ಭೀಕರ ಕಾಳ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭಸ್ಮ

ಸಿಡ್ನಿ, ನವೆಂಬರ್ 12: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಕಾಳ್ಗಿಚ್ಚು ಲಕ್ಷಾಂತರ ಹೆಕ್ಟೇರ್ ಕಾಡನ್ನು ಸುಟ್ಟುಹಾಕಿದೆ. ಘಟನೆಯಲ್ಲಿ ಕನಿಷ್ಠ ಮೂವರು ಬಲಿಯಾಗಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಪೂರ್ವ ಆಸ್ಟ್ರೇಲಿಯಾದಲ್ಲಿ ಬೃಹತ್ ಕಾಳ್ಗಿಚ್ಚನ್ನು ನಿಯಂತ್ರಿಸಿ ಭಾರಿ ಅನಾಹುತವನ್ನು ತಪ್ಪಿಸಲಾಗಿತ್ತು. ಆದರೆ ನ್ಯೂಸೌತ್ ವೇಲ್ಸ್‌ನಲ್ಲಿ ಕಾಳ್ಗಿಚ್ಚನ್ನು ತಡೆಯಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಬೀಸುತ್ತಿರುವ ಗಾಳಿ ವೇಗವಾಗಿ ಬೆಂಕಿಯನ್ನು ಹರಡುತ್ತಿದೆ.

2018ರಲ್ಲಿ ಕೂಡ ಇಲ್ಲಿ ಕಾಳ್ಗಿಚ್ಚು ಬಹುತೇಕ ಅರಣ್ಯವನ್ನು ಬಲಿತೆಗೆದುಕೊಂಡಿತ್ತು. ಮೃತಪಟ್ಟ ಮೂವರಲ್ಲಿ ಇಬ್ಬರು, ಬೆಂಕಿಯ ಕೆನ್ನಾಲಿಗೆಯ ನಡುವೆಯೇ ಕಾರನ್ನು ಓಡಿಸಿ ತಪ್ಪಿಸಿಕೊಳ್ಳುವ ದುಸ್ಸಾಹಸದಲ್ಲಿ ಜೀವ ಕಳೆದುಕೊಂಡಿದ್ದಾರೆ.

 Bushfires In Australia New South Wales Burn Millions Hectare

ನ್ಯೂಸೌತ್ ವೇಲ್ಸ್‌ನ ನೆರೆಯ ರಾಜ್ಯಗಳು ಮತ್ತು ನ್ಯೂಜಿಲೆಂಡ್‌ನ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಿಸುವ ಕಾರ್ಯಕ್ಕೆ ನೆರವಾಗಿದ್ದಾರೆ. ಈ ಪ್ರದೇಶದ ಸುತ್ತಮುತ್ತಲಿನ ಇಡೀ ಪಟ್ಟಣಗಳಲ್ಲಿನ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ನೂರಾರು ಶಾಲೆಗಳನ್ನು ಮುಚ್ಚಲಾಗಿದೆ. 30 ಡಿಗ್ರಿ ಸೆಲ್ಸಿಯಸ್‌ಅನ್ನು ಮೀರಿದ ಉಷ್ಣಾಂಶ ಮತ್ತು ರಭಸದ ಗಾಳಿ ಬೆಂಕಿಯನ್ನು ಇನ್ನಷ್ಟು ಹರಡಿಸುವ ಭೀತಿ ಮೂಡಿಸಿದೆ.

ಸಿಡ್ನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ಮಹಾ ದುರಂತ' ಘೋಷಿಸಿರುವ ನ್ಯೂಸೌತ್ ವೇಲ್ಸ್, ಎಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಿದೆ. ಕ್ವೀನ್ಸ್‌ಲ್ಯಾಂಡ್‌ನ ಸುಮಾರು 50 ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಕ್ತ ನೀರಿನ ಲಭ್ಯತೆ ಕೊರತೆ ಎದುರಾಗಿದೆ.

ಇದು ದೇಶ ಕಂಡ ಅತ್ಯಂತ ಅಪಾಯಕಾರಿ ಕಾಳ್ಗಿಚ್ಚಿನ ವಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+