• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆ ಅಯ್ಯಪ್ಪನಿಗೆ ಚಿನ್ನ ಲೇಪಿತ ದ್ವಾರಪಾಲಕರನ್ನಿತ್ತ ಬೆಂಗಳೂರಿನ ಭಕ್ತ

|

ಬೆಂಗಳೂರು ಸೆ 13: ನಗರದ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರಾದ ಹಲಸೂರಿನ ಉದ್ಯಮಿ ವಿನೀತ್‌ ಜೈನ್‌ ಅವರು ಕೇರಳ ರಾಜ್ಯದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ದ್ವಾರಪಾಲಕರು ಮತ್ತು ಎರಡು ಗೋಡೆಗೆ ಚಿನ್ನಲೇಪನ ಮಾಡಿ ಸಮರ್ಪಿಸಿದ್ದಾರೆ.

ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ಭಕ್ತರಾದ ಹಲಸೂರಿನ ಉದ್ಯಮಿ ವಿನೀತ್‌ ಜೈನ್‌ ಅವರು ಸುಮಾರು 50 ಚದರಡಿಯ ವಿಸ್ತೀರ್ಣದ ದ್ವಾರಪಾಲಕರು ಮತ್ತು ಗೋಡೆಗೆ ಚಿನ್ನದ ಲೇಪನ ಮಾಡಿಸಿ ಅದನ್ನು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ತಿರುಓಣಂ ಹಬ್ಬದ ದಿನ ಅಳವಡಿಸಲಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರು ಈ ಚಿನ್ನಲೇಪಿತ ದ್ವಾರಪಾಲಕರು ಮತ್ತು ಗೋಡೆಯನ್ನು ಮಾಡಿಸಿದ್ದರು. ಆದರೆ, ಇತ್ತೀಚೆಗೆ ದೇವಸಂನ ಆಡಳಿತ ಮಂಡಳಿ ಸದಸ್ಯರೊಬ್ಬರಿಗೆ ಕನಸಿನಲ್ಲಿ ಬಂದ ಅಯ್ಯಪ್ಪ ಸ್ವಾಮಿ ದ್ವಾರಪಾಲಕರು ಮತ್ತು ಗೋಡೆಯ ಚಿನ್ನದ ಲೇಪನವನ್ನು ಬದಲಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬದಲಾವಣೆಗೆ ನಿರ್ಧರಿಸಿದ್ದರು. ಅದರಂತೆ ಬೆಂಗಳೂರಿನ ಶ್ರೀರಾಂಪುರ ಅಯ್ಯಪ್ಪ ಸ್ವಾಮಿ ದೇವಾಲಯದ ನಾಲ್ವರು ಭಕ್ತರು ಸ್ವಾಮಿಯ ಈ ಕೈಂಕರ್ಯ ನೆರವೇರಿಸಿದ್ದಾರೆ.

ಚೆನ್ನೈನಲ್ಲಿ ಚಿನ್ನದ ಲೇಪನವನ್ನು ಮಾಡಿಸಲಾಗಿದೆ

ಚೆನ್ನೈನಲ್ಲಿ ಚಿನ್ನದ ಲೇಪನವನ್ನು ಮಾಡಿಸಲಾಗಿದೆ

ಹೈದ್ರಾಬಾದ್‍ನಲ್ಲಿ ಕಾಪರ್ ಪ್ಲೇಟ್ ಮಾಡಿಸಲಾಗಿದ್ದು, ಚೆನ್ನೈನಲ್ಲಿ ಚಿನ್ನದ ಲೇಪನವನ್ನು ಮಾಡಿಸಲಾಗಿದೆ. ಇದರ ಒಂದು ವಿಶೇಷವೆಂದರೆ, ಸಾಮಾನ್ಯವಾಗಿ ಚಿನ್ನದ ಲೇಪನವನ್ನು ಪಾದರಸದಲ್ಲಿ ಮಾಡಲಾಗುತ್ತದೆ. ಇದರಿಂದ ಲೇಪನ ಮಾಡಿದ ಲೋಹದಿಂದ ಚಿನ್ನವನ್ನು ಬೇರ್ಪಡಿಸುವುದು ಕಷ್ಟವಾಗುತ್ತದೆ. ಆದರೆ, ಈಗ ಭಕ್ತರ ಸಮೂಹ ಮಾಡಿಸಿರುವ ಪ್ಲೇಟ್‍ಗಳಲ್ಲಿ ಚಿನ್ನವನ್ನು ಬೇರ್ಪಡಿಸಬಹುದಾದ ತಂತ್ರಜ್ಞಾನದ ಮೂಲಕ ಲೇಪನ ಮಾಡಲಾಗಿದೆ. ಅಂದರೆ ಎಲೆಕ್ಟ್ರಿಕ್ ತಂತ್ರಜ್ಞಾನದಿಂದ ಲೇಪನ ಮಾಡಲಾಗಿದೆ.

