• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

100 ಕೋಟಿ ರು ಮೊತ್ತದ ಕ್ರಿಪ್ಟೋಕರೆನ್ಸಿ ಹಗರಣ ಬಯಲಿಗೆಳೆದ ಪೊಲೀಸರು

|
Google Oneindia Kannada News

ತಿರುವನಂತಪುರಂ, ನವೆಂಬರ್ 9: ಮನಿ ಲಾಂಡ್ರಿಂಗ್ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಭರ್ಜರಿ ಬೇಟೆ ಸಿಕ್ಕಿದೆ. ಕ್ರಿಪ್ಟೋಕರೆನ್ಸಿ ಬಳಸಿಕೊಂಡು ಮನಿ ಲಾಂಡ್ರಿಂಗ್ ಮಾಡುತ್ತಿದ್ದ ತಂಡವೊಂದನ್ನು ಕಣ್ಣೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸರಿ ಸುಮಾರು 100 ಕೋಟಿ ರು ಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ.

''ಬಂಧಿತರರನ್ನು ಮೊಹಮ್ಮದ್ ರಿಯಾಸ್, ಸಿ ಷಫೀಕ್, ಮುನವ್ವರಲಿ ಹಾಗೂ ಮೊಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ. ಕ್ರಿಪ್ಟೋಕರೆನ್ಸಿ ವ್ಯವಹಾರ ಕುದುರಿಸಿಕೊಡುವುದಾಗಿ ಹಲವರಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪ ಈ ನಾಲ್ವರ ಮೇಲಿದೆ, ಹಲವಾರು ಕೋಟಿ ರು ವಂಚಿಸಿರುವುದು ಬೆಳಕಿಗೆ ಬಂದಿದೆ,'' ಎಂದು ಕಣ್ಣೂರು ನಗರ ಠಾಣೆ ಹಿರಿಯ ಪೊಲೀಸ್ ಅಧಿಕಾರಿ ಪಿಪಿ ಸದಾನಂದನ್ ಹೇಳಿದ್ದಾರೆ. ಆದರೆ, ಈ ತಂಡದ ಮುಖಂಡ ಈ ಪ್ರಕರಣದ ಕಿಂಗ್ ಪಿನ್ ನಿಶಾದ್ ಸದ್ಯ ನಾಪತ್ತೆಯಾಗಿದ್ದಾನೆ.

ಹೇಗೆ ನಡೆದಿತ್ತು ವಂಚನೆ?: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಸ್ಥಾಪಿಸಿ,ಲಾಂಗ್ ರಿಚ್ ಟೆಕ್ನಾಲಜೀಸ್ ಹೆಸರಿನಲ್ಲಿ ನಕಲಿ ಸಂಸ್ಥೆಯ ಹೆಸರಿನಲ್ಲಿ ವೆಬ್ ತಾಣ ಸೃಷ್ಟಿಸಿ ಹೂಡಿಕೆದಾರರನ್ನು ಆಕರ್ಷಿಸಿದ್ದರು. ಆನ್ ಲೈನ್ ಮೂಲಕ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿದ್ದು, ಕ್ರಿಪ್ಟೋಕರೆನ್ಸಿ ಮೂಲಕ ಹೂಡಿಕೆ ಮಾಡಿದರೆ 2 ರಿಂದ 8% ಡಿವಿಡೆಂಡ್ ನೀಡುವುದಾಗಿ ಭರವಸೆ ನೀಡಿದ್ದರು.

ಬಂಧಿತರಲ್ಲಿ ಒಬ್ಬನ ಬ್ಯಾಂಕ್ ಖಾತೆಯಿಂದ ಭಾರಿ ಮೊತ್ತದ ಹಣ ವರ್ಗಾವಣೆಯಾಗಿದ್ದು, ಈ ಪ್ರಕರಣದ ಜಾಲ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಯಿತು ಎನ್ನಬಹುದು. ಆರೋಪಿಯೊಬ್ಬನ ಖಾತೆಯಿಂದ 40 ಕೋಟಿ ರು ಹಾಗೂ ಮತ್ತೊಬ್ಬನ ಖಾತೆಯಿಂದ 32 ಕೋಟಿ ರು ವರ್ಗಾವಣೆಯಾಗಿದೆ. ಮಿಕ್ಕ ಮೊತ್ತ ನಿಶಾದ್ ಖಾತೆಗೆ ಜಮೆಯಾಗಿದೆ.

ಈ ಹಿಂದೆ ಮಲಪ್ಪುರಂ ಜಿಲ್ಲೆಯಲ್ಲಿ ಮೊರಿಸ್ ಕಾಯಿನ್ ದಂಧೆ ಪತ್ತೆ ಹಚ್ಚಿದ್ದ ಕೇರಳ ಪೊಲೀಸರು, ಆ ಕೇಸಿನ ಫೈಲ್ ತೆಗೆದು ನೋಡಿದಾಗ, ನಿಶಾದ್ ಬ್ಯಾಂಕ್ ಖಾತೆಯಲ್ಲಿದ್ದ 34 ಕೋಟಿ ರು ಜಪ್ತಿಯಾಗಿರುವುದು ಕಂಡು ಬಂದಿದೆ. ಮಲಪ್ಪುರಂ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ನಿಶಾದ್, ಜಾಮೀನು ಪಡೆದ ಬಳಿಕ ನಾಪತ್ತೆಯಾಗಿದ್ದಾನೆ.

