ಶಬರಿಮಲೆ ವಿವಾದ: ರೆಹನಾ ಫಾತಿಮಾರನ್ನು ವರ್ಗಾವಣೆ ಮಾಡಿದ ಬಿಎಸ್‌ಎನ್‌ಎಲ್
ಕೊಚ್ಚಿ, ಅಕ್ಟೋಬರ್ 24: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ, ಬಿಎಸ್‌ಎನ್‌ಎಲ್ ಉದ್ಯೋಗಿ ರೆಹನಾ ಫಾತಿಮಾ ಅವರನ್ನು ಪಳರಿವಟ್ಟಂ ಟೆಲಿಫೋನ್ ಎಕ್ಸ್‌ಚೇಂಜ್‌ಗೆ ವರ್ಗಾವಣೆ ಮಾಡಲಾಗಿದೆ.
ಕೊಚ್ಚಿಯ ಬೋಟ್ ಜೆಟ್ಟಿ ಶಾಖೆಯಲ್ಲಿ ಗ್ರಾಹಕ ವ್ಯವಹಾರಗಳ ವಿಭಾಗದಲ್ಲಿನ ದೂರವಾಣಿ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿರುವ ಫಾತಿಮಾ, ಅವರನ್ನು ಗ್ರಾಹಕರ ಸಂಪರ್ಕದ ಅಗತ್ಯ ಬೀಳದ ಪಳರಿವಟ್ಟಂ ಶಾಖೆಗೆ ವರ್ಗಾಯಿಸಲಾಗಿದೆ.
ಆದರೆ, ಅವರು ಕರ್ತವ್ಯ ಲೋಪ ಎಸಗಿಲ್ಲ ಎಂದು ಮೂಲಗಳು ತಿಳಿಸಿವೆ.

ಶಬರಿಮಲೆಯ ಕರ್ಮ ಸಮಿತಿಯು ಮಂಗಳವಾರ ಫಾತಿಮಾ ಅವರನ್ನು ಕೆಲಸದಿಂದ ತೆಗೆದುಹಾಕುವಂತೆ ಆಗ್ರಹಿಸಿ ಪಳರಿವಟ್ಟಂ ಬಿಎಸ್‌ಎನ್‌ಎಲ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿತ್ತು.
ಲಕ್ಷಾಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಕಾರಣಕ್ಕೆ ಫಾತಿಮಾ ಅವರನ್ನು ಕೇರಳ ಮುಸ್ಲಿಂ ಜಮಾತ್ ಸಮಿತಿಯು ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದೆ.












Click it and Unblock the Notifications