ಜಮ್ಮು ಕಾಶ್ಮೀರದಲ್ಲಿ ಹಿಮಪಾತ: ಓರ್ವ ಯೋಧ ಸಾವು, ಮೂವರು ನಾಪತ್ತೆ
ಶ್ರೀನಗರ ಡಿಸೆಂಬರ್ 4: ಜಮ್ಮು ಕಾಶ್ಮೀರದಲ್ಲಿ ಹಿಪಾತಕ್ಕೆ ಸಿಲುಕಿ ಓರ್ವ ಯೋಧ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ಘಟನೆ ನಂತರ ಕಾಣೆಯಾದ ಯೋಧರನ್ನು ಹುಡುಕಲು ಸೇನೆಯು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.. ಈ ವೇಳೆ ಓರ್ವ ಸಿಬ್ಬಂದಿಯನು ಯಶಸ್ವಿಯಾಗಿ ರಕ್ಷಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಕುಪ್ವಾರಾದಲ್ಲಿ ಹಿಮದ ಕೆಳಗೆ ಸಿಕ್ಕಿಬಿದ್ದ ಕಾಣೆಯಾದ ಸೇನಾ ಯೋಧರ ಪತ್ತೆಗಾಗಿ ಪಾರುಗಾಣಿಕಾ ತಂಡ ಪ್ರಯತ್ನಿಸುತ್ತಿದೆ, ಆದಾಗ್ಯೂ, ಕಠಿಣ ಹವಾಮಾನ ಪರಿಸ್ಥಿತಿಗಳು ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಹಿಮಪಾತವಾಗಿದ್ದು ಸೇನೆಯ ಪೋಸ್ಟ್ ನಲ್ಲಿದ್ದ ಓರ್ವ ಯೋಧ ಸಾವನ್ನಪ್ಪಿದ್ದರೆ ಮೂವರು ನಾಪತ್ತೆಯಾಗಿದ್ದಾರೆ ಎಂದು ಸೇನಾಮೂಲಗಳು ಹೇಳಿದೆ.
ಈ ಮೊದಲು ನವೆಂಬರ್ 18 ರಂದು ಸಿಯಾಚಿನ್ ಹಿಮನದಿಯಲ್ಲಿ ಸುಮಾರು 18,000 ಅಡಿ ಎತ್ತರದಲ್ಲಿ ನಡೆದ ಘಟನೆಯಲ್ಲಿ, ನಾಲ್ಕು ಭಾರತೀಯ ಸೈನಿಕರು ಸಾವನ್ನಪ್ಪಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದರು. ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಿನಿಂದ ಹಿಮಪಾತ ಆರಂಭವಾಗಿದೆ.












Click it and Unblock the Notifications