ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ 3/4 ರಷ್ಟು ಭಾಗದ ಜನರು ಕೋವಿಡ್‌ಗೆ ಒಡ್ಡಿಕೊಂಡಿದ್ದಾರೆ: ಸೆರೊ ಸರ್ವೇ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್‌ 24: ಆರೋಗ್ಯ ಇಲಾಖೆಯು ಕೇರಳದಲ್ಲಿ ಸೆರೊ ಸರ್ವೇಯನ್ನು ನಡೆಸಿದೆ. ಈ ಸೆರೊ ಸರ್ವೇಯ ಪ್ರಕಾರ ಕೇರಳ ರಾಜ್ಯದ 3/4 ಅಂದರೆ ಶೇಕಡ 70 ರಷ್ಟು ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಒಡ್ಡಿಕೊಂಡಿದ್ದಾರೆ ಎಂದು ಕಂಡು ಬಂದಿದೆ.

ಸೆರೊ ಸರ್ವೇಯ ಪ್ರಕಾರ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್‌ ಲಸಿಕೆ ಪಡೆಯದ ಶೇಕಡ 70.01 ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿ ಆಗಿದೆ. ಅದರ ಅರ್ಥ ಅಷ್ಟು ಮಂದಿಗೂ ಕೋವಿಡ್‌ ಸೋಂಕು ತಗುಲಿದೆ ಎಂದು ಅರ್ಥ. ಇನ್ನು ಕೇರಳದ ಅಧಿಕೃತ ಮಾಹಿತಿಯ ಪ್ರಕಾರ ಕೇರಳದಲ್ಲಿ 48.88 ಲಕ್ಷ ಮಂದಿಗೆ ಕೊರೊನಾ ಸೋಂಕು ವೈರಸ್‌ ತಗುಲಿದೆ.

ತಮಿಳುನಾಡಿನ 70% ಜನಸಂಖ್ಯೆ ಕೊರೊನಾಗೆ ಒಡ್ಡಿಕೊಂಡಿದೆ; ಸೆರೊ ಸರ್ವೇತಮಿಳುನಾಡಿನ 70% ಜನಸಂಖ್ಯೆ ಕೊರೊನಾಗೆ ಒಡ್ಡಿಕೊಂಡಿದೆ; ಸೆರೊ ಸರ್ವೇ

ಕೇರಳ ಆರೋಗ್ಯ ಇಲಾಖೆಯು 847 ವಯಸ್ಕರ ಪ್ರತಿಕಾಯ ಪರೀಕ್ಷೆಯನ್ನು ಮಾಡಿದೆ. ಈ ಸಂದರ್ಭದಲ್ಲಿ ಈ ಪೈಕಿ 593 ಮಂದಿಯಲ್ಲಿ ಸೆರೊಪಾಸಿಟಿಟ್‌ ಕಂಡು ಬಂದಿದೆ. ಅಂದರೆ ಪ್ರತಿಕಾಯ ಇದೆ ಎಂದು ಕಂಡು ಬಂದಿದೆ. ವ್ಯಾಕ್ಸಿನೇಷನ್ ಮೂಲಕ ಅಥವಾ ರೋಗಕ್ಕೆ ತುತ್ತಾಗುವ ಮೂಲಕ ವೈರಸ್‌ಗೆ ಒಡ್ಡಿಕೊಂಡವರನ್ನು ಸೆರೋಪಾಸಿಟಿವ್ ಎಂದು ಪರಿಗಣಿಸಲಾಗುತ್ತದೆ.

70 PC of Kerala population exposed to coronavirus, finds Sero survey

ಇನ್ನು ಈ ಸಂದರ್ಭದಲ್ಲೇ ಈ ಹಿಂದೆ ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರಲ್ಲಿ ಶೇಕಡ 5 ರಷ್ಟು ಮಂದಿಯಲ್ಲಿ ವೈರಸ್‌ ವಿರುದ್ಧ ಸಾಕಷ್ಟು ಪ್ರತಿಕಾಯವನ್ನು ಹೊಂದಿಲ್ಲ ಎಂದು ಅಧ್ಯಯನವು ಕಂಡು ಹಿಡಿದಿದೆ. ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾದ ಕೆಲವೇ ದಿನಗಳ ನಂತರ ಆ ಜನರಲ್ಲಿ ಪ್ರತಿಕಾಯಗಳು ನಾಶವಾಗಿದೆ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್‌ ಸೋಂಕಿಗೆ ಒಳಗಾದ ಶೇಕಡ 95.55 ಮಂದಿಯಲ್ಲಿ ಪ್ರತಿಕಾಯಗಳು ಪತ್ತೆಯಾಗಿದೆ. ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗದ ಶೇಕಡ 81.7 ರಷ್ಟು ಮಂದಿಯಲ್ಲಿ ಪ್ರತಿಕಾಯ ಕಂಡು ಬಂದಿದೆ. ಇನ್ನು ಆರೋಗ್ಯ ಇಲಾಖೆಯು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದ ಶೇಕಡ 89.92 ಜನರಲ್ಲಿ ಪ್ರತಿಕಾಯಗಳು ಕಂಡು ಬಂದಿದೆ ಎಂದು ಪತ್ತೆಹಚ್ಚಿದೆ. ಇನ್ನುಳಿದ ಮಂದಿಯಲ್ಲಿ ಪ್ರತಿಕಾಯಗಳ ಕೊರತೆಯು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಬೂಸ್ಟರ್‌ ಡೋಸ್‌ನ ಅಗತ್ಯವನ್ನು ಒತ್ತಿಹೇಳಿದೆ.

ಕೇರಳ ಸೆರೊಸರ್ವೇ; 82% ಮಂದಿಯಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಕೇರಳ ಸೆರೊಸರ್ವೇ; 82% ಮಂದಿಯಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿ

ಇನ್ನು ಒಂದು ಡೋಸ್‌ ಪಡೆದ ಜನರ ಪೈಕಿ ಶೇಕಡ 81.7 ಮಂದಿ ಸೆರೊಪಾಸಿಟಿವ್‌ ಆಗಿದ್ದಾರೆ. ಇನ್ನು ಕೊರೊನಾ ವೈರಸ್‌ ಸೋಂಕಿಗೆ ಒಳಗಾದ ಜನರ ಪ್ರಾಥಮಿಕ ಸಂಪರ್ಕ ಹೊಂದಿದ್ದವರಲ್ಲಿ ಶೇಕಡ 88.02 ರಷ್ಟು ಕೊರೊನಾ ವೈರಸ್‌ ಸೋಂಕು ದೃಢಪಟ್ಟಿಲ್ಲ. ಸಮೀಕ್ಷೆಯು ಜಿಲ್ಲೆಗಳ ನಡುವಿನ ಸಿರೊಪ್ರೆವೆಲೆನ್ಸ್ ದರದಲ್ಲಿ ಹೆಚ್ಚಿನ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ. ಪತ್ತನಂತಿಟ್ಟದಲ್ಲಿ ಅತೀ ಹೆಚ್ಚಿ ಸೆರೊಪಾಸಿಟಿವಿಟಿ ಕಂಡು ಬಂದಿದೆ. ಅಂದರೆ ಶೇಕಡ 92.35 ಮಂದಿಯಲ್ಲಿ ಸೆರೊಪಾಸಿಟಿವಿಟಿ ಕಂಡು ಬಂದಿದೆ. ವಯನಾಡಿನಲ್ಲಿ ತೀರಾ ಕಡಿಮೆ ಸೆರೊಪಾಸಿಟಿವಿಟಿ ಇದೆ. ಅಂದರೆ ವಯನಾಡಿನಲ್ಲಿ 70.76 ಶೇಕಡ ಪಾಸಿಟಿವಿಟಿ ಇದೆ. ವೈರಾಲಜಿಸ್ಟ್‌ಗಳು ಜಿಲ್ಲೆಗಳ ನಡುವಿನ ಸೆರೊಪಾಸಿಟಿವಿಟಿ ದರದಲ್ಲಿನ ಅಗಾಧ ವ್ಯತ್ಯಾಸವನ್ನು "ಅಸಾಮಾನ್ಯ" ಎಂದು ಕರೆದಿದ್ದಾರೆ.

ವಯಸ್ಸುವಾರು ವಿಭಾಗ

ಇನ್ನು ವಯಸ್ಕರಲ್ಲಿ ಶೇಕಡ 82.6 ರಷ್ಟು ಮಂದಿಯಲ್ಲಿ ಪ್ರತಿಕಾಯ ಕಂಡು ಬಂದಿದ್ದು ಮಕ್ಕಳಲ್ಲಿ ಶೇಕಡ 40.2 ರಷ್ಟು ಪ್ರತಿಕಾಯ ಕಂಡು ಬಂದಿದೆ. ಇನ್ನು ಈ ನಡುವೆ 45-50 ವಯಸ್ಸಿನವರಲ್ಲಿ ಪ್ರತಿಕಾಯ ಅಧಿಕವಾಗಿ ಪತ್ತೆಯಾಗಿದೆ. ಶೇಕಲಡ 85.78 ಮಂದಿಯಲ್ಲಿ ಪ್ರತಿಕಾಯ ಕಂಡು ಬಂದಿದೆ. 60-74 ವಯಸ್ಸಿನವರಲ್ಲಿ ಶೇಕಡ 85.78 ರಷ್ಟು ಮಂದಿಯಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಈ ನಡುವೆ 75 ವರ್ಷಕ್ಕಿಂತ ಅಧಿಕ ವಯಸ್ಸಿನವರಲ್ಲಿ ಶೇಕಡ 77.24 ಪ್ರತಿಕಾಯ ಕಂಡು ಬಂದಿದೆ.

ರಾಜ್ಯದ 60% ಜನರು ಕೊರೊನಾ ವಿರುದ್ಧ ಪ್ರತಿಕಾಯ ಹೊಂದಿದ್ದಾರೆ ಎಂದ ಸೆರೊ ಸರ್ವೇರಾಜ್ಯದ 60% ಜನರು ಕೊರೊನಾ ವಿರುದ್ಧ ಪ್ರತಿಕಾಯ ಹೊಂದಿದ್ದಾರೆ ಎಂದ ಸೆರೊ ಸರ್ವೇ

ಇನ್ನು ಮಹಿಳೆಯರು ಹಾಗೂ ಪುರುಷರ ನಡುವಿನ ಸೆರೊಪಾಸಿಟಿವಿಟಿಯಲ್ಲಿ ಯಾವುದೇ ಅಧಿಕ ವ್ಯತ್ಯಾಸಗಳು ಕಂಡು ಬಂದಿಲ್ಲ. ಶೇಕಡ 82.77 ರಷ್ಟು ಪುರುಷರಲ್ಲಿ ಹಾಗೂ ಶೇಕಡ 82.47 ಮಹಿಳೆಯರಲ್ಲಿ ಸೆರೊ ಪಾಸಿಟಿವಿಟಿ ಕಂಡು ಬಂದಿದೆ. ಇನ್ನು ಬಡತನ ರೇಖೆಗಿಂತ ಮೇಲೆ ಇರುವವರ ಪೈಕಿ ಶೇಕಡ 83.53 ಮಂದಿಯಲ್ಲಿ ಸೆರೊ ಪಾಸಿಟಿವಿಟಿ ಕಂಡು ಬಂದಿದೆ. ಬಡತನ ರೇಖೆಗಿಂತ ಕೆಳಗೆ ಇರುವವರಲ್ಲಿ ಶೇಕಡ 81.51 ರಷ್ಟು ಮಂದಿಯಲ್ಲಿ ಸೆರೊ ಪಾಸಿಟಿವಿಟಿ ಕಂಡು ಬಂದಿದೆ.

(ಒನ್‌ಇಂಡಿಯಾ ಸುದ್ದಿ)

English summary
3/4 of Kerala population exposed to coronavirus, finds sero survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X