ಮದುವೆಯಾಗಿ 58 ವರ್ಷಗಳ ಬಳಿಕ 'ವೆಡ್ಡಿಂಗ್ ಫೋಟೋಶೂಟ್'

ತಿರುವನಂತಪುರಂ, ಅಕ್ಟೋಬರ್ 07: ಇತ್ತೀಚಿನ ಕೆಲವು ವರ್ಷಗಳಿಂದ ಮದುವೆಗಳಲ್ಲಿ ಶಾಸ್ತ್ರಗಳಿಗಿಂತ ಫೋಟೋಶೂಟ್‌ಗಳು ಹೆಚ್ಚಿವೆ. ಪ್ರತಿಯೊಂದು ಕ್ಷಣಗಳನ್ನು ಸುರಂದರವಾಗಿ ಸೆರೆಹಿಡಿಯಲಾಗುತ್ತದೆ.

ಪ್ರಿ ವೆಡ್ಡಿಂಗ್, ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಹೀಗೆ ಹಲವು ಬಗೆಯ ಫೋಟೋಶೂಟ್‌ಗಳು ಚಾಲ್ತಿಯಲ್ಲಿವೆ. ಹಾಗೆಯೇ ಇಲ್ಲೊಬ್ಬ ದಂಪತಿ ಮುವೆಯಾಗಿ 58 ವರ್ಷ ಕಳೆದ ಬಳಿಕ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಹಾಗಾದರೆ ಅದಕ್ಕೆ ಕಾರಣವೇನೆಂಬದನ್ನು ತಿಳಿಯೋಣ. ಕೇರಳದ ಈ ದಂಪತಿ ಮದುವೆಯಾಗಿ 58 ವರ್ಷಗಳು ಕಳೆದಿವೆ. ಆದರೆ ಮದುವೆಯ ಒಂದೇ ಒಂದು ಫೋಟೋ ಕೂಡ ಇರಲಿಲ್ಲ.

Elderly Couple Pose For Wedding Photoshoot After 58 Years Of Marriage

ಅವರ ಮೊಮ್ಮಗ ವೆಡ್ಡಿಂಗ್ ಫೋಟೋಗ್ರಾಫರ್ ಆಗಿದ್ದು, ತನ್ನ 80 ವರ್ಷದ ಅಜ್ಜಿ, 85 ವರ್ಷದ ಅಜ್ಜನಿಗೆ ವೆಡ್ಡಿಂಗ್ ಫೋಟೋಶೂಟ್ ಮಾಡಲು ನಿರ್ಧರಿಸಿದ್ದ.ಅವರ ಬಳಿ ವಿಚಾರಿಸಿದಾಗ ನಮ್ಮ ಮದುವೆಯಾಗಿ 58 ವರ್ಷಗಳು ಕಳೆದಿವೆ ಆದರೂ ಒಂದೇ ಒಂದು ಮದುವೆಯ ಫೋಟೊವಿಲ್ಲ ಎಂದು ಹೇಳಿಕೊಂಡಿದ್ದರು.

ಬಳಿಕ ಹಿರಿಯ ದಂಪತಿಯನ್ನು ಮುದ್ದು ಮುದ್ದಾಗಿ ಕಾಣುವಂತೆ ಮಾಡಿ, ವಧುವರರಂತೆ ಶೃಂಗರಿಸಲಾಯಿತು. ಅಜ್ಜ ಕಪ್ಪು ಸ್ಯೂಟ್‌ನಲ್ಲಿ ಅಜ್ಜಿ ಬಿಳಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+