ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಸಂಖ್ಯೆ 44 ರಿಂದ 49ಕ್ಕೆ ಏರಿಕೆ

|
Google Oneindia Kannada News

ಜಮ್ಮು ಕಾಶ್ಮೀರ, ಫೆಬ್ರವರಿ 16: ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಸಂಖ್ಯೆ 44 ರಿಂದ 49ಕ್ಕೆ ಏರಿಕೆ ಆಗಿದೆ.

ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ

ಘಟನೆ ನಡೆದಾಗ ಕೇವಲ 18 ಇದ್ದ ಸಾವಿನ ಸಂಖ್ಯೆ ಸಂಜೆ ವೇಳೆಗಾಗಲೇ 44ಕ್ಕೆ ಬಂದು ನಿಂತಿತ್ತು. ಆದರೆ ಫೆಬ್ರವರಿ 15 ರಂದು ಕಾಶ್ಮೀರದ ಸೇನಾ ಆಸ್ಪತ್ರೆಯಲ್ಲಿ ಐದು ಜನ ಯೋಧರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 49 ಆಗಿಬಿಟ್ಟಿದೆ.

Pulwama terror attack: death toll rise 44 to 49

ಘಟನೆಯಲ್ಲಿ ಹಲವು ಯೋಧರು ಗಾಯಗೊಂಡಿದ್ದು ಕಾಶ್ಮೀರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೇನೆಯ ಮೇಲೆ ಇದು ಇದುವರೆಗೆ ನಡೆದ ಬಹುದೊಡ್ಡ ಉಗ್ರರ ದಾಳಿ ಎಂದು ಹೇಳಲಾಗುತ್ತಿದೆ. 2016 ಸೆಪ್ಟೆಂಬರ್ ನಲ್ಲಿ ನಡೆದಿದ್ದ ಉರಿ ದಾಳಿಯಲ್ಲಿ 23 ಯೋಧರು ಸಾವನ್ನಪ್ಪಿದ್ದರು.

ದಾಳಿ ನಡೆವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಮಮತಾ ಬ್ಯಾನರ್ಜಿ ಕಿಡಿ ದಾಳಿ ನಡೆವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಮಮತಾ ಬ್ಯಾನರ್ಜಿ ಕಿಡಿ

Pulwama terror attack: death toll rise 44 to 49

49 ರಲ್ಲಿ 46 ಯೋಧರ ಗುರುತು ಪತ್ತೆ ಆಗಿದ್ದು, ಮೂರು ಯೋಧರ ಗುರುತು ಪತ್ತೆ ಮಾಡಲು ಆಗಿಲ್ಲ. ಎಲ್ಲಾ ಯೋಧರ ಪಾರ್ಥಿವ ಶರೀರಗಳನ್ನು ಅವರವರ ಹುಟ್ಟೂರಿಗೆ ಕಳುಹಿಸಲಾಗಿದೆ.

ರುಂಡವಿಲ್ಲದ ದೇಹಗಳು, ರಸ್ತೆಗಂಟಿದ ಮಾಂಸ: ಘಟನಾ ಸ್ಥಳದ ಚಿತ್ರಣ ರುಂಡವಿಲ್ಲದ ದೇಹಗಳು, ರಸ್ತೆಗಂಟಿದ ಮಾಂಸ: ಘಟನಾ ಸ್ಥಳದ ಚಿತ್ರಣ

ನಿನ್ನೆ ದೆಹಲಿಯಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಇನ್ನೂ ಹಲವು ಪ್ರಮುಖ ಸಚಿವರು ಅಂತಿಮ ನಮನ ಸಲ್ಲಿಸಿದ್ದಾರೆ.

English summary
Pulwama terror attack death toll rise 44 to 49. Friday 5 injured soldiers died in Srinagar army hospital. three soldier bodies yet to be identified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X