ಹಂದ್ವಾರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರು ಯೋಧರು ಹುತಾತ್ಮ
ಶ್ರೀನಗರ, ಮೇ 3: ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಭಾರತೀಯ ಸೇನೆಯ ಮೇಲೆ ಅಟ್ಟಹಾಸ ಮೆರದಿದ್ದಾರೆ.
ಕಾಶ್ಮೀರ ವ್ಯಾಪ್ತಿಯ ಹಂದ್ವಾರದ ಉತ್ತರ ಭಾಗದ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಭೀಕರ ಕಾಳಗದಲ್ಲಿ ಇಬ್ಬರು ಸೇನಾಧಿಕಾರಿಗಳು ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಅರಣ್ಯದ ಮನೆಯೊಂದರಲ್ಲಿ ಅಡಗಿ ಕುಳತಿದ್ದ ಪಾಕಿಸ್ತಾನ ಮೂಲದ ಉಗ್ರರ ಗುಂಪಿನ ಮೇಲೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಸೇನಾ ಪಡೆಯ ಯೋಧರು ಶನಿವಾರ ತಡರಾತ್ರಿವರೆಗೂ ಉಗ್ರರನ್ನು ಹೊಡೆದುರಳಿಸಲು ಕಾಳಗ ನಡೆಸಿದರು.

ಈ ವೇಳೆ ಭಾರತೀಯ ಸೇನೆಯ ಇಬ್ಬರು ಯೋಧರು, ಜಮ್ಮ ಕಾಶ್ಮೀರ ಘಟಕದ ಸೇನಾ ಕಮಾಂಡರ್, 21 ರಾಷ್ಟ್ರೀಯ ರೈಫಲ್ಸ್ ನ ಸೇನಾಧಿಕಾರಿ ಹಾಗೂ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಒಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ.
ಸೇನಾ ಪಡೆ ನಡೆಸಿದ ದಾಳಿಗೆ ಇಬ್ಬರು ಉಗ್ರರು ಸಹ ಮೃತಪಟ್ಟು ಹಲವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಉಗ್ರರ ಭೇಟೆಯನ್ನು ಸೇನಾ ಪಡೆ ಮುಂದುವರೆಸಿದೆ.












Click it and Unblock the Notifications