ಚಿನ್ನವನ್ನು ಬೇರ್ಪಡಿಸಿ ಬಳಸಬಹುದು

ಚಿನ್ನವನ್ನು ಬೇರ್ಪಡಿಸಿ ಬಳಸಬಹುದು

ಭವಿಷ್ಯದಲ್ಲಿ ದೇವಾಲಯದ ಆಡಳಿತ ಮಂಡಳಿ ಇದರ ಬದಲಾಗಿ ಮತ್ತೊಂದು ಲೇಪನ ಮಾಡಿಸಲು ನಿರ್ಧಾರ ಕೈಗೊಂಡರೆ ಇದರಲ್ಲಿನ ಚಿನ್ನವನ್ನು ಬೇರ್ಪಡಿಸಿ ಬೇರೊಂದು ಕಾರ್ಯಕ್ಕೆ ಬಳಸಬಹುದಾಗಿದೆ ಎಂದು ಅಯ್ಯಪ್ಪ ಸ್ವಾಮಿ ಭಕ್ತರಾದ ಬೆಂಗಳೂರಿನ ಹಲಸೂರಿನ ವಿನೀತ್‌ ಜೈನ್‌ ಅವರು ತಿಳಿಸಿದರು.

ಹಲಸೂರಿನ ಉದ್ಯಮಿ ವಿನೀತ್‌ ಜೈನ್‌

ಹಲಸೂರಿನ ಉದ್ಯಮಿ ವಿನೀತ್‌ ಜೈನ್‌

ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ಭಕ್ತರಾದ ಹಲಸೂರಿನ ಉದ್ಯಮಿ ವಿನೀತ್‌ ಜೈನ್‌ ಅವರು ಚಿನ್ನ ಲೇಪಿತ ದ್ವಾರಪಾಲಕರು ಮತ್ತು ಗೋಡೆಯ ಪ್ಲೇಟ್‍ಗಳನ್ನು ಅಯ್ಯಪ್ಪ ಸ್ವಾಮಿಗೆ ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಚಿನ್ನ ಲೇಪಿತ ಬಾಗಿಲು ಹಾಗೂ ವಾಸಕಲ್ಲನ್ನು ಕರ್ನಾಟಕದ ಭಕ್ತರೊಬ್ಬರು ಮಾಡಿಸಿಕೊಟ್ಟಿದ್ದರು. ಈಗ ಬಾಗಿಲಿನ ಅಕ್ಕ ಪಕ್ಕದ ಎರಡೂ ದ್ವಾರಪಾಲಕರು ಹಾಗೂ ಗೋಡೆಯನ್ನು ಕರ್ನಾಟಕ ರಾಜ್ಯದ ವಿನೀತ್‌ ಜೈನ್‌ ಚಿನ್ನಲೇಪಿತ ಮಾಡಿ ಸಮರ್ಪಣೆ ಮಾಡಿರುವುರಿಂದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯ ಮುಂಭಾಗವನ್ನು ಕರ್ನಾಟಕ ರಾಜ್ಯದವರೇ ಚಿನ್ನಲೇಪಿತ ಗೊಳಿಸಿದಂತಾಗಿದೆ.

ಓಣಂ ದಿನ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅರ್ಪಣೆ

ಓಣಂ ದಿನ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅರ್ಪಣೆ

ಓಣಂ ದಿನ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ತೆರಳಿದ ನಾಲ್ವರೂ ಭಕ್ತರು ದೇವಾಲಯಕ್ಕೆ ಈ ಚಿನ್ನ ಲೇಪಿತ ದ್ವಾರಪಾಲಕರು ಮತ್ತು ಗೋಡೆಯ ಪ್ಲೇಟ್‍ಗಳನ್ನು ಸಮರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಸೇರಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮತ್ತು ಸುಮಾರು ಎರಡೂವರೆ ಟನ್‍ನಷ್ಟು ಸಿಹಿಯನ್ನೂ ವಿತರಿಸಲಾಯಿತು.

English summary
Bengaluru devotee businessman Vineeth Jain and others offered Golden plates and Dwarapalakas to Sabarimala Ayyappa temple in Kerala,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X