ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಪದ ಬಳಸಿದ ಮಾಜಿ ಸಂಸದ

|
Google Oneindia Kannada News

ಇಡುಕ್ಕಿ, ಮಾರ್ಚ್ 30: ಕೇರಳದ ಇಡುಕ್ಕಿ ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಜಾಯ್ಸ್ ಜಾರ್ಜ್ ವಯನಾಡು ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಪದ ಬಳಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಮಹಿಳೆಯರು ರಾಹುಲ್ ಗಾಂಧಿ ಕುರಿತು ಬಹಳ ಜಾಗ್ರತೆಯಿಂದ ಇರಬೇಕು ಎಂದು ಅವರು ಹೇಳಿರುವುದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಉಡುಂಬಂಚೊಲ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ, ಸಚಿವ ಎಂಎಂ ಮಣಿ ಪರ ಎರೆಟ್ಟಯಾರ್‌ನಲ್ಲಿ ಪ್ರಚಾರ ನಡೆಸುತ್ತಿದ್ದ ಜಾಯ್ಸ್ ಜಾರ್ಜ್, 'ರಾಹುಲ್ ಗಾಂಧಿ ಮಹಿಳಾ ಕಾಲೇಜುಗಳಿಗೆ ಮಾತ್ರವೇ ಭೇಟಿ ನೀಡುತ್ತಾರೆ. ತಮ್ಮ ಸ್ನಾಯುಗಳನ್ನು ಹೇಗೆ ಬಾಗಿಸಬೇಕು ಎಂದು ಅವರು ಯುವತಿಯರಿಗೆ ಹೇಳಿಕೊಡುತ್ತಾರೆ' ಎಂದಿದ್ದಾರೆ. ರಾಹುಲ್ ಗಾಂಧಿ ಅವಿವಾಹಿತರಾಗಿರುವುದರಿಂದ ತೊಂದರೆ ಸೃಷ್ಟಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಕೇರಳ ಸಿಎಂ ಮತ್ತು ಪ್ರಧಾನಿ ಮೋದಿ ನಡುವೆ ರಹಸ್ಯ ಒಪ್ಪಂದ: ಕಾಂಗ್ರೆಸ್ ಆರೋಪಕೇರಳ ಸಿಎಂ ಮತ್ತು ಪ್ರಧಾನಿ ಮೋದಿ ನಡುವೆ ರಹಸ್ಯ ಒಪ್ಪಂದ: ಕಾಂಗ್ರೆಸ್ ಆರೋಪ

ರಾಹುಲ್ ಗಾಂಧಿ ಒಬ್ಬ ಬ್ಯಾಚುಲರ್. ಅವರು ಕಾಲೇಜು ಕ್ಯಾಂಪಸ್‌ಗಳಲ್ಲಿ ಯುವತಿಯರ ಜತೆ ಮಾತ್ರ ಸಂವಾದ ನಡೆಸಲು ಹೋಗುತ್ತಾರೆ. ಅವರೊಬ್ಬ ತೊಂದರೆ ಸೃಷ್ಟಿಗಾರ. ಹೀಗಾಗಿ ಮಹಿಳೆಯರು ಅವರ ಬಗ್ಗೆ ಎಚ್ಚರವಾಗಿರಬೇಕು ಎಂದು ಜಾಯ್ಸ್ ಹೇಳಿದ್ದಾರೆ.

Former Idukki MP Joyce George Makes Derogatory Remarks Against Congress Leader Rahul Gandhi

ಈ ಹೇಳಿಕೆ ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಜಾಯ್ಸ್ ಅವರು ತಮ್ಮದೇ ನಡತೆಯನ್ನು ತಪ್ಪಾಗಿ ಬೇರೆಯವರಿಗೂ ಅನ್ವಯಿಸಿರಬಹುದು ಎಂದು ಇಡುಕ್ಕಿ ಸಂಸದ ಡೀನ್ ಕುರಿಯಾಕೊಸೆ ಟೀಕಿಸಿದ್ದಾರೆ. 'ಜಾಯ್ಸ್ ಒಬ್ಬ ಅಶ್ಲೀಲ ಮನಸಿನ ಕೊಳಕು ವ್ಯಕ್ತಿ. ಈ ಮಟ್ಟದಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕಿಸಲು ಅವರಿಗೆ ಯಾವ ಅರ್ಹತೆ ಇದೆ?' ಎಂದು ಅವರು ಪ್ರಶ್ನಿಸಿದ್ದಾರೆ.

Recommended Video

CD lady ಹಿಂದೆ ಇದ್ಯ ಡಿಕೆ ಕೈವಾಡ! | Oneindia Kannada

ಮಣಿ ಅವರನ್ನು ಓಲೈಸಲು ಜಾಯ್ಸ್ ಪ್ರಯತ್ನಿಸುತ್ತಿದ್ದಾರೆ. ಮಣಿ ಕೂಡ ಈ ಹಿಂದೆ ಹೀಗೆಯೇ ಕೀಳು ಭಾಷೆಗಳನ್ನು ಬಳಸಿದ್ದರು. ಜಾಯ್ಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

English summary
Former Idukki MP Joyce George sparks row after making derogatoray remarks against Congress leader Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X