ಅಧಿಕಾರಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಯೋಧ
ಶ್ರೀನಗರ, ಜುಲೈ 7: ಸಶಸ್ತ್ರ ಸೀಮಾ ಬಲದ ಯೋಧನೊಬ್ಬನು ತನ್ನನ್ನು ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಈ ಯೋಧ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಸಶಸ್ತ್ರ ಸೀಮಾ ಬಲ ಹಿರಿಯ ಅಧಿಕಾರಿಯನ್ನು ಅದೇ ರೈಫಲ್‌ನಿಂದ ಗುಂಡಿಕ್ಕಿ ಕೊಂದಿರುವುದಾಗಿ ತಿಳಿದು ಬಂದಿದೆ.
ಭದ್ರತಾ ಕರ್ತವ್ಯಕ್ಕಾಗಿ 8ನೇ ಬೆಟಾಲಿಯನ್‌ನ ಘಟಕವೊಂದನ್ನು ನಿಯೋಜಿಸಲಾಗಿದ್ದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಇಬ್ಬರ ಮಧ್ಯೆ ಏನಾಗಿದೆ ಎಂಬ ವಿಚಾರ ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ ನ್ಯಾಯಾಲಯದ ಸಂಕೀರ್ಣದಲ್ಲಿ ಇಬ್ಬರ ನಡುವೆ ವಾಗ್ವಾದ ಆಗಿದೆ. ಆ ಬಳಿಕ ಫೋರ್ಸ್‌ನ ಕಾನ್‌ಸ್ಟೆಬಲ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಅಧಿಕಾರಿಗೆ ಗುಂಡಿಕ್ಕಿ ಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಸ್ಥಳಕ್ಕೆ ಎಸ್ಎಎಸ್‌ಬಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗೂ ಆದೇಶಿಸಿದ್ದಾರೆ.
ಅಂದ್ಹಾಗೆ, ಎಸ್ಎಸ್‌ಬಿ ಸೇನೆಯೂ ನೇಪಾಳ ಮತ್ತು ಭೂತಾನ್‌ನೊಂದಿಗೆ ಭಾರತೀಯ ಪ್ರದೇಶಗಳನ್ನು ಕಾಯುತ್ತಿವೆ. ಮತ್ತು ಎಸ್ಎಸ್‌ಬಿಯ ಕೆಲವು ಬೆಟಾಲಿಯನ್‌ಗಳನ್ನು ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.












Click it and Unblock the Notifications