ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಆಜಾದ್ ಬೆಂಬಲಿಸಿ ಮತ್ತೆ ಮೂವರು ನಾಯಕರು 'ಕೈ'ಗೆ ಬೈ

|
Google Oneindia Kannada News

ಶ್ರೀನಗರ, ಆಗಸ್ಟ್ 29: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಇನ್ನೂ ಮೂವರು ಕಾಂಗ್ರೆಸ್ ನಾಯಕರು ಸೋಮವಾರ ರಾಜೀನಾಮೆ ಪಕ್ಷಕ್ಕೆ ನೀಡಿದ್ದಾರೆ.

ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಮಾಜಿ ಉಪ ಸ್ಪೀಕರ್ ಗುಲಾಂ ಹೈದರ್ ಮಲಿಕ್ ಸೇರಿದಂತೆ ಇನ್ನೂ ಮೂವರು ಕಾಂಗ್ರೆಸ್ ನಾಯಕರು ಸೋಮವಾರ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

15 ದಿನದಲ್ಲಿ ಗುಲಾಂ ನಬಿ ಅಜಾದ್‌ರಿಂದ ಹೊಸ ಪಕ್ಷ, ಮೊದಲ ಘಟಕ ಎಲ್ಲಿ ಗೊತ್ತಾ?15 ದಿನದಲ್ಲಿ ಗುಲಾಂ ನಬಿ ಅಜಾದ್‌ರಿಂದ ಹೊಸ ಪಕ್ಷ, ಮೊದಲ ಘಟಕ ಎಲ್ಲಿ ಗೊತ್ತಾ?

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ 73 ರ ಹರೆಯದ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಒಡನಾಟಕ್ಕೆ ಅಂತ್ಯವಾಡಿದ್ದಾರೆ. ಪಕ್ಷವನ್ನು "ಸಮಗ್ರವಾಗಿ ನಾಶಪಡಿಸಲಾಗಿದೆ" ಮತ್ತು ಅದರ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು "ಕೆಡವಲು" ರಾಹುಲ್ ಗಾಂಧಿ ಕಾರಣ ಎಂದು ಕಿಡಿ ಕಾರಿದ್ದಾರೆ.

Three more Congress leaders announced resignation from the party

ಕಥುವಾದ ಬಾನಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಲಿಕ್ ಮತ್ತು ಇಬ್ಬರು ಮಾಜಿ ಎಂಎಲ್‌ಸಿಗಳಾದ ಕಥುವಾದಿಂದ ಸುಭಾಷ್ ಗುಪ್ತಾ ಮತ್ತು ದೋಡಾದಿಂದ ಶಾಮ್ ಲಾಲ್ ಭಗತ್ ತಮ್ಮ ರಾಜೀನಾಮೆ ಪತ್ರಗಳನ್ನು ಪ್ರತ್ಯೇಕವಾಗಿ ಪಕ್ಷದ ಹೈಕಮಾಂಡ್‌ಗೆ ರವಾನಿಸಿದ್ದಾರೆ.

"ಮಲಿಕ್, ಗುಪ್ತಾ ಮತ್ತು ಭಗತ್ ಅವರಿಂದ ಬೆಂಬಲದ ಪತ್ರಗಳನ್ನು ನಾವು ಸ್ವೀಕರಿಸಿದ್ದೇವೆ" ಎಂದು ಆಜಾದ್ ಅವರ ಆಪ್ತ ಸಹಾಯಕ ಮತ್ತು ಮಾಜಿ ಸಚಿವ ಜಿ ಎಂ ಸರೂರಿ ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹಲ್ ಲಾಲ್ ಶರ್ಮಾ ಮತ್ತು ಘರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಕೂಡ ದೆಹಲಿಯಲ್ಲಿ ಆಜಾದ್ ಅವರನ್ನು ಭೇಟಿ ಮಾಡಿದ್ದಾರೆ. ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಗುಲಾಂ ನಬಿ ಆಜಾದ್ ಅವರಿಗೆ ಬೆಂಬಲ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Three more Congress leaders announced resignation from the party

