ಅಪ್ಪಾ ಮಿಸ್‌ ಯೂ, ಹೊರಗೆ ಬನ್ನಿ: ಉಗ್ರನ ಶರಣಾಗತಿಗೆ 4 ವರ್ಷದ ಮಗನ ಮನವಿ

ಶ್ರೀನಗರ, ಮಾರ್ಚ್ 24: ಶೋಪಿಯಾನ್ ಎನ್‌ಕೌಂಟರ್ ಸಂದರ್ಭದಲ್ಲಿ ಉಗ್ರನ ಶರಣಾಗತಿಗೆ 4 ವರ್ಷದ ಮಗ ಮಾಡಿಕೊಂಡ ಮನವಿ ಕರುಳು ಹಿಂಡುವಂತಿತ್ತು.

ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಗ್ರನೊಬ್ಬ ಅಡಗಿಕುಳಿತಿರುವಾಗ ಶರಣಾಗುವಂತೆ ಹೇಳುತ್ತಿರುವ ದೃಶ್ಯ ಸೆರೆಯಾಗಿದೆ.

ಅಪ್ಪಾ ಮಿಸ್‌ ಯೂ..ನಾನು ನಿಮ್ಮನ್ನು ನೋಡಬೇಕು, ಮಾತನಾಡಬೇಕು ಹೊರಗೆ ಬನ್ನಿ, ನೀವು ಹೊರಗೆ ಬಂದರೆ ಯಾರೂ ನಿಮಗೆ ಏನೂ ಮಾಡುವುದಿಲ್ಲ ಎಂದು ಬಾಲಕ ಹೇಳಿದ್ದಾನೆ. ಯೋಧರು ಆತನನ್ನು ಶರಣಾಗುವಂತೆ ಎಷ್ಟೇ ಕೇಳಿಕೊಂಡರೂ ಹೊರಬರದಿದ್ದಾಗ, ಅವರ ಕುಟುಂಬವು ಮನವಿ ಮಾಡಿಕೊಂಡಿತ್ತು.

 Come Out, Missing You: Four-Year-Old Requests Father To Surrender During Shopian Encounter

25 ವರ್ಷದ ಅಕ್ವಿಬ್ ಅಹ್ಮದ್ ಮಲಿಕ್ ಮೂರು ತಿಂಗಳ ಹಿಂದಷ್ಟೇ ಕಾಶ್ಮೀರದಲ್ಲಿ ಉಗ್ರರ ಗುಂಪು ಸೇರಿಕೊಂಡಿದ್ದ. ಸೋಮವಾರ ನಡೆದ ಗನ್‌ಫೈಟ್‌ನಲ್ಲಿ ಉಗ್ರನ ಜತೆಗಿದ್ದ ಮೂವರು ಉಗ್ರರು ಕೂಡ ಸಾವನ್ನಪ್ಪಿದ್ದಾರೆ.

ಕೇವಲ ಮಗ ಮಾತ್ರವಲ್ಲದೆ ಆತನ ಪತ್ನಿಯೂ ಕೂಡ ಶರಣಾಗುವಂತೆ ಕೇಳಿಕೊಂಡಿದ್ದಾರೆ. ದಯವಿಟ್ಟು ಹೊರಗೆ ಬನ್ನಿ ಶರಣಾಗಿ, ಇಲ್ಲವಾದಲ್ಲಿ ನನ್ನನ್ನು ಶೂಟ್ ಮಾಡಿ, ನಮ್ಮ ಮಕ್ಕಳೂ ಕೂಡ ನನ್ನೊಂದಿಗೆ ಇದ್ದಾರೆ ಎಂದು ಪತ್ನಿ ಗೋಗರೆದಿದ್ದಾರೆ.

ಆದರೆ, ಕುಟುಂಬದ ಯಾರೊಬ್ಬರ ಮನವಿಗೂ ಉಗ್ರ ಸ್ಪಂದಿಸದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ ಭದ್ರತಾ ಸಿಬ್ಬಂದಿ, ಅಕ್ವಿಬ್ ಸೇರಿ ಅಡಗಿದ್ದ ನಾಲ್ವರು ಉಗ್ರರನ್ನೂ ಹೊಡೆದುರುಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+