ಕಾಶ್ಮೀರದಲ್ಲಿ ಮೈನಸ್ 7.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು
ಶ್ರೀನಗರ, ಜನವರಿ 17: ಕಾಶ್ಮೀರದಲ್ಲಿ ಎಲ್ಲಾ ನದಿಗಳು ಹೆಪ್ಪುಗಟ್ಟಿವೆ. ಜನರು ಚಳಿಯಲ್ಲಿ ಉಸಿರು ಬಿಗಿಹಿಡಿದುಕೊಂಡು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಶ್ಮೀರದಲ್ಲಿ ಇಂದು ಮೈನಸ್ 7.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜನವರಿ ತಿಂಗಳ ಮೊದಲ ವಾರದಿಂದಲೇ ಶೀತ ಅಲೆ ಬೀಸುತ್ತದೆ.
ಅಲ್ಲದೆ ಭಾರೀ ಹಿಮಪಾತದಿಂದ ವಿಮಾನಯಾನ ಮತ್ತು ಸಾರಿಗೆ ಸಂಪರ್ಕಕ್ಕೆ ತೊಂದರೆ ಉಂಟಾಗಿತ್ತು, ಜನವರಿ 13 ಮತ್ತು 14ರ ಮಧ್ಯರಾತ್ರಿ ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

1983ರಲ್ಲಿ ಕನಿಷ್ಠ ತಾಪಮಾನ ಮೈನಸ್ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಈವರೆಗಿನ ಅತಿ ಕನಿಷ್ಠ ಉಷ್ಣಾಂಶವಾಗಿದೆ.ಕಾಶ್ಮೀರದಲ್ಲಿ ಜನವರಿ 21ರವರೆಗೆ ಒಣಹವೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಶ್ರೀನಗರದಲ್ಲಿ ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕಾಶ್ಮೀರದ ಪ್ರಸಿದ್ಧ ದಾಲ್ ಸರೋವರ ಹೆಪ್ಪುಗಟ್ಟಿದೆ.












Click it and Unblock the Notifications