WPL 2026 RCB: ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಗಳು
WPL 2026 RCB: ಜನವರಿ 16ರ ಶುಕ್ರವಾರ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿತು. ಈ ಮೂಲಕ ಡಬ್ಲ್ಯೂಪಿಎಲ್ 2026ರ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವು ಖಂಡಿದೆ. ಹಾಗಾದ್ರೆ, ನಿನ್ನೆಯ ಜಯಭೇರಿಗೆ ಪ್ರಮುಖ ಕಾರಣಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯು ಗುಜರಾತ್ ಜೈಂಟ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ಕಂಡಿದ್ದು, ಇದು ಆರ್ಸಿಬಿಯ ಹ್ಯಾಟ್ರಿಕ್ ಜಯ ಆಗಿದೆ. ಟಾಸ್ ಗೆದ್ದ ಗುಜರಾತ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ರಾಧಾ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್: ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಕಲೆಹಾಕುವ ಮೂಲಕ ಗುಜರಾತ್ ಜೈಂಟ್ಸ್‌ಗೆ 183 ರನ್‌ಗಳನ್ನು ಗುರಿ ನೀಡಿತು. ರಾಧಾ ಯಾದವ್ ಹಾಗೂ ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗಿನಿಂದ ತಂಡಕ್ಕೆ ಬೃಹತ್ ರನ್‌ಗಳು ಹರಿದುಬಂದವು.
ರಾಧಾ ಯಾದವ್ 47 ಬಾಲ್‌ಗೆ 6 ಬೌಂಡರಿ, 3 ಸಿಕ್ಸ್ ಸಹಿತ 66 ರನ್ ಕಲೆಹಾಕಿದರು. ರಿಚಾ ಘೋಷ್ 28 ಬಾಲ್‌ಗಳಲ್ಲಿ 2 ಸಿಕ್ಸ್, 4 ಬೌಂಡರಿ ಸಹಿತ 44 ರನ್ ಕಲೆಹಾಕಿ ತಂಡಕ್ಕೆ ನೆರವಾದರು. ಇನ್ನೂ ಗ್ರೇಸ್ ಹ್ಯಾರಿಸ್ 17(8), ನಾಯಕಿ ಸ್ಮೃತಿ ಮಂಧಾನ 5(8), ದಯಾಲನ್ ಹೇಮಾಲತಾ 4(8), ಗೌತಮಿ ನಾಯಕ್ 9(6), ನಾಡಿನ್ ಡಿ ಕ್ಲರ್ಕ್ 26(12), ಅರುಂಧತಿ ರೆಡ್ಡಿ 2(2) ರನ್ ಕಲೆಹಾಕಿದರು.
ಶ್ರೇಯಾಂಕಾ ಸ್ಪಿನ್ ಮೋಡಿ: ಬಳಿಕ ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 18.5 ಓವರ್‌ಗಳಿಗೆ ಬರೀ 150 ರನ್‌ಗಳನ್ನು ಮಾತ್ರ ಕಲೆಹಾಕಿ ಸೋಲನುಭವಿಸಿತು. ಅಷ್ಟರ ಮಟ್ಟಿಗೆ ಆರ್‌ಸಿಬಿ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ನಡೆಸಿದರು. ಶ್ರೇಯಾಂಕ ಪಾಟೀಲ್ ಅವರು ಸ್ಪಿನ್ ಮೋಡಿ ಮಾಡಿ ಐದು ವಿಕೆಟ್ ಕಬಳಿಸಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಯಾರಿಗೆ ಎಷ್ಟು ವಿಕೆಟ್?: ಶ್ರೇಯಾಂಕಾ ಪಾಟೀಲ್ 4 ಓವರ್‌ಗಳಲ್ಲಿ 23 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿ ಮಿಂಚಿದರು. ಇನ್ನೂ ಲಾರೆನ್ಸ್ ಬೆಲ್ 3, ಅರುಂಧತಿ ರೆಡ್ಡಿ ಹಾಗೂ ನಾಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾದವು. ಎರಡು ಬಲಿಷ್ಠ ತಂಡಗಳ ನಡುವಿನ ಸ್ಪರ್ಧೆ ಭಾರೀ ಕುತೂಹಲ ಕೆರಳಿಸಿತ್ತು. ಕೊನೆಗೆ ಸ್ಮೃತಿ ಮಂಧಾನ ಬಳಗ ಗುಜರಾತ್ ತಂಡವನ್ನು ಮಣಿಸುವ ಮೂಲಕ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ಆರಂಭದಲ್ಲಿ ನಿರೀಕ್ಷಿಸಿದಷ್ಟು ರನ್‌ಗಳನ್ನು ಬರಲಿಲ್ಲ. ಪವರ್‌ಪ್ಲೇನಲ್ಲಿ ಕೇವಲ 45 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು ಸಂಕಷ್ಟಕ್ಕೆ ಸಿಲುಕಿತು. ಬಳಿಕ ರಾಧಾ ಯಾದವ್ ಮತ್ತು ರಿಚಾ ಘೋಷ್ 5ನೇ ವಿಕೆಟ್‌ಗೆ ಅದ್ಭುತ ಆಟ ಮುಂದುವರೆಸಿದರು.
ರಾಧಾ ಯಾದವ್ 47 ಎಸೆತಗಳಲ್ಲಿ 66 ರನ್, ರಿಚಾ ಘೋಷ್ 28 ಎಸೆತಗಳಲ್ಲಿ 44 ರನ್‌ಗಳನ್ನು ಕಲೆಹಾಕಿದರು. ಇಬ್ಬರು ಆಟಗಾರ್ತಿಯರು 66 ಎಸೆತಗಳಲ್ಲಿ 5ನೇ ವಿಕೆಟ್‌ಗೆ 105 ರನ್ ಕಲೆಹಾಕಿದರು. ನಂತರ ನಾಡಿನ್ ಡಿ ಕ್ಲರ್ಕ್ 26 ರನ್ ಗಳಿಸಿದರು. ಈ ಮೂವರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡದ ಮೊತ್ತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 