ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಫ್ರಿ ಮೇಲೆ ಹಲ್ಲೆ; ಕುಸ್ತಿಪಟು ಸತೇಂದರ್‌ ಮಲಿಕ್‌ಗೆ ಅಜೀವ ನಿಷೇಧ

|
Google Oneindia Kannada News

ನವದೆಹಲಿ, ಮೇ 19; ಕಾಮನ್‌ವೆಲ್ತ್‌ ಗೇಮ್ಸ್‌ ಟ್ರೈಯಲ್ಸ್‌ ಫೈನಲ್‌ನಲ್ಲಿ ಸೋಲುಕಂಡ ಕುಸ್ತಿಪಟು ಸತೇಂದರ್ ಮಲಿಕ್ ರೆಫರಿ ಜಗಬೀರ್‌ ಸಿಂಗ್ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಗಳವಾರ ನಡೆದಿದೆ.

ನವದೆಹಲಿಯ ಕೆಡಿ ಜಾಧವ್‌ ಸ್ಟೇಡಿಯಂನಲ್ಲಿ ನಡೆದ 125 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಸತೇಂದರ್‌ ಮತ್ತು ಏರ್‌ಫೋರ್ಸ್‌ನ ಮೋಹಿತ್‌ ನಡುವ ಹಣಾಹಣಿ ನಡೆದಿತ್ತು. ಬೌಟ್‌ ಕೊನೆಗೊಳ್ಳಲು 18 ಸೆಕೆಂಡ್‌ಗಳಿದ್ದಾಗ ಸತೇಂದರ್‌ 3-0ಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

ಈ ಸಂದರ್ಧದಲ್ಲಿ ಟೇಕ್‌ಡೌನ್ ನಡೆ ಪ್ರಯೋಗಿಸಿದ ಎದುರಾಳಿ ಮೋಹಿತ್‌ ಸತೇಂದರ್‌ರನ್ನು ಮ್ಯಾಟ್‌ನಿಂದ ಹೊರದೂಡಿದರು. ಆದರೆ ರೆಫರಿ ವಿರೇಂದರ್ ಮಲಿಕ್‌ ಟೇಕ್‌ಡೌನ್‌ಗೆ ಎರಡು ಪಾಯಿಂಟ್‌ ನೀಡದೇ, ಹೊರದೂಡಿದ್ದಕ್ಕೆ ಕೇವಲ ಒಂದು ಪಾಯಿಂಟ್‌ ನೀಡಿದರು. ಈ ನಿರ್ಧಾರ ಅಸಮಾಧಾನಗೊಂಡ ಮೋಹಿತ್‌ ಉಳಿದ ಎರಡು ಪಾಯಿಂಟ್‌ಗಾಗಿ ಮೇಲ್ಮನವಿ ಸಲ್ಲಿಸಿದರು.

ಬೌಟ್‌ನ ಜ್ಯೂರಿ ಆಗಿದ್ದ ಸತ್ಯದೇವ್‌ ಮಲಿಕ್‌, ರೆಫರಿಯ ನಿರ್ಧಾರಕ್ಕೆ ಕ್ಷಮೆ ಕೋರಿ ಸೀನಿಯರ್ ರೆಫರಿ ಆಗಿದ್ದ ಜಗಬೀರ್ ಸಿಂಗ್ ಮೋಹಿತ್‌ ಮನವಿಯನ್ನು ಪರಿಗಣಿಸಿ ಟಿವಿ ರಿವ್ಯೂವ್‌ಗೆ ಸೂಚಿಸಿದರು. ಟಿವಿ ರಿಪ್ಲೇ ನೋಡಿದ ಬಳಿಕ ಜಗಬೀರ್, ಮೋಹಿತ್‌ಗೆ ಮೂರು ಪಾಯಿಂಟ್ಸ್ ನೀಡಿದ್ದಾರೆ.

ನಂತರ ಪಂದ್ಯ 3-3ರಲ್ಲಿ ಸಮಬಲದಲ್ಲೇ ಕೊನೆಯಾಯಿತು. ಆದರೆ ನಿಯಮದಂತೆ ಬೌಟ್‌ನ ಕೊನೆಯ ಪಾಯಿಂಟ್‌ ಗಳಿಸಿದ್ದ ಮೋಹಿತ್ ಅವರನ್ನು ಜಯಶಾಲಿ ಎಂದು ಪ್ರಕಟಿಸಲಾಯಿತು. ಇದರಿಂದ ಸಂಯಮ ಕಳೆದುಕೊಂಡ ಸತೇಂದರ್‌ ಮಲಿಕ್, ರವಿ ದಹಿಯಾ ಮತ್ತು ಅಮನ್‌ ನಡುವೆ ಇನ್ನೊಂದು ಮ್ಯಾಟ್‌ನಲ್ಲಿ ಬೌಟ್‌ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಅಲ್ಲಿದ್ದ ಸೀನಿಯರ್ ರೆಫರಿ ಜಗಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ.

Wrestler Satender Malik Gets Life Ban After Assaulting Referee Jagbir Singh During CWG Trials

ಮೊದಲು ಜಗಬೀರ್‌ರನ್ನು ನಿಂದಿಸಿದ ಸತೇಂದರ್‌, ನಂತರ ಕಪಾಲಕ್ಕೆ ಹೊಡೆದರು. ತಕ್ಷಣವೇ ರೆಫರಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕುಸ್ತಿ ವೀಕ್ಷಣೆಗೆ ಬಂದಿದ್ದ ನೂರಾರು ಅಭಿಮಾನಿಗಳು, ಸ್ಪರ್ಧೆಗಳು ಹಾಗೂ ಪಂದ್ಯದ ಅಧಿಕಾರಿಗಳು ಈ ಅಚಾನಕ್‌ ಘಟನೆ ನೋಡಿ ಒಂದು ಕ್ಷಣ ಆಘಾತಕ್ಕೆ ಒಳಗಾಗದರು. ತಕ್ಷಣ 57 ಕೆಜಿ ವಿಭಾಗದ ಫೈನಲ್‌ ಬೌಟ್‌ಅನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಸತೇಂದರ್‌ ಅವರನ್ನು ಹೊರಗೆ ಕಳುಹಿಸಿ ಬೌಟ್‌ ಪುನರಾರಂಭಿಸಲಾಯಿತು.

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

English summary
Wrestler Satender Malik physical assault on referee Jagbir Singh after losing the 125kg final during the Commonwealth Games trials in New Delhi on Tuesday, prompting the national federation to impose a life ban on him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X