6 ವರ್ಷದ ಬಾಲಕನ್ನು ಕೊಂದಿದ್ದ ಉಗ್ರನನ್ನು ಸದೆಬಡಿದ ಭಾರತೀಯ ಸೇನೆ
ನವದೆಹಲಿ, ಜುಲೈ 3: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಕಳೆದ ಒಂದು ವಾರದ ಹಿಂದಷ್ಟೇ ಆರು ವರ್ಷದ ಬಾಲಕನನ್ನು ಕೊಂದಿದ್ದ ಉಗ್ರನನ್ನು ಭಾರತೀಯ ಸೇನೆ ಸದೆಬಡಿದಿದೆ. ಜಹೀದ್ ದಾಸ್ ಜಮ್ಮು ಕಾಶ್ಮೀರ ಇಸ್ಲಾಮಿಕ್ ಸ್ಟೇಟ್‌ಗೆ (ಜೆಕೆಐಎಸ್) ಸೇರಿದವನಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
Recommended Video
ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕರು ಏಕಾಏಕಿ ದಾಳಿ ನಡೆಸಿದ್ದರು. ಆ ಸಮಯದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಅಪ್ರಾಪ್ತ ಬಾಲಕ ಮೃತಪಟ್ಟಿದ್ದರು. ಬಾಲಕ ತನ್ನ ತಂದೆಯೊಂದಿಗೆ ಆ ಸಮಯದಲ್ಲಿ ದಾಳಿ ನಡೆಯುವ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ.
ಶ್ರೀನಗರದ ಹಜರತ್ಬಾಲ್ ದೇವಾಲಯದ ಸಮೀಪವಿರುವ ಮಾಲ್ಬಾಗ್ ಎಂಬಲ್ಲಿ ಗುರುವಾರ ತಡರಾತ್ರಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಜಹೀದ್ ದಾಸ್ ಎಂಬಾತ ಗುಂಡಿನ ದಾಳಿಗೆ ಮೃತಪಟ್ಟಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.

ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ಪಾಡ್‌ಶಾಹಿ ಬಾಗ್ ಸೇತುವೆ ಬಳಿ ಈ ಘಟನೆ ನಡೆದಿತ್ತು. ದಾಳಿಯ ನಂತರ ಭಯೋತ್ಪಾದಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈತ ಆತನನ್ನು ಗುಂಡಿಕ್ಕಿಹತ್ಯೆಗೈಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications