ಉಗ್ರರ ನಂಟು: ಬಂಧಿತ ಶಿಕ್ಷಕ ಪೊಲೀಸರ ವಶದಲ್ಲೇ ಸಾವು
ಶ್ರೀನಗರ, ಮಾರ್ಚ್ 19: ಭಯೋತ್ಪಾದನೆ ಪ್ರಕರಣದಲ್ಲಿ ನಂಟು ಹೊಂದಿರುವ ಗುಮಾನಿಯಲ್ಲಿ ಬಂಧಿತನಾಗಿದ್ದ ಶಾಲಾ ಶಿಕ್ಷಕರೊಬ್ಬರು ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟ ಘಟನೆ ಶ್ರೀನಗರದಲ್ಲಿ ನಡೆದಿದೆ.
ಈ ಘಟನೆಯನ್ನು ದಂಡಾಧಿಕಾರಿ ತನಿಖೆಗೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದ ನಿವಾಸಿ ರಿಜ್ವಾನ್ ಪಂಡಿತ್ (28) ಅವರನ್ನು ಪೊಲೀಸರು ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಬಂಧಿಸಿದ್ದರು. ಅವರನ್ನು ಸೋಮವಾರ ರಾತ್ರಿ ವಿಚಾರಣೆಗೆ ಒಳಪಡಿಸಿದ್ದ ವೇಳೆ ಮೃತಪಟ್ಟಿದ್ದಾರೆ.

ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ ರಿಜ್ವಾನ್ ಅವರನ್ನು ಭದ್ರತಾ ಪಡೆಗಳು ಮೂರು ದಿನಗಳ ಹಿಂದೆ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದುಕೊಂಡಿದ್ದರು.
ರಿಜ್ವಾನ್ ಅವರ ಸಾವಿಗೆ ಕಾರಣ ಮತ್ತು ಸಂದರ್ಭ ಏನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಸೆಕ್ಷನ್ 176ರ ಅಪರಾಧ ಪ್ರಕ್ರಿಯೆ ಸಂಹಿತೆಯ ಅಡಿಯಲ್ಲಿ ದಂಡಾಧಿಕಾರಿ ತನಿಖೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು 300ಕ್ಕೂ ಹೆಚ್ಚು ಶಂಕಾಸ್ಪದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇನ್ನೂ ಅನೇಕರ ಬಂಧನಕ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ.












Click it and Unblock the Notifications