ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಓರ್ವ ಉಗ್ರನ ಹತ್ಯೆ
ಶ್ರೀನಗರ, ಮೇ 10: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಎಂಬಲ್ಲಿ ಭಯೋತ್ಪಾದಕನೊಬ್ಬನನ್ನು ಭಾರತೀಯ ಸೇನೆ ಬಲಿತೆಗೆದುಕೊಂಡಿದೆ.
ಶುಕ್ರವಾರ ಬೆಳಿಗ್ಗೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಈ ಮಧ್ಯೆ ಭಾರತೀಯ ಸೇನೆಯ ಪ್ರತಿದಾಳಿಯಿಂದಾಗಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದ್ದು, ಆತನಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಕಾರ್ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಆರು ಜನ ಉಗ್ರರನ್ನು ಏಪ್ರಿಲ್ 29 ರಂದು ಪೊಲೀಸರು ಬಂಧಿಸಿದ್ದರು. ಈ ಉಗ್ರರ ಮೂಲಕ ಕಾಶ್ಮೀರದಲ್ಲಿರುವ ಉಗ್ರರ ಕುರಿತು ಮತ್ತು ಅವರ ಮುಂದಿನ ಯೋಜನೆಗಳ ಕುರಿತು ಮಾಹಿತಿ ಲಭ್ಯವಾಗಿತ್ತು.
ಶ್ರೀಲಂಕಾದಲ್ಲಿ ನಡೆದ ಈಸ್ಟರ್ ದಾಳಿಯ ನಂತರ ಭಾರತಕ್ಕೂ ಉಗ್ರದಾಳಿಯ ಬೆದರಿಕೆ ಇರುವುದರಿಂದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ವಿಶೇಷ ಗಮನ ಹರಿಸಲಾಗುತ್ತಿದೆ.
ಶ್ರೀಲಂಕಾದಲ್ಲಿ ಏಪ್ರಿಲ್ 21 ರಂದು ಈಸ್ಟರ್ ಆಚರಣೆಯ ವೇಳೆ ಚರ್ಚ್ ಮತ್ತು ಹೊಟೇಲ್ ಸೇರಿ ಎಂಟು ಕಡೆ ನಡೆದ ಬಾಂಬ್ ದಾಳಿಯಲ್ಲಿ ಒಟ್ಟು 250 ಕ್ಕೂ ಹೆಚ್ಚು ಮಂದಿ ಮೃತರಾಗದ್ದರು. ಅದಾಗಿ ಒಂದು ವಾರದ ಮೇಲೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ 15 ಜನರನ್ನು ಶ್ರೀಲಂಕಾ ಹೊಡೆದುಹಾಕಿತ್ತು.











Click it and Unblock the Notifications