ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಶ್ರೀನಗರ, ಫೆಬ್ರವರಿ 14: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ(ಫೆಬ್ರವರಿ 14)ದಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಆಹ್ಮದ್ ದರ್ ದಾಳಿ ಮಾಡಿ ಸಾಯುವುದಕ್ಕೂ ಮುನ್ನ ವಿಡಿಯೋ ಸಂದೇಶ ನೀಡಿದ್ದಾನೆ.
ಉಗ್ರರ ದಾಳಿಯಲ್ಲಿ ಸುಮಾರು 30ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 45ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯಾದ ಬಳಿಕ ಜೈಷ್ ಸಂಘಟನೆ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಕಕ್ಪೋರಾದ ಗಂಡಿಬಾಗ್ ನ ಆದಿಲ್ ಅಹ್ಮದ್ ದರ್ ಅಲಿಯಾಸ್ ವಖಾಸ್ ಕಮ್ಯಾಂಡೋ ಕಾಣಿಸಿಕೊಂಡಿದಾನೆ.
ಆದಿಲ್ ಹಿಂಬದಿಯಲ್ಲಿ ಜೈಷ್ ಎ ಮೊಹಮ್ಮದ್ ಬ್ಯಾನರ್ ಇದ್ದು, ರೈಫಲ್ಸ್ ಗಳನ್ನು ಹಿಡಿದುಕೊಂಡು ಮಾತನಾಡಿರುವ ಆದಿಲ್, ಕಳೆದ ವರ್ಷ ನಿಷೇಧಿತ ಉಗ್ರ ಸಂಘಟನೆಯನ್ನು ಸೇರಿಕೊಂಡೆ, ಈ ವರ್ಷ ಮಾರಣಾಂತಿಕ ದಾಳಿ ನಡೆಸುವ ಹೊಣೆ ಸಿಕ್ಕಿದೆ. ಈ ವಿಡಿಯೋ ಪ್ರಸಾರವಾಗುವ ವೇಳೆಗೆ ನಾನು ಜನ್ನತ್(ಸ್ವರ್ಗ)ದಲ್ಲಿರುತ್ತೇನೆ ಎಂದಿದ್ದಾನೆ.
The coward who struck at Pulwama pic.twitter.com/4SRSQQUarB
— Vicky Nanjappa (@vickynanjappa) February 14, 2019

ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಎಲ್ ಇ ಡಿ ಸ್ಫೋಟಕ್ಕಾಗಿ ಜೈಷ್ ಸಿದ್ಧತೆ ನಡೆಸಿತ್ತು. 50ಕ್ಕೂ ಅಧಿಕ ಸಿ ಆರ್ ಪಿಎಫ್ ವಾಹನಗಳನ್ನು ಗುರಿಯನ್ನಾಗಿಸಿ ಈ ಕೃತ್ಯ ಎಸಗಲಾಗಿದೆ. ಪ್ರತಿ ವಾಹನದಲ್ಲೂ 40 ರಿಂದ 45 ಸೈನಿಕರಿದ್ದರು.
2016ರ ಸೆಪ್ಟೆಂಬರ್ ನಲ್ಲಿ ಉರಿ ಪ್ರದೇಶದಲ್ಲಿ 23 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನ ಸೇನಾ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿತ್ತು.












Click it and Unblock the Notifications