• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ತಣ್ಣಗಾದ ಕಾಶ್ಮೀರದಲ್ಲಿ ಭಾರತದ 'ಜೇಮ್ಸ್‌ ಬಾಂಡ್' ಸುತ್ತಾಟ

|
   ತಣ್ಣಗಾದ ಕಾಶ್ಮೀರದಲ್ಲಿ ಭಾರತದ 'ಜೇಮ್ಸ್‌ ಬಾಂಡ್' ಸುತ್ತಾಟ | Oneindia Kannada

   ಶ್ರೀನಗರ, ಆಗಸ್ಟ್ 07: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ-ಮಾನವನ್ನು ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದ ಪರಿಸ್ಥಿತಿಯೇ ಬದಲಾಗಿದೆ.

   ಆರ್ಟಿಕಲ್ 370 ರದ್ದು ಮಾಡುವ ಐತಿಹಾಸಿಕ ನಿರ್ಣಯದ ಹಿಂದೆ ಇದ್ದ ಪ್ರಮುಖ ವ್ಯಕ್ತಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

   ಭಯೋತ್ಪಾದನೆ ದಾಳಿ ಸೂಚನೆ; ಕಣಿವೆ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಿದ ಕೇಂದ್ರ

   ಭಾರತದ ಜೇಮ್ಸ್‌ ಬಾಂಡ್ ಎಂದೇ ಕರೆಯಲಾಗುವ ಅಜಿತ್ ದೋವಲ್ ಅವರು, ಜಮ್ಮು ಕಾಶ್ಮೀರದ ಶೋಫಿಯಾನ್‌ಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿದರು.

   ಕ್ಯಾಬಿನೆಟ್ ದರ್ಜೆಯುಳ್ಳ ಅಜಿತ್ ದೋವಲ್ ಶೋಪಿಯಾನ್‌ನಲ್ಲಿ ರಸ್ತೆ ಬದಿಯಲ್ಲಿ ಕೂತು ಸ್ಥಳೀಯರೊಂದಿಗೆ ಊಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಥಳೀಯರೊಂದಿಗೆ ಬೆರೆತ ಅವರು, ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ದೋವಲ್ ಮಾಡಿದ್ದಾರೆ.

   ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್

   ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಹಲವು ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳ ಹಿಂದಿರುವ ಅಜಿತ್ ದೋವಲ್ ಆಗಿದ್ದಾರೆ. ಆರ್ಟಿಕಲ್ 370 ರದ್ದು ಮಾಡುವ ಹಿಂದೆಯೂ ಇವರದ್ದು ಪ್ರಮುಖ ಪಾತ್ರವಿದೆ.

   English summary
   National Security Adviser Ajit Doval visited Shopian which is a hotbed of militancy and was ground zero during Burhan Wani agitation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X