ಮನೆಗೆ ಹೋಗಲು ಆಂಬ್ಯುಲೆನ್ಸ್‌ನಲ್ಲಿ ಶವದಂತೆ ಪ್ರಯಾಣಿಸಿ ಸಿಕ್ಕಿಬಿದ್ದ

ಪೂಂಛ್, ಏಪ್ರಿಲ್ 1: ಮನೆಗೆ ಹೋಗಲು ವ್ಯಕ್ತಿಯೊಬ್ಬ ಶವದಂತೆ ನಟಿಸಿ ಆಂಬ್ಯುಲೆನ್ಸ್‌ನಲ್ಲಿ ಹೋಗುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ನಡೆದಿದೆ.

ಎಲ್ಲೆಲ್ಲೂ ಲಾಕ್‌ಡೌನ್ ಆಗಿದೆ, ಮನೆ ತಲುಪಲು ಏನೋ ಉಪಾಯ ಮಾಡಲು ಹೋಗಿ ಕಂಬಿ ಎಣಿಸುವಂತಾದ ಘಟನೆ ಪೂಂಛ್‌ನಲ್ಲಿ ನಡೆದಿದೆ. ನಾಲ್ವರು ಯುವಕರು ಮನೆಗೆ ಹೋಗಲು ಉಪಾಯ ಮಾಡಿದ್ದಾರೆ, ಅದರಲ್ಲಿ ಓರ್ವ ಯುವಕ ಸತ್ತಂತೆ ನಟಿಸಿ ನಕಲಿ ಮರಣ ಪ್ರಮಾಣ ಪತ್ರವನ್ನೂ ಮಾಡಿಸಿ ಕೊನೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ ಬಿದ್ದ ಘಟನೆ ಇದಾಗಿದೆ.

ಯುವಕನೊಬ್ಬನಿಗೆ ತಲೆಗೆ ಪೆಟ್ಟು ಬಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ, ಈಗ ಅವನು ಮೃತಪಟ್ಟಿದ್ದಾನೆ ಎಂದು ಆಂಬ್ಯುಲೆನ್ಸ್ ಕರೆಸಿಕೊಂಡು ನಕಲಿ ಪ್ರಮಾಣಪತ್ರವನ್ನೂ ಸೃಷ್ಟಿಸಿ ಆಂಬ್ಯುಲೆನ್ಸ್ ಮೂಲಕ ತೆರಳಿದ್ದಾರೆ.

Man Reaches Home Amid Lockdown By Faking His Death

ಆತ ಇನ್ನೂ ಮೂವರ ಸಹಾಯವನ್ನು ಪಡೆದಿದ್ದ. ಪೊಲೀಸರು ಆಂಬ್ಯುಲೆನ್ಸ್ ತಡೆದು ಪರಿಶೀಲಿಸಿದಾಗ ಸತ್ಯ ತಿಳಿದುಬಂದಿದೆ. ಅವರನ್ನು ಗೃಹಬಂಧನಕ್ಕೆ ಒಪ್ಪಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಕೊರೊನಾ ವೈರಸ್ ಹೊಸ 7 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 45 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜಮ್ಮುವಿನಲ್ಲಿ 3 ಪ್ರಕರಣಗಳು ದೃಢಪಟ್ಟಿವೆ. ಕಾಶ್ಮೀರದಲ್ಲಿ ನಾಲ್ಕು, ಶಾಪಿಯನ್‌ನಲ್ಲಿ ಎರಡು , ಶ್ರೀನಗರದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಇದುವರೆಗೆ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+