ಬನಿಹಾಲ್ ಸ್ಫೋಟ : ದಾಳಿಗೆ ಪೋನ್ ಮೂಲಕ ಸೂಚನೆ ಬಂದಿತ್ತು
ಶ್ರೀನಗರ, ಏಪ್ರಿಲ್ 01 : ಬನಿಹಾಲ್ ಬಳಿ ಸಿಎಆರ್‌ಪಿಎಫ್ ವಾಹನದ ಮೇಲೆ ದಾಳಿ ಮಾಡಲು ಪ್ರಯತ್ನ ನಡೆಸಿದ ಉಗ್ರನನ್ನು ಬಂಧಿಸಲಾಗಿದೆ. 'ಫೋನ್ ಮೂಲಕ ದಾಳಿ ಮಾಡಲು ಸೂಚನೆ ಬಂದಿತ್ತು' ಎಂದು ಉಗ್ರ ಹೇಳಿಕೆ ನೀಡಿದ್ದಾನೆ.
ದಕ್ಷಿಣ ಕಾಶ್ಮೀರದಲ್ಲಿ ಸೋಮವಾರ ಓವೈಸ್ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಬಿಜ್ಬೆಹರಾ ನಿವಾಸಿಯಾಗಿದ್ದು, ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದವನು ಎಂದು ಶಂಕಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.

'ನನಗೆ ದಾಳಿ ಮಾಡಲು ಪೋನ್ ಮೂಲಕ ಸೂಚನೆ ನೀಡಲಾಗಿತ್ತು. ಕಾರನ್ನು ಚಲಾಯಿಸಿಕೊಂಡು ಹೋಗಿ ಬಟನ್ ಒತ್ತುವುದು ಮಾತ್ರ ನನ್ನ ಕೆಲಸವಾಗಿತ್ತು' ಎಂದು ಓವೈಸ್ ಅಹ್ಮದ್ ಪ್ರಾಥಮಿಕ ವಿಚಾರಣೆ ವೇಳೆ ಹೇಳಿದ್ದಾನೆ.
'ನಾನು ಕಾರಿನಲ್ಲಿ ಇದ್ದಾಗಲೇ ಬಟನ್ ಪ್ರೆಸ್ ಮಾಡಿದೆ. ಈ ಕೃತ್ಯ ಮಾಡುವಾಗ ನಾನು ಕಾರಿನಲ್ಲಿ ಏಕಾಂಗಿಯಾಗಿದ್ದೆ' ಎಂದು ಪ್ರಾಥಮಿಕ ತನಿಖೆ ವೇಳೆ ಓವೈಸ್ ಅಹ್ಮದ್ ತಪ್ಪೊಪ್ಪಿಕೊಂಡಿದ್ದಾನೆ.
ಶನಿವಾರ ಬನಿಹಾಲ್ ಬಳಿಯ ಹೆದ್ದಾರಿಯಲ್ಲಿ ಸಿಎಆರ್‌ಪಿಎಫ್‌ನ 10 ವಾಹನಗಳು ಚಲಿಸುತ್ತಿದ್ದಾಗ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆ ಕಡಿಮೆ ಇದ್ದ ಕಾರಣ ಯಾವುದೇ ಜೀವ ಹಾನಿಯಾಗಿರಲಿಲ್ಲ. ಕಾರು ಮಾತ್ರ ಸಂಪೂರ್ಣವಾಗಿ ಜಖಂಗೊಂಡಿತ್ತು.
#WATCH Confession of the accused in the car blast in Banihal, Ramban, after his arrest, today. #JammuAndKashmir pic.twitter.com/H2ABl6oj8o
— ANI (@ANI) April 1, 2019
ಫೆಬ್ರವರಿ 14ರಂದು ಪುಲ್ವಮಾದಲ್ಲಿ ಸಿಆರ್‌ಪಿಎಫ್ ವಾಹನಕ್ಕೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಲಾಗಿತ್ತು. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಇದೇ ಮಾದರಿಯಲ್ಲಿ ಬನಿಹಾಲ್ ಬಳಿ ಸ್ಫೋಟ ನಡೆಸಲಾಗಿತ್ತು.












Click it and Unblock the Notifications