ಜಮ್ಮು ಕಾಶ್ಮೀರ: ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಉಗ್ರರ ಹತ್ಯೆ
ಶ್ರೀನಗರ, ಡಿಸೆಂಬರ್ 13: ಜಮ್ಮು ಕಾಶ್ಮೀರದ ಸೋಪೋರ್ ಬಳಿ ಇಬ್ಬರು ಉಗ್ರರು ಸೇನಾ ನೇಲೆ ದಾಳಿ ಮಾಡಿದ್ದು, ಇಬ್ಬರನ್ನೂ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.+
ನಿನ್ನೆ ತಡ ರಾತ್ರಿ ಇಬ್ಬರು ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಮುಂಜಾನೆ ವರೆಗೂ ನಡೆದ ಬಂದೂಕು ಕಾಳಗದ ಬಳಿಕ ಇಬ್ಬರು ಉಗ್ರರನ್ನೂ ಯೋಧರು ಹೊಡೆದುರುಳಿಸಿದ್ದಾರೆ.

ಉಗ್ರರಿಂದ ಅತ್ಯಾಧುನಿಕ ಎಕೆ-47 ಸೇರಿ ಹಲವು ಹೊಸ ಬಗೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಪೋರದ ಬಳಿಯ ಗುಂಡ್‌ಬ್ರತ್ ಗ್ರಾಮದ ಬಳಿ ಇನ್ನೂ ಹಲವು ಉಗ್ರವಾದಿಗಳು ಅಡಗಿಕೊಂಡಿದ್ದಾರೆ ಎನ್ನಲಾಗಿದ್ದು ಯೋಧರು ಹುಡುಕಾಟ ಮುಂದುವರೆಸಿದ್ದಾರೆ.
ಮೊನ್ನೆ ಸಹ ಜಮ್ಮು ಕಾಶ್ಮೀರದಲ್ಲಿ ನಾಲ್ಕು ಜನ ಪೊಲೀಸರನ್ನು ಉಗ್ರರು ಕೊಂದು ಹಾಕಿದ್ದರು.












Click it and Unblock the Notifications