Breaking: ಅತ್ಯಾಚಾರ ಪ್ರಕರಣ, ಕೇರಳದ ಸೋಶಿಯಲ್ ಮೀಡಿಯಾ ಸ್ಟಾರ್ ಬಂಧನ
ತಿರುವನಂತಪುರಂ,ಆಗಸ್ಟ್ 06: ಕೇರಳದ ರಾಜಧಾನಿ ತಿರುವನಂತಪುರಂನ ತಂಪನೂರ್ ಪ್ರದೇಶದ ಲಾಡ್ಜ್‌ನಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಾಮಾಜಿಕ ಜಾಲತಾಣದ ಜನಪ್ರಿಯ ಕಲಾವಿದನನ್ನು ಬಂಧಿಸಲಾಗಿದೆ.
ಆರೋಪಿಯನ್ನು ಶನಿವಾರ ಬಂಧಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅದೇ ದಿನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಂಪನೂರು ಪೊಲೀಸ್ ಠಾಣೆಯ ಎಸ್‌ಎಚ್‌ಒ ಪಿಟಿಐಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ಕೆಲವು ವಾರಗಳಿಂದ ಸಂಬಂಧ ಹೊಂದಿದ್ದ ಆರೋಪಿ, ಯುವತಿಯನ್ನು ಕಾರು ಖರೀದಿಸಲು ಬರುವಂತೆ ಕೇಳಿಕೊಂಡಿದ್ದ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್. ಆರ್ ತಿಳಿಸಿದ್ದಾರೆ.

ಭೇಟಿಯಾದ ಮೇಲೆ ರಿಫ್ರೆಶ್ ಮಾಡಿಕೊಳ್ಳಲು ಲಾಡ್ಜ್‌ನಲ್ಲಿ ರೂಮ್ ತೆಗೆದುಕೊಂಡಿದ್ದಾರೆ. ಈ ವೇಳೆ ಲಾಡ್ಜ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಘಟನೆಯಿಂದ ವಿಚಲಿತರಾದ ಯುವತಿ, ಆತನ ಬಗ್ಗೆ ಆತನ ಸ್ನೇಹಿತರನ್ನು ಕೇಳಿದ್ದಾರೆ. ಅವರು ಆತ ಹಲವು ಮಹಿಳೆಯರೊಂದಿಗೆ ಅಕ್ರಮ ಸಂಬಂಧಗಳನ್ನು ಹೊಂದಿದ್ದಾರೆ. ಆತ ನಂಬಲರ್ಹ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ಮೊಬೈಲ್ ಫೋನ್‌ನಲ್ಲಿ ಯುವತಿಯ ಹಲವಾರು ವಿಡಿಯೋಗಳಿದ್ದವು ಎಂದು ಅಧಿಕಾರಿ ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್‌ಗಳನ್ನು ಆತ ಬ್ಲ್ಯಾಕ್‌ಮೇಲ್ ಮಾಡಲು ಅಥವಾ ಇನ್ನಾವುದೇ ಉದ್ದೇಶಕ್ಕೆ ಬಳಸಿಕೊಳ್ಳಲು ಇಟ್ಟುಕೊಂಡಿದ್ದಾನೆಯೇ ಎಂದು ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ಜನಪ್ರಿಯ ಕಿರು-ವೀಡಿಯೊ ಹೋಸ್ಟಿಂಗ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಆರೋಪಿ, ಹೇಗೆ ಜನಪ್ರಿಯರಾಗಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡುವ ನೆಪದಲ್ಲಿ ವಿವಾಹಿತ ಮಹಿಳೆಯರು ಸೇರಿದಂತೆ ತನ್ನ ಯುವತಿಯರಿಗೆ ಹತ್ತಿರವಾಗಿದ್ದಾನೆ ಎಂದು ಹೇಳಿದ್ದಾರೆ.
ಹೀಗೆ ಮಹಿಳೆಯರೊಂದಿಗಿನ ಖಾಸಗಿ ಕ್ಷಣಗಳನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಾರೆ ಎಂದು ಆರೋಪಿಸಲಾಗಿದ್ದು, ಇದನ್ನು ತಿಳಿಯಲು ಅವರ ಮೊಬೈಲ್ ಫೋನ್ ಅನ್ನು ಸೈಬರ್ ಸೆಲ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ..
ಈ ಅತ್ಯಾಚಾರ ಪ್ರಕರಣದ ಹೊರತಾಗಿ, ಆರೋಪಿಯು ರಾಜ್ಯ ರಾಜಧಾನಿಯ ಇತರ ಎರಡು ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಮತ್ತು ಕಳ್ಳತನದ ಆರೋಪವನ್ನು ಎದುರಿಸುತ್ತಿದ್ದಾನೆ ಎಂದು ಅಧಿಕಾರಿ ಹೇಳಿದರು. ಅವರ ಆನ್‌ಲೈನ್ ವಿಡಿಯೋಗಳಿಗೆ ಹೋಲಿಸಿದರೆ ಆರೋಪಿ ನಿಜ ಜೀವನದಲ್ಲಿ ವಿಭಿನ್ನವಾಗಿ ಕಾಣುತ್ತಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications