ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಅಶ್ಲೀಲ ಚಿತ್ರ ಹಂಚಿಕೆ; ಕೇರಳದಲ್ಲಿ 41 ಮಂದಿ ಬಂಧನ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 28: ಮಕ್ಕಳನ್ನು ಅಶ್ಲೀಲವಾಗಿ ಬಿಂಬಿಸಿ ತೆಗೆದ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಕೇರಳದಲ್ಲಿ ಯುವ ಐಟಿ ಉದ್ಯೋಗಿಗಳನ್ನು ಒಳಗೊಂಡಂತೆ 41 ಮಂದಿಯನ್ನು ಬಂಧಿಸಲಾಗಿದೆ.

ಮಕ್ಕಳ ಲೈಂಗಿಕ ಶೋಷಣೆ ವಿರುದ್ಧ ಹೋರಾಡುವ ಘಟಕ ಕೈಗೊಂಡಿದ್ದ ಆಪರೇಷನ್ ಪಿ ಹಂಟ್ 20.3 ಕಾರ್ಯಾಚರಣೆ ಭಾಗವಾಗಿ ರಾಜ್ಯದಲ್ಲಿ ಭಾನುವಾರ 596 ಕಡೆಗಳಲ್ಲಿ ದಾಳಿ ನಡೆದಿದ್ದು, ಬಂಧಿತರಾದ ಕೆಲವರು ವೃತ್ತಿಪರ ಉದ್ಯೋಗದಲ್ಲಿದ್ದವರು ಎಂದು ತಿಳಿದುಬಂದಿದೆ. ಇನ್ನೂ ಕೆಲವರು ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿರುವ ಶಂಕೆ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದೆವ್ವ ಬಿಡಿಸುವ ನೆಪದಲ್ಲಿ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆದೆವ್ವ ಬಿಡಿಸುವ ನೆಪದಲ್ಲಿ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ

ಒಟ್ಟು 339 ಪ್ರಕರಣಗಳನ್ನು ದಾಖಲಿಸಿದ್ದು, ಕಂಪ್ಯೂಟರ್ ಗಳು, ಹಾರ್ಡ್ ಡಿಸ್ಕ್, ಮೊಬೈಲ್, ಲ್ಯಾಪ್ ಟಾಪ್ ಹಾಗೂ 392 ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 6-15 ವರ್ಷದ ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೋಜ್ ಅಬ್ರಾಹಂ ತಿಳಿಸಿದ್ದಾರೆ.ಕೇರಳದಲ್ಲಿ 596 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ತಿರುವನಂತಪುರಂ ಒಂದರಲ್ಲಿಯೇ 58 ಸ್ಥಳಗಳಲ್ಲಿ ದಾಳಿ ನಡೆಸಲಾಯಿತು ಎಂದಿದ್ದಾರೆ.

41 Arrested For Online Child Pornography In Kerala

ಕಾನೂನಿನ ಪ್ರಕಾರ ಮಕ್ಕಳ ಕುರಿತ ಅಶ್ಲೀಲ ವಿಡಿಯೋ, ಚಿತ್ರ ಹಂಚಿಕೆ, ದಾಖಲಿಸುವಿಕೆ ಅಪರಾಧ ಚಟುವಟಿಕೆಯಾಗಿದ್ದು, ಈ ಅಪರಾಧಕ್ಕೆ ಐದು ವರ್ಷದವರೆಗೂ ಜೈಲು ಶಿಕ್ಷೆ ಇದೆ. 10 ಲಕ್ಷ ರೂವರೆಗೂ ದಂಡ ವಿಧಿಸಲಾಗುವುದು.

English summary
41 people, including working youths in IT Industry were arrested at kerala in child pornogragphy case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X