ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಒಂದೇ ಕುಟುಂಬದ 5 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ತಿರುವನಂತಪುರಂ, ಮಾರ್ಚ್ 8: ಇಟಲಿಯಿಂದ ಕೇರಳಕ್ಕೆ ಬಂದ ಐದು ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತಂತೆ ಮಾಹಿತಿ ನೀಡಿದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಒಂದೇ ಕುಟುಂಬದ ಐವರಿಗೆ ಕೋವಿಡ್ 19 ಪಾಸಿಟಿವ್ ಎಂಬ ಅಂಶ ಬೆಳಕಿಗೆ ಬಂದಿದೆ.

ಕೇರಳದ ಪಥನಂತ್ತಿಟ್ಟ ಜಿಲ್ಲೆಯ ಐವರ ಪೈಕಿ ಮೂವರು ಇಟಲಿಯಿಂದ ಇತ್ತೀಚೆಗೆ ಹಿಂತಿರುಗಿದ್ದಾರೆ. ಇನ್ನಿಬ್ಬರು ಅವರ ಸಂಬಂಧಿಕರಾಗಿದ್ದಾರೆ. ಫೆಬ್ರವರಿ 29 ರಂದು ವೆನಿಸ್‌ನಿಂದ ಕತಾರ್ ಏರ್‌ವೇಸ್ ವಿಮಾನದ ಮೂಲಕ ಕೇರಳಕ್ಕೆ ಆಗಮಿಸಿದ್ದರು. ಪ್ರಯಾಣ ಮಧ್ಯೆ ದೋಹಾದಲ್ಲಿ ಒಂದೂವರೆ ಗಂಟೆಗಳ ವಿಮಾನ ನಿಲುಗಡೆಯಾಗಿತ್ತು ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!

ಶನಿವಾರದಂದು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದ ಈ ಐವರ ಮನ ಓಲೈಕೆ ಮಾಡಿ, ಪರೀಕ್ಷೆಗಳನ್ನು ಮಾಡಿದ ಬಳಿಕ ಪಾಸಿಟಿವ್ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಕೇರಳದಲ್ಲೇ ಮೊದಲ ಬಾರಿಗೆ ಮೂವರಿಗೆ ಕೊರೊನಾವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ವುಹಾನ್ ನಿಂದ ಬಂದ ಮೂವರಿಗೆ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಆದರೆ, ಮೂವರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.

Coronavirus update: Five more people test positive for COVID-19 in Kerala

ಕೊರೊನಾದಿಂದ ವಿಮಾನ ಸಂಸ್ಥೆಗಳಿಗಾದ ನಷ್ಟ ಎಷ್ಟು? ಕೊರೊನಾದಿಂದ ವಿಮಾನ ಸಂಸ್ಥೆಗಳಿಗಾದ ನಷ್ಟ ಎಷ್ಟು?

ಕ್ಯೂಆರ್ 126 ಮತ್ತು ಕ್ಯೂಆರ್ 124 ವಿಮಾನದಲ್ಲಿ ಪ್ರಯಾಣಿಸಿದ್ದರೆ, ಈ ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಬೇಕು ಅಂಥ ಮಾಧ್ಯಮಗಳ ಮೂಲಕ ಕೆಕೆ ಶೈಲಜಾ ಮನವಿ ಮಾಡಿಕೊಂಡಿದ್ದಾರೆ.

English summary
Five more people from Kerala have tested positive for coronavirus, Health minister, K K Shailaja said on Sunday. All the five hail from Pathnamthitta district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X