• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರೆ ನಗ್ನ ದೇಹದ ಮೇಲೆ ಚಿತ್ರಕಲೆ: ಪೊಲೀಸರಿಗೆ ರೆಹನಾ ಶರಣು

|

ಕೊಚ್ಚಿ, ಆ.9: ಅರೆ ನಗ್ನ ದೇಹದ ಮೇಲೆ ಚಿತ್ರಕಲೆ ಬಿಡಿಸಲು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡ ಆರೋಪ ಹೊತ್ತುಕೊಂಡಿರುವ ಕಾರ್ಯಕರ್ತೆ ರೆಹನಾ ಫಾತಿಮಾ ಅವರು ಕೊಚ್ಚಿ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹನಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕೊಚ್ಚಿ ದಕ್ಷಿಣ ವಿಭಾಗದ ಆಯುಕ್ತರ ಕಚೇರಿಗೆ ಬಂದು ಶರಣಾದ ರೆಹನಾ ಫಾತಿಮಾರನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ಕೊಚ್ಚಿ ಪೊಲೀಸರು ಹೇಳಿದರು.

ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ

ರೆಹನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನೀಡದಿರುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ರೆಹನಾ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿಆರ್ ಗವಾಯಿ ಹಾಗೂ ಕೃಷ್ಣಮುರಾರಿ ಅವರು ತಿರಸ್ಕರಿಸಿದ್ದರು.

ಮಕ್ಕಳನ್ನು ಬಳಸಿಕೊಂಡು ಅರೆ ನಗ್ನ ದೇಹದ ಮೆಲೆ 14 ವರ್ಷ ಹಾಗೂ 8 ವರ್ಷ ವಯಸ್ಸಿನ ಮಕ್ಕಳಿಂದ ಚಿತ್ರಕಲೆ ಪೇಂಟ್ ಮಾಡಿಸಿಕೊಂಡ ವಿಡಿಯೋ ಆಧಾರದ ಮೇಲೆ ರೆಹನಾ ಫಾತಿಮಾ ವಿರುದ್ಧ ಕೊಚ್ಚಿ ಸೈಬರ್ ಡೋಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೋಸ್ಕೊ ಕಾಯ್ದೆ 2012, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಹಾಗೂ ಅಪ್ರಾಪ್ತರ ಸಂರಕ್ಷಣಾ ಕಾಯ್ದೆ 2015 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಅಯ್ಯಪ್ಪ ದೇಗುಲ ಪ್ರವೇಶ, ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ನಿಂದಾಗಿ ಪೊಲೀಸರಿಂದ ಬಂಧನ, ವಿಚಾರಣೆ ಎದುರಿಸಿದ್ದ ಫಾತಿಮಾರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿತ್ತು. ಆದರೆ, ಹುದ್ದೆಯಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ, ಈಗ ಕೊರೊನಾವೈರಸ್ ಲಾಕ್ಡೌನ್ ನಡುವೆ ಉದ್ಯೋಗದಿಂದ ಪರೋಕ್ಷವಾಗಿ ತೆಗೆದು ಹಾಕಲಾಗಿದೆ.

English summary
Controversial activist Rehana Fathima surrendered before the police here on Saturday, a day after the Supreme Court dismissed her anticipatory bail plea in cases against her for circulating a video in which she was semi-nude, allowing her minor children to paint on her body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X