ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಸೇಬು ಮಾರಲು ಬಂದವರ ಹತ್ಯೆ

ಶ್ರೀನಗರ, ಅಕ್ಟೋಬರ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರದಾಳಿಯಲ್ಲಿ ಇಬ್ಬರು ಟ್ರಕ್ ಡ್ರೈವರ್ ಗಳನ್ನು ಉಗ್ರರು ಕೊಂದ ಘಟನೆ ಗುರುವಾರ ಸಂಜೆ ನಡೆದಿದೆ.

ಸೇಬುಗಳನ್ನು ಮಾರಲು ಕಾಶ್ಮೀರದ ಶೋಪಿಯಾನಕ್ಕೆ ಬಂದಿದ್ದ ಇಬ್ಬರು ಟ್ರಕ್ ಡ್ರೈವರ್ ಗಳನ್ನು ಕೊಂದಿದ್ದಲ್ಲದೆ, ಅವರಿದ್ದ ಟ್ರಕ್ ಗೆ ಬೆಂಕಿ ಹಚ್ಚಿದ ದಾರುಣ ಘಟನೆ ನಡೆದಿದೆ.

In A Terrorist attack, 2 drivers Shot Dead, Truck Sent On Fire in Kashmir

ಕಳೆದ ವಾರವಷ್ಟೇ ಇದೇ ಜಿಲ್ಲೆಯಲ್ಲಿ ಒಬ್ಬ ಸೇಬು ವ್ಯಾಪಾರಿಯನ್ನು ಉಗ್ರರು ಕೊಂದಿದ್ದರು. ಈ ಘಟನೆ ನಡೆದ ವಾರದಲ್ಲಿ ಘಟನೆನಡೆದಿದ್ದು, ಸೇಬು ವ್ಯಾಪಾರಿಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ.

ಗುರುವಾರ ಉಗ್ರರಿಂದ ಹತ್ಯೆಯಾದ ಇಬ್ಬರು ಟ್ರಕ್ ಡ್ರೈವರ್ ರಾಜಸ್ಥಾನ ಮೂಲದವರು ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶೋಪಿಯಾನದ ಹಿರಿಯ ಅಧಿಕಾರಿಗಳು, "ಇಬ್ಬರು ಟ್ರಕ್ ಶ್ರೈವರ್ ಗಳೂ ಭದ್ರತಾ ಪಡೆಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಶೋಪಿಯಾನ್ ಗೆ ತೆರಳಿದ್ದಾರೆ. ಅವರ ಹತ್ಯೆಯಾದ ಪ್ರದೇಶ ಶೋಪಿಯಾನದಿಂದ ಬಹಳ ಒಳಗಿದ್ದರಿಂದ ಅವರು ತೆರಳಿದ್ದು ತಿಳಿದಿರಲಿಲ್ಲ. ಆದರೆ ಅವರನ್ನು ಕೊಲ್ಲಲಾಗಿದೆ. ಇದೊಂದು ದುರಾದೃಷ್ಟದ ಘಟನೆ. ಅವರಿಬ್ಬರ ಮೃತದೇಹವನ್ನೂ ಪತ್ತೆ ಮಾಡಲಾಗಿದೆ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+