"ರಾಜೀನಾಮೆ ಪತ್ರ ಬರೆಯುವ ಮೊದಲು ಮತ್ತು ನಂತರ ನಾನು 6 ದಿನಗಳು ನಾನು ನಿದ್ದೆ ಮಾಡಲಿಲ್ಲ, ಏಕೆಂದರೆ ನಾವು ಪಕ್ಷಕ್ಕಾಗಿ ರಕ್ತ ನೀಡಿದ್ದೇವೆ, ಇಂದು ಅಲ್ಲಿನ ಜನರು ನಿಷ್ಪ್ರಯೋಜಕರಾಗಿದ್ದಾರೆ. ಆದರೆ, ನಮ್ಮ ಬಗ್ಗೆ ಏನು ಗೊತ್ತಿಲ್ಲದ ವಕ್ತಾರರು ಕಾಂಗ್ರೆಸ್‌ನಲ್ಲಿರುವುದು ಬೇಸರದ ಸಂಗತಿ" ಎಂದು ಗುಲಾಂ ನಬಿ ಆಜಾದ್ ಸೋಮವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಹನ್ನೆರಡು ಪ್ರಮುಖ ಕಾಂಗ್ರೆಸ್ ನಾಯಕರು, ನೂರಾರು ಪಂಚಾಯತ್ ರಾಜ್ ಸಂಸ್ಥೆ (ಪಿಆರ್‌ಐ) ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಈಗಾಗಲೇ ಕಾಂಗ್ರೆಸ್ ತೊರೆದು ಆಜಾದ್‌ ಜೊತೆಗೆ ಸೇರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಿಂದ ಗುಲಾಂ ನಬಿ ಆಜಾದ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಮಟ್ಟದ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಎನ್ನುವ ವದಂತಿಗಳಿವೆ.

ಈ ಬೆನ್ನಲ್ಲೆ ಆಜಾದ್ ನಾನು ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಲು ಸದ್ಯಕ್ಕೆ ಯಾವುದೇ ಚಿಂತನೆ ಇಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಚುನಾವಣೆ ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಅಲ್ಲಿ ಪಕ್ಷದ ಘಟಕವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ತಮ್ಮ ಬೆಂಬಲವನ್ನು ನೀಡಲು ಹಲವಾರು ಮಾಜಿ ಶಾಸಕರೊಂದಿಗೆ ಶುಕ್ರವಾರ ಆಜಾದ್ ಅವರನ್ನು ಭೇಟಿಯಾದ ಸರೂರಿ, ಆಜಾದ್‌ ಮುಂದಿನ ಹದಿನೈದು ದಿನಗಳಲ್ಲಿ ಸ್ವಂತ ಪಕ್ಷವನ್ನು ಘೋಷಿಸಲಿದ್ದಾರೆ. ಅವರು ಮುಖ್ಯಮಂತ್ರಿಯಾಗಿ (ನವೆಂಬರ್ 2, 2005 ರಿಂದ ಜುಲೈ 11, 2008 ರವರೆಗೆ) ಸೇವೆ ಸಲ್ಲಿಸಿದ ಜಮ್ಮು ಮತ್ತು ಕಾಶ್ಮೀರಕ್ಕೆ ಹಿಂದಿರುಗುತ್ತಿದ್ದಾರೆ ಎಂದು ನಮಗೆ ಸಂತೋಷವಾಗಿದೆ. ಜನರು ಅವರ ಆಡಳಿತವನ್ನು ಸುವರ್ಣ ಯುಗವೆಂದು ನೋಡುತ್ತಾರೆ. ಅವರಿಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬಂಬಲವಿದೆ ಎಂದಿದ್ದರು.

English summary
Three more Congress leaders including former deputy speaker announced resignation from the party. in support of Ghulam Nabi Azad. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X