ವಿಡಿಯೋ; ಕೇರಳದ ಉರಗ ರಕ್ಷಕ ವಾವಾ ಸುರೇಶ್‌ಗೆ ಹಾವು ಕಡಿತ; ಸ್ಥಿತಿ ಗಂಭೀರ

ತಿರುವನಂತಪುರಂ, ಫೆಬ್ರವರಿ 01; ಕೇರಳದ ಪ್ರಸಿದ್ಧ ಉರಗ ರಕ್ಷಕ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಾವಾ ಸುರೇಶ್‌ಗೆ ಹಾವು ಕಚ್ಚಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಗಂಭೀರವಾಗಿದೆ.

ಸೋಮವಾರ ಕೊಟ್ಟಾಯಂ ಸಮೀಪ ನಾಗರ ಹಾವು ರಕ್ಷಣೆ ಮಾಡುವಾಗ ಅದು ವಾವಾ ಸುರೇಶ್‌ (47)ಗೆ ಕಚ್ಚಿದೆ. ಸಚಿವ ವಿ. ಎನ್. ವಾಸನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಅವರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

"ಕೊಟ್ಟಾಯಂನ ಕುರಿಚಿ ಬಳಿ ವಾವಾ ಸುರೇಶ್‌ಗೆ ನಾಗರಹಾವು ಕಚ್ಚಿದೆ. ಅವರನ್ನು ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿದೆ" ಎಂದು ಸಚಿವ ವಿ. ಎನ್. ವಾಸನ್ ಹೇಳಿದ್ದಾರೆ.

Kerala Famous Snake Catcher Vava Suresh Sustained A Snakebite

ವಾವಾ ಸುರೇಶ್‌ ಕೇರಳದ ಪ್ರಸಿದ್ಧ ಉರಗ ರಕ್ಷಕರು. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರಿಗೆ 2.1 ಮಿಲಿನನ್ ಫಾಲೋಯರ್ಸ್‌ಗಳಿದ್ದಾರೆ. ಹಾವು ಸಂರಕ್ಷಣೆ ಮಾಡುವ ವಿಡಿಯೋವನ್ನು ಅವರು ಅಪ್ ಲೋಡ್ ಮಾಡುತ್ತಾರೆ.

ಕೊಟ್ಟಾಯಂ ಸಮೀಪದ ಜನವಸತಿ ಪ್ರದೇಶದಲ್ಲಿ ಮೂರು ದಿನದಿಂದ ನಾಗರ ಹಾವು ಸಂಚಾರ ಮಾಡುತ್ತಿತ್ತು. ಸೋಮವಾರ ಹಾವನ್ನು ರಕ್ಷಣೆ ಮಾಡುವಾಗ ಅದು ವಾವಾ ಸುರೇಶ್ ಬಲಗಾಲಿಗೆ ಕಚ್ಚಿದೆ. ತಕ್ಷಣ ಅವರನ್ನು ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಸದ್ಯ ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ವಾವಾ ಸುರೇಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆಯೂ ಹಲವು ಬಾರಿ ವಾವಾ ಸುರೇಶ್‌ಗೆ ರಕ್ಷಣೆ ಮಾಡುವಾಗ ಹಾವು ಕಚ್ಚಿತ್ತು. ಆದರೂ ಅವರು ಹಾವುಗಳ ರಕ್ಷಣಾ ಕಾರ್ಯವನ್ನು ನಿಲ್ಲಿಸಿಲ್ಲ.

ಹಾವನ್ನು ಹಿಡಿದು ಚೀಲಕ್ಕೆ ತುಂಬುವಾಗ ವಾವಾ ಸುರೇಶ್‌ ಬಲಗಾಲಿಗೆ ಹಾವು ಕಡಿದಿದೆ. ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರು ಹಾವನ್ನು ಚೀಲಕ್ಕೆ ಹಾಕಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗವಾಗ ಅವರಿಗೆ ಪ್ರಜ್ಞೆ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ವಾವಾ ಸುರೇಶ್‌ ಹಾವನ್ನು ಹಿಡಿಯುವ ವಿಡಿಯೋವನ್ನು ಸ್ಥಳೀಯರು ಮಾಡುತ್ತಿದ್ದರು. ಅವರಿಗೆ ಹಾವು ಕಚ್ಚುವುದು ಸಹ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವುಗಳ ರಕ್ಷಣೆ ಮಾಡುವ ಸಮಯದಲ್ಲಿ ವಾವಾ ಸುರೇಶ್ ಹಲವು ಬಾರಿ ಕಡಿತಕ್ಕೆ ಒಳಗಾಗಿದ್ದಾರೆ. 2020ರಲ್ಲಿ ತಿರುವನಂತಪುರಂ ಸಮೀಪ ಹಾವು ಕಡಿತಕ್ಕೆ ಒಳಗಾಗಿದ್ದರು. ಸುಮಾರು ಒಂದು ವಾರಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು.

ಗುಣಮುಖರಾಗಲು ಹಾರೈಕೆ; ಕಾಂಗ್ರೆಸ್ ನಾಯಕ ಶಶಿ ತರೂರ್ ವಾವಾ ಸುರೇಶ್ ಬೇಗ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಸುರೇಶ್‌ಗೆ ಹಾವು ಕಡಿಯುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+