   ಮಂಗಳೂರಿನಲ್ಲಿ ಪದ್ಮಶ್ರೀ ಪುರಸ್ಕೃತ ಹಾಜಬ್ಬರನ್ನು ನೋಡೋದಕ್ಕೆ ನೂಕುನುಗ್ಗಲು | Oneindia Kannada

   ಮೂಲಗಳ ಪ್ರಕಾರ ನಿಶಾದ್ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನೆಲೆ ಕಂಡುಕೊಂಡಿದ್ದಾನೆ. ಸೂಕ್ತ ದಾಖಲೆ, ಸಾಕ್ಷ್ಯಾಧಾರಗಳ ಸಹಿತ ನಿಶಾದ್ ನನ್ನು ಅಲ್ಲಿಂದ ಇಲ್ಲಿಗೆ ಕರೆ ತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕಣ್ಣೂರಿನಲ್ಲಿ ಇಂಥ ದೊಡ್ಡ ಹಗರಣ ಬೆಳಕಿಗೆ ಬಂದಿದ್ದರೂ ಇಲ್ಲಿ ತನಕ ಒಬ್ಬ ಹೂಡಿಕೆದಾರ ಮಾತ್ರ ತನಗಾದ ಅನ್ಯಾಯದ ಬಗ್ಗೆ ವಿವರಿಸಿ ದೂರು ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.

   ಮಲಪ್ಪುರಂ ಪ್ರಕರಣ: ಹೂಡಿಕೆದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಮಲ್ಲಪ್ಪುರಂನ ನಿವಾಸಿ 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಈತನ ಹೆಸರು ನಿಶಾದ್ ಎಂದು ಗುರುತು ಪತ್ತೆಯಾಯಿತು. ಕಣ್ಣೂರಿನಲ್ಲಿ ಪತ್ತೆಯಾದ ಪ್ರಕರಣದ ಮುಖ್ಯ ಆರೋಪಿಯೂ ನಿಶಾದ್ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಲಾಂಗ್ ರಿಚ್ ಗ್ಲೋಬಲ್ ಪ್ರೈ ಲಿಮಿಟೆಡ್ ಹೆಸರಿನ ಬೇನಾಮಿ ಕಂಪನಿ ಮೂಲಕ ಹತ್ತು ಹಲವು ಕೋಟಿ ರುಗಳ ಕಳ್ಳ ವ್ಯವಹಾರದಲ್ಲಿ ಈತ ಭಾಗಿಯಾಗಿರುವುದು ಪತ್ತೆಯಾಗಿದೆ.

   ಚಿಟ್ಸ್ ಹಾಗೂ ಹಣ ವರ್ಗಾವಣೆ ಅಕ್ರಮ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಿಶಾದ್ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಕ್ಷಾಂತರ ಮಂದಿ ಹೂಡಿಕೆದಾರರು ಮೋಸ ಹೋಗಿರುವುದು ಕಂಡು ಬಂದಿದೆ. ಆದರೆ, ಬೆರಳೆಣಿಕೆಯಷ್ಟು ಮಂದಿ ಮಾತ್ರ ದೂರು ನೀಡಿದ್ದಾರೆ.

   ಕನಿಷ್ಠ 15, 000 ರು ಹೂಡಿಕೆ ಮಾಡಿದರೆ 300 ದಿನಗಳ ಬಳಿಕ 275 ರು ನಂತೆ ಪ್ರತಿ ದಿನಕ್ಕೆ ಸಿಗಲಿದೆ ಎಂದು ನಂಬಿಸಲಾಗಿತ್ತು. ಚೈನ್ ಮಾರ್ಕೆಟಿಂಗ್ ನಂತೆ ಇದನ್ನು ರೂಪಿಸಲಾಗಿತ್ತು. ಮೊರಿಸ್ ಕಾಯಿನ್ ಕ್ರಿಪ್ಟೋಕರೆನ್ಸಿಗೆ ಹೂಡಿಕೆ ಮೊತ್ತವನ್ನು ಬದಲಾಯಿಸಿ, ಡಿಜಿಟಲ್ ದುಡ್ಡನ್ನು ಮಾರಾಟ ಮಾಡಲಾಗುತ್ತಿತ್ತು. ವಂಚನೆ ಕಣ್ಮುಂದೆ ಇದ್ದರೂ ಸರಿಯಾದ ಸಾಕ್ಷ್ಯಾಧಾರ ಸಂಗ್ರಹಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ನಿಶಾದ್ ಕಂಪನಿ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಿಲ್ಲ. ಓಪನ್ ಟ್ರೇಡಿಂಗ್ ವ್ಯವಸ್ಥೆಯನ್ನು ಹೊಂದಿಲ್ಲ. (ಪಿಟಿಐ)

   English summary
   Kerala Police on Monday busted Rs 100 crore scam involving cryptocurrency in Kannur and arrested four.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion