ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದ ಅತಿ ಕಿರಿಯ ಅಭ್ಯರ್ಥಿ ರೇಷ್ಮಾ
ಪಥನಂತಿಟ್ಟ, ಡಿ. 16: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಪಂಚಾಯಿತಿಗೆ ಆಯ್ಕೆಯಾದ ಸಾಧನೆ ದಾಖಲಾಗಿದೆ. ಕೊನ್ನಿ ಪಂಚಾಯತಿಯಿಂದ ಆಯ್ಕೆಯಾಗಿರುವ ರೇಷ್ಮಾ ಮರಿಯಂ ರಾಯ್ ವಯಸ್ಸು 21 ವರ್ಷ ಮಾತ್ರ.
ಕೊನ್ನಿ ಆರುವಪುಳಂ ಪಂಚಾಯತಿಯ 11 ವಾರ್ಡ್ ನಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇಷ್ಮಾ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕುತೂಹಲ ಮೂಡಿತ್ತು. ನವೆಂಬರ್ 19ರಂದು ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿತ್ತು.
ಇದಕ್ಕೂ ಒಂದು ದಿನ ಮುನ್ನ ನಾಮಪತ್ರ ಸಲ್ಲಿಸಲು ಬೇಕಾದ ಕನಿಷ್ಠ ವಯಸ್ಸು 21ಕ್ಕೆ ರೇಷ್ಮಾ ಕಾಲಿರಿಸಿದರು. ಹೀಗಾಗಿ, 21 ವರ್ಷ ಒಂದು ದಿನ ವಯಸ್ಸಿನ ರೇಷ್ಮಾ ನಾಮಪತ್ರ ಸಲ್ಲಿಸಲು ಸಾಧ್ಯವಾಯಿತು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯ ಅತಿ ಕಿರಿಯ ಅಭ್ಯರ್ಥಿ ಎನಿಸಿಕೊಂಡರು.

ಕಾಂಗ್ರೆಸ್ ಬೆಂಬಲಿತ ಕುಟುಂಬ
ರೇಷ್ಮಾ ಅವರ ಕುಟುಂಬ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿತ್ತು. ಆದರೆ, ಈ ಬಾರಿ ಸಿಪಿಐ ಅಭ್ಯರ್ಥಿಯಾಗಲು ಕರೆ ಬಂದಾಗ ಸಂತಸದಿಂದ ಸ್ವೀಕರಿಸಿದರು. ಬಿರುಸಿನ ಚುನಾವಣಾ ಪ್ರಚಾರ ನಡೆಸಿ, ಜನರ ಆಶೋತ್ತರಗಳನ್ನು ಆಲಿಸಿದರು. ಜನರಲ್ಲಿ ಹೊಸ ಭರವಸೆ ಮೂಡಿಸಿದರು.

ಎಸ್ಎಫ್ಐ ಸದಸ್ಯೆ
ಕೊನ್ನಿ ವಿಎನ್ಎಸ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ರೇಷ್ಮಾ ಅವರು ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಸಕ್ರಿಯ ಸದಸ್ಯೆಯಾಗಿದ್ದಾರೆ. DYFI ಜಿಲ್ಲಾ ಘಟಕ ಸಮಿತಿಯ ಪ್ರಮುಖ ಸದಸ್ಯೆಯಾಗಿದ್ದಾರೆ. ಈ ಬಾರಿ ಪಂಚಾಯಿತಿ ಚುನಾವಣೆಯಲ್ಲಿ ಯುಡಿಎಫ್ ಹಾಗೂ ಎಲ್ ಡಿ ಎಫ್ ನಡುವೆ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿತ್ತು. ಯುವ ಅಭ್ಯರ್ಥಿಯನ್ನು ಸಿಪಿಐ ಆಯ್ಕೆ ಮಾಡಿ ಗೆದ್ದಿದೆ.

ಕೊನ್ನಿ ಆರುವಪುಳಂ ಪಂಚಾಯತಿ ಫಲಿತಾಂಶ
ಪಥನಂತಿಟ್ಟನಲ್ಲಿ 54 ಗ್ರಾಮ ಪಂಚಾಯಿತಿಗಳಿದ್ದು, ಕೊನ್ನಿ ಆರುವಪುಳಂ ಗ್ರಾಮ ಪಂಚಾಯಿತಿಯಲ್ಲಿ 15 ವಾರ್ಡ್ ಗಳಿವೆ.
ಕೊನ್ನಿ ಆರುವಪುಳಂ ಪಂಚಾಯತಿ ಫಲಿತಾಂಶ 2020: 11ನೇ ವಾರ್ಡಿನಿಂದ 21ವರ್ಷ ವಯಸ್ಸಿನ ರೇಷ್ಮಾಗೆ ಗೆಲುವು. ಎಲ್ ಡಿ ಎಫ್ ಅಭ್ಯರ್ಥಿ ರೇಷ್ಮಾಗೆ 450 ಮತಗಳು, ಪ್ರತಿಸ್ಪರ್ಧಿ ಯುಡಿಎಫ್ ಅಭ್ಯರ್ಥಿ ಸುಜಾತಾ ಮೋಹನ್ ಗೆ 380 ಮತಗಳು

ಸ್ಥಳೀಯ ಸಂಸ್ಥೆ ಚುನಾವಣೆ
941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications