ನರ್ಸ್ ಕಿವಿ ಕತ್ತರಿಸಿದ ಆಂಬುಲೆನ್ಸ್ ಚಾಲಕ, ಕಾರಣವೇನು?
ತಿರುವನಂತಪುರಂ, ಜೂನ್ 1: ಕೋಪದಲ್ಲಿ ಆಂಬುಲೆನ್ಸ್ ಚಾಲಕನೊಬ್ಬ ನರ್ಸ್ ಮೇಲೆ ದಾಳಿ ನಡೆಸಿ ಅವರ ಕಿವಿ ಕತ್ತರಿಸಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
ನರ್ಸ್ ಮೇಲೆ ಹಲ್ಲೆ ನಡೆಸಿ ಹರಿತವಾದ ಆಯುಧದಿಂದ ಆಕೆಯ ಕಿವಿಯನ್ನು ಕತ್ತರಿಸಿದ್ದಾನೆ. ಗಸ್ತು ತಿರುಗುತ್ತಿದ್ದ ಪೊಲೀಸರು ಇದನ್ನು ನೋಡಿ ತಕ್ಷಣವೇ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆಂಬುಲೆನ್ಸ್ ಚಾಲಕನನ್ನು ನಿತಿನ್ ಎಂದು ಗುರತಿಸಲಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಆಕೆಯ ಕಿವಿ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ನಿತಿನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಚಾಲಕ ಹಾಗೂ ನರ್ಸ್ ಮೊದಲಿನಿಂದಲೂ ಪರಿಚಯವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಯಾವುದೋ ಹಳೆಯ ದ್ವೇಷಕ್ಕೆ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications