ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರಕ್ಕೆ ತಿರುಗಿದ ಕೇರಳ ಬಂದ್‌: ಶಬರಿಮಲೆ ಬೂದಿ ಮುಚ್ಚಿದ ಕೆಂಡ

|
Google Oneindia Kannada News

ತಿರುವನಂತಪುರಂ, ಜನವರಿ 03: ಶಬರಿಮಲೆಗೆ ಇಬ್ಬರು ನಡುವಯಸ್ಸಿನ ಹೆಣ್ಣುಮಕ್ಕಳು ಪ್ರವೇಶಿಸಿದ್ದನ್ನು ವಿರೋಧಿಸಿ ಇಂದು ಕರೆ ನೀಡಿದ್ದ ಬಂದ್‌ನಲ್ಲಿ ಹಿಂಸಾಚಾರ ನಡೆಯಿತು.

ಬಿಜೆಪಿಯ ನಾಲ್ಕು ಕಾರ್ಯಕರ್ತರಿಗೆ ಚಾಕು ಇರಿಯಲಾಗಿದೆ. ಒಬ್ಬ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಹಲವು ಸಿಪಿಐಎಂ ಕಾರ್ಯಕರ್ತರಿಗೂ ಗಾಯಗಳಾಗಿವೆ. ಹಲವೆಡೆ ಬಿಜೆಪಿ ಮತ್ತು ಸಿಪಿಐಎಂ ಕಾರ್ಯಕರ್ತರ ನಡುವೆ ಗಲಾಟೆಗಳು ನಡೆದವು.

ಮತ್ತೆ ರಣರಂಗವಾದ ಶಬರಿಮಲೆ, ಇಂದು ಕೇರಳ ಬಂದ್!ಮತ್ತೆ ರಣರಂಗವಾದ ಶಬರಿಮಲೆ, ಇಂದು ಕೇರಳ ಬಂದ್!

ಮೊನ್ನೆ ಇಳಿ ರಾತ್ರಿ 3:45 ರ ವೇಳೆಗೆ ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದಕ್ಕೆ ಅಯ್ಯಪ್ಪ ದೇವಾಲಯವನ್ನು ಶುದ್ಧೀಕರಿಸಲಾಗಿತ್ತು. ಇದನ್ನು ಸಿಎಂ ಪಿಣರಾಯಿ ವಿಜಯನ್ ಅವರು ತೀವ್ರವಾಗಿ ವಿರೋಧಿಸಿದ್ದಾರೆ.

Ayyappa issue: Sabarimala bandh turned into violence

ಸುಪ್ರಿಂಕೋರ್ಟ್‌ ತೀರ್ಪು ಇಷ್ಟವಾಗಲಿಲ್ಲವೆಂದರೆ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರೇ ರಾಜೀನಾಮೆ ನೀಡಲಿ ಎಂದು ಪಿಣರಾಯಿ ವಿಜಯನ್ ಹೇಳಿದರು.

ಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂ

ಕೇರಳದಲ್ಲಿ ಶಬರಿಮಲೆ ವಿವಾದದಿಂದಾಗಿ ಬುಗಿಲೆದ್ದಿರುವ ಹಿಂಸಾಚಾರದಿಂದಾಗಿ ಕರ್ನಾಟಕ ಸಾರಿಗೆ ಸಂಸ್ಥೆಯು ಕೇರಳಕ್ಕೆ ಕರ್ನಾಟಕ ಸಾರಿಗೆ ಬಸ್‌ ತೆರಳುತ್ತಿಲ್ಲ, ಖಾಸಗಿ ಬಸ್‌ಗಳೂ ಸಹ ತೆರಳುತ್ತಿಲ್ಲ.

ಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳು ಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳು

ರಾತ್ರೋ ರಾತ್ರಿ ಶಬರಿಮಲೆಗೆ ತೆರಳಿದ ಬಿಂದು ಮತ್ತು ಕನಕದುರ್ಗ ಅವರ ಬಗ್ಗೆ ಹಲವು ಮಾಹಿತಿಗಳು ಇಂದು ಹೊರಬಿದ್ದವು. ಇಬ್ಬರಲ್ಲಿ ಬಿಂದು ದಲಿತ ಸಮುದಾಯದವರಾಗಿದ್ದರೆ, ಕನಕದುರ್ಗ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಇಬ್ಬರೂ ಶಬರಿಮಲೆಗೆ ತೆರಳುವ ಮುಂಚೆ ಕೊಡಗಿನ ವಿರಾಜಪೇಟೆಯಲ್ಲಿ ತಂಗಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.

English summary
Sabarimala bandh turned into violence. Several BJP and CPIM party workers gets injuired. One BJP paty worker died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X