ಕಣಿವೆ ರಾಜ್ಯದಲ್ಲಿ 23 ವರ್ಷಗಳ ಬಳಿಕ ಸೆರೆಸಿಕ್ಕ ಉಗ್ರ
ಶ್ರೀನಗರ, ಮೇ 9: ಎರಡೂವರೆ ದಶಕಗಳಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದ ಉಗ್ರ ವಾಲಿ ಮೊಹಮ್ಮದ್ ವಿರ್ ನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಕಾಶ್ಮೀರದ ಸದರ್ ಕೋಟ್ ಬಾಲಾ ಉಗ್ರ ದಾಳಿಯ ಪ್ರಮುಖ ಆರೋಪಿಯಾಗಿರುವ ಈತ ಕಳೆದ 23 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಸ್ಥಳೀಯ ನ್ಯಾಯಾಲಯವು ಈತನ ವಿರುದ್ಧ ಹಲವಾರು ಬಾರಿ ವಾರೆಂಟ್ ಹೊರಡಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
1990ರಲ್ಲಿ ಸರ್ಕಾರಕ್ಕೆ ನೆರವು ನೋಡುತ್ತಿದ್ದ ಇಖ್ವಾನ್ ಎನ್ನುವ ಸಂಘಟನೆ ಬಳಿಕ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿತ್ತು. ಈತನ ಸಂಚಿನಿಂದ ನಡೆದ ದಾಳಿಯಲ್ಲಿ ಏಳು ಜನ ಸಾವನ್ನಪ್ಪಿದ್ದರು.

ಅಂದಿನಿಂದಲೂ ಈ ಉಗ್ರನಿಗಾಗಿ ಶೋಧಕಾರ್ಯ ನಡೆಸುತ್ತಿದ್ದರು. ಆದರೆ ಸುಮಾರು 23 ವರ್ಷಗಳ ಕಾಲ ಪೊಲೀಸರಿಂದ ಕಣ್ತಪ್ಪಿಸಿಕೊಂಡು ಅಡಗುತಾಣದಲ್ಲಿ ಕಾಳಕಳೆದಿದ್ದ ಹಾಗೂ ಈಗಲೂ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದುಬಂದಿದೆ.












Click it and Unblock the Notifications