ಕೇರಳದಲ್ಲಿ ನಾಗರಹಾವಿನಿಂದ ಕಚ್ಚಿಸಿ ಪತ್ನಿ ಕೊಲೆ
ತಿರುವನಂತಪುರಂ, ಮೇ 26: ಮೇ 6 ರಂದು ಕೇರಳದ ಕೊಲ್ಲಂನಲ್ಲಿ ವಿವಾಹಿತ ಮಹಿಳೆಯೊಬ್ಬರು ನಾಗರಹಾವಿನಿಂದ ಕಡಿದು ಸಾವಿಗೀಡಾಗಿದ್ದರು. ಆದರೆ, ಈ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ.
ಪೊಲೀಸರ ತನಿಖೆಯಲ್ಲಿ ಮಹಿಳೆಯ ಪತಿ ಸೂರಜ್ ಎಂಬಾತನೇ ಕೋಲೆ ಮಾಡಿದ್ದು ದೃಢವಾಗಿದೆ. ಹಣದ ಆಸೆಗೆ ನಾಗರಹಾವಿನಿಂದ ಕಚ್ಚಿಸಿ ಹೆಂಡತಿಯ ಕೊಲೆ ಮಾಡಿದ್ದನ್ನು ಸೂರಜ್ ಒಪ್ಪಿಕೊಂಡಿದ್ದಾನೆ. ಪತ್ನಿಯ ಬಳಿ ಇರುವ ಹಣ, ಬಡವೆಯನ್ನು ದೋಚಿಕೊಂಡು ಇನ್ನೊಬ್ಬಳನ್ನು ಮದುವೆಯಾಗಲು ಸೂರಜ್ ಪ್ಲಾನ್ ಮಾಡಿದ್ದ.
ತಿಂಗಳುಗಳಿಂದ ಪತ್ನಿಯನ್ನು ಹೇಗೆ ಕೊಲೆ ಮಾಡುವುದು ಎಂದು ಸಂಚು ಹಾಕಿದ್ದ. ನಾಗರಹಾವಿನಿಂದ ಕಚ್ಚಿಸಿ ಕೊಲೆ ಮಾಡಿದರೆ, ಯಾರಿಗೂ ಅನುಮಾನ ಬರುವುದಿಲ್ಲ ಎಂದು ಈ ಕೃತ್ಯ ಎಸಗಿದ್ದಾನೆ. 10 ಸಾವಿರ ರೂಪಾಯಿ ನೀಡಿ, ನಾಗರಹಾವನ್ನು ತಂದ ಸೂರಜ್, ಪತ್ನಿ ಮಲಗಿದ್ದ ಕೋಣೆಗೆ ಬಿಟ್ಟು ಅದರಿಂದ ಕಚ್ಚಿಸಿ ಕೊಲೆ ಮಾಡಿದ್ದಾನೆ.

ಅನುಮಾನದ ವೇಳೆ ವಿಚಾರಣೆ ಮಾಡಿದ ಪೊಲೀಸರಿಗೆ ಸೂರಜ್ ಸಿಕ್ಕಿ ಬಿದ್ದಿದ್ದಾನೆ. ಘಟನೆ ನಡೆದ ಕೆಲವು ದಿನಗಳ ಹಿಂದೆಯಿಂದ, ಆತನ ಮೊಬೈಲ್ ಹಿಸ್ಟರ್‌ಯಲ್ಲಿ ಹಾವಿನ ವಿಡಿಯೋಗಳು ಹೆಚ್ಚು ನೋಡಿದ್ದು, ಸುಲಭವಾಗಿ ಆರೋಪಿ ಬಲೆಗೆ ಬಿದ್ದಿದ್ದಾನೆ.
27 ವರ್ಷದ ಸೂರಜ್ ಖಾಸಗಿ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದ. 2018ರಲ್ಲಿ ಮದುವೆಯಾಗಿದ್ದು, ದಂಪತಿಗೆ ಒಂದು ವರ್ಷದ ಮಗುವಿದೆ..












Click it and Unblock the Notifications