ಕುಪ್ವಾರದ ಸೇನಾ ಶಿಬಿರದ ಬಳಿ ಹಿಮಪಾತ: ಓರ್ವ ಯೋಧ ಹುತಾತ್ಮ

ಶ್ರೀನಗರ, ನವೆಂಬರ್ 18: ಜಮ್ಮು-ಕಾಶ್ಮೀರದ ಕುಪ್ವಾರ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿರುವ ಸೇನಾ ಶಿಬಿರದ ಮೇಲೆ ಹಿಮಪಾತ ಉಂಟಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ನಂತರ, ಸೈನಿಕರಾದ ನಿಖಿಲ್ ಶರ್ಮಾ, ರಮೇಶ್ ಚಂದ್ ಮತ್ತು ಗುರುವಿಂದರ್ ಸಿಂಗ್ ಎಂದು ಗುರುತಿಸಲಾದ ಮೂವರನ್ನು ರಕ್ಷಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ರಾತ್ರಿ 8 ಗಂಟೆಗೆ 'ರೋಶನ್' ಎಂಬ ಮುನ್ನೆಲೆ ಶಿಬಿರಕ್ಕೆ ಹಿಮಪಾತ ಅಪ್ಪಳಿಸಿದೆ. ಶಿಬಿರದಲ್ಲಿದ್ದ ಮೂವರು ಸೈನಿಕರು ಹಿಮಪಾತದಲ್ಲಿ ಹೂತುಹೋಗಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

 Avalanche Hits Army Post In Kupwara Soldier Killed

ಹಿಮಾಲಯದಲ್ಲಿ ಮೊದಲ ಹಿಮಪಾತದ ಅನುಭವವಾಗಿದೆ. ಚಳಿಗಾಲದ ಆರಂಭದೊಂದಿಗೆ ಉತ್ತರಾಖಂಡ್ ರಾಜ್ಯದಲ್ಲಿ ಭಾನುವಾರ, ಸೋಮವಾರದಂದು ಭಾರಿ ಹಿಮಪಾತ, ಹಿಮಮಳೆ ಸುರಿದಿದೆ.

ಚಾರ್ ಧಾಮ್ ಯಾತ್ರಾಸ್ಥಳಗಳಾದ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ, ಔಲಿ, ಹರ್ಸಿಲ್ ಮುಂತಾದೆಡೆ ಭಾನುವಾರ ಸಂಜೆ ಆರಂಭವಾದ ಭಾರಿ ಹಿಮಮಳೆ ಸೋಮವಾರವೂ ಮುಂದುವರೆದಿದೆ. ದಟ್ಟವಾದ ಹಿಮಚ್ಛಾದಿತ ಪ್ರದೇಶ ಎಲ್ಲೆಡೆ ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+