ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕಿಸ್ತಾನ ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಯೋಧರು

|
Google Oneindia Kannada News

ಶ್ರೀನಗರ, ಆಗಸ್ಟ್ 29: ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಸುರಂಗವನ್ನು ಪತ್ತೆ ಹಚ್ಚಿದ್ದಾರೆ.

ಸಾಂಭಾ ಜಿಲ್ಲೆಯಲ್ಲಿ ಈ ಸುರಂಗ ಕಂಡು ಬಂದಿದೆ. ಸುರಂಗವು 25 ಅಡಿ ಆಳವಿದ್ದು, 150 ಮೀಟರ್ ಅಷ್ಟು ಉದ್ದವಿದೆ. ಮರಳು ಚೀಲ ಹಾಗೂ ಕರಾಚಿ, ಶಕ್ಕೇರ್‌ಗಢದ ಕೆಲವು ಮಾರ್ಕಿಂಗ್‌ಗಳು ಲಭ್ಯವಾಗಿವೆ.

ಪುಲ್ವಾಮಾ: ಮಧ್ಯರಾತ್ರಿ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ, ಒಬ್ಬ ಯೋಧ ಹುತಾತ್ಮಪುಲ್ವಾಮಾ: ಮಧ್ಯರಾತ್ರಿ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ, ಒಬ್ಬ ಯೋಧ ಹುತಾತ್ಮ

ಇಂತಹ ಸುರಂಗದಿಂದ ಉಗ್ರರು ಒಳನುಸುಳುವ ಸಾಧ್ಯತೆ ಇರುವುದರಿಂದ ಸುತ್ತಮಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಮ್ಮುವಿನ ಬಳಿ ಇದಕ್ಕೂ ಮೊದಲು ಕೂಡ ಒಂದು ಸುರಂಗ ಪತ್ತೆಯಾಗಿತ್ತು.

BSF Detects Tunnel Along India-Pakistan Border

2012ರಲ್ಲಿ ಬಿಎಸ್‌ಎಫ್ ಯೋಧರು 400 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿದ್ದರು. 2014ರಲ್ಲಿ ಪಲನ್‌ವಾಲಾ ಸೆಕ್ಟರ್ ಬಳಿ ಕೂಡ ಇಂತದ್ದೇ ಸುರಂಗ ಪತ್ತೆಯಾಗಿತ್ತು.

ಅದೇ ವರ್ಷ ಸಾಂಬಾದ ಚಿಲ್ಯಾರಿ ಪ್ರದೇಶದಲ್ಲಿ ಮತ್ತೊಂದು ಸುರಂಗವನ್ನು ಪತ್ತೆ ಮಾಡಲಾಗಿತ್ತು. ಭಾರತದ ಭೂಭಾಗದಲ್ಲಿ ಸುಮಾರು 25 ಮೀಟರ್‌ನಷ್ಟು ಸುರಂಗ ತೋಡಿದ್ದರು.

ಮಾರ್ಚ್ 2017ರಲ್ಲಿ 30 ಮೀಟರ್ ಉದ್ದದ ಪಾಕಿಸ್ತಾನದಿಂದ ಆರಂಭವಾಗಿದ್ದ ಸುರಂಗವು ಪತ್ತೆಯಾಗಿತ್ತು. 2017ರಲ್ಲಿ ಸಾಂಬಾ ಸೆಕ್ಟರ್‌ನ ಆರ್‌ಎಸ್ ಪುರದಲ್ಲಿ ಕೂಡ ಸುರಂಗ ಕಾಣಿಸಿತ್ತು.

English summary
In a major breakthrough, Border Security Force (BSF) on Saturday detected an underground tunnel near the international border in Samba district’s Bengalad area in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X