ಜಮ್ಮು ಕಾಶ್ಮೀರ: ಒಂದೇ ದಿನದಲ್ಲಿ 6 ಉಗ್ರರ ಹತ್ಯೆಗೈದ ಭಾರತೀಯ ಸೇನೆ

ಶ್ರೀನಗರ, ಜುಲೈ 18: ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ದಿನ 6 ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ.

ಇಂದು ಬೆಳಗ್ಗೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್ ಜಿಲ್ಲೆಯ ಆಮ್ಶಿಪೋರಾ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದೆ.

ಆ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಪಡೆದ ಸೈನಿಕರು ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರನ್ನು ಹುಡುಕಲು ಹೋದ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ, ಹೀಗಾಗಿ ಅನಿವಾರ್ಯವಾಗಿ ಉಗ್ರರನ್ನು ಬಂಧಿಸುವ ಬದಲು ಅವರನ್ನು ಎನ್‌ಕೌಂಟರ್‌ ಮಾಡಲಾಯಿತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

In 24 Hours 6 Terrorists Shot Dead In Jammu And Kashmir

ಸುಮಾರು 24 ತಾಸುಗಳು ಗುಂಡಿನ ದಾಳಿ , ಪ್ರತಿದಾಳಿ ನಡೆದಿತ್ತು. ಕುಲ್ಗಾಮ್‌ನಲ್ಲಿ ಜೈಷ್ ಎ ಮೊಹಮ್ಮದ್ ಕಮಾಂಡರ್ ಸೇರಿ ಮೂವರು ಉಗ್ರರನ್ನು ಸದೆಬಡಿಯಲಾಗಿತ್ತು.
ಕುಲ್ಗಾಮ್‌ನಲ್ಲಿ ಹತ್ಯೆಯಾದ ಉಗ್ರ ಐಇಡಿ ಎಕ್ಸ್‌ಪರ್ಟ್ ಆಗಿದ್ದ, ಭದ್ರತಾ ಸಿಬ್ಬಂದಿ ಮೇಲೆ ಹಲವು ಬಾರಿ ನಡೆದ ದಾಳಿಯಲ್ಲಿ ಈತನ ಕೈವಾಡವೂ ಇತ್ತು. ಕಳೆದ ಮೂರ್ನಾಲ್ಕು ಎನ್‌ಕೌಂಟರ್‌ನಲ್ಲಿ ಆತ ತಪ್ಪಿಸಿಕೊಳ್ಳಲು ಸಫಲನಾಗಿದ್ದ.

ಯೋಧರು ಕೂಡ ಈ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾರೆ. ಅವರು ಅಮರನಾಥ್ ಯಾತ್ರೆ ಸಂದರ್ಭದಲ್ಲಿ ದಾಳಿ ನಡೆಸಲು ತಯಾರಿ ನಡೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಭಯೋತ್ಪಾದಕರ ಗುಂಪು ಯಾತ್ರೆಗಳ ಮೇಲೆ ಕಣ್ಣಿಟ್ಟಿತ್ತು. ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+