲ್ಲಿ ಇಂದಿನಿಂದ ಖಾಸಗಿ ಬಸ್‌ಗಳು ರಸ್ತೆಗಿಳಿದಿಲ್ಲ. ಕನಿಷ್ಠ ದರವನ್ನು ₹ 8 ರಿಂದ ₹ 12 ಕ್ಕೆ, ವಿದ್ಯಾರ್ಥಿ ರಿಯಾಯಿತಿಯನ್ನು ₹ 2 ರಿಂದ ₹ 6 ಕ್ಕೆ ಮತ್ತು ಪ್ರತಿ ಕಿ.ಮೀ ದರವನ್ನು ₹ 1.10 ಕ್ಕೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಕೇರಳ ರಾಜ್ಯ ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಅಧ್ಯಕ್ಷ ಸತ್ಯನ್ ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿ, ಉದ್ದೇಶಿತ ಮುಷ್ಕರದ ಕುರಿತು ಎರಡು ವಾರಗಳ ಹಿಂದೆ ಸರ್ಕಾರಕ್ಕೆ ನೋಟಿಸ್ ನೀಡಲಾಗಿತ್ತು ಮತ್ತು ಇಲ್ಲಿಯವರೆಗೆ ಯಾರೂ ಈ ವಿಷಯದ ಬಗ್ಗೆ ಚರ್ಚೆಯಲ್ಲಿ ತೊಡಗಿಲ್ಲ.

ಪರೀಕ್ಷೆಗಳು ಬರುತ್ತಿವೆ ಮತ್ತು ತರಗತಿ ನಡೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಮಾಲೀಕರು ಮುಷ್ಕರ ನಡೆಸುವುದಿಲ್ಲ ಎಂದು ಆಶಿಸುತ್ತೇನೆ ಎಂದು ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಹೇಳಿಕೆಗೆ ಸಂಬಂಧಿಸಿದಂತೆ ಸತ್ಯನ್, ಈ ರೀತಿಯ ಹೇಳಿಕೆ ನೀಡಬಾರದಿತ್ತು ಎಂದಿದ್ದಾರೆ.

Kerala Strike: Private Buses To Go Off Roads Indefinitely Against Hike In Ticket Fare

ವರದಿಗಳ ಪ್ರಕಾರ, ನಿರ್ವಾಹಕರು ಕನಿಷ್ಠ ಪ್ರಯಾಣ ದರವನ್ನು ₹ 8 ರಿಂದ ₹ 12 ಕ್ಕೆ, ವಿದ್ಯಾರ್ಥಿ ರಿಯಾಯಿತಿಯನ್ನು ₹ 2 ರಿಂದ ₹ 6 ಕ್ಕೆ ಮತ್ತು ಪ್ರತಿ ಕಿ.ಮೀ ದರವನ್ನು ₹ 1.10 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಡೀಸೆಲ್ ಬೆಲೆ ಲೀಟರ್‌ಗೆ ₹62 ಇದ್ದಾಗ ಕೊನೆಯ ಬಾರಿ ದರವನ್ನು ಪರಿಷ್ಕರಿಸಲಾಗಿತ್ತು.

ಮಾಲೀಕರ ಬೇಡಿಕೆಗಳ ಬಗ್ಗೆ ಕಳೆದ ವರ್ಷ ನವೆಂಬರ್‌ನಲ್ಲಿ ಸಾರಿಗೆ ಸಚಿವರು ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಲಾಯಿತು, ಆದರೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಮತ್ತು ಅದರ ಜವಾಬ್ದಾರಿ ಬಸ್ ಮಾಲೀಕರ ಮೇಲಲ್ಲ ಎಂದು ಅವರು ಹೇಳಿದರು.

ಸಾರ್ವಜನಿಕರ ಪ್ರಯಾಣ ದರವನ್ನು ಹೆಚ್ಚಿಸಬೇಕು ಮತ್ತು ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಿಸಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ.

Recommended Video

Hijab ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿದ ಸುಪ್ರೀಂ‌ಕೋರ್ಟ್: ಹಿಜಾಬ್ ಗೆ ಮತ್ತೆ ಹಿನ್ನಡೆ | Oneindia Kannada

ಇದಲ್ಲದೆ, ನಿರ್ವಾಹಕರು ಕಿಲೋಮೀಟರ್ ಶುಲ್ಕವನ್ನು ಈಗಿನ 90 ಪೈಸೆಯಿಂದ 1.10 ರೂ.ಗೆ ಹೆಚ್ಚಿಸುವಂತೆ ಮತ್ತು ಕೋವಿಡ್ 19 ಸಾಂಕ್ರಾಮಿಕ ಅವಧಿಗೆ ರಸ್ತೆ ತೆರಿಗೆಯನ್ನು ಮನ್ನಾ ಮಾಡಲು ಕೋರಿದ್ದಾರೆ.

English summary
Private buses in Kerala are set to go off the roads from today as the bus operators' coordination committee has announced an indefinite strike to demand increase in ticket fare in the wake of rising fuel prices. They are demanding minimum fare be hiked to ₹12 from ₹8, student concession to ₹6 from ₹2 and per km rate to ₹1.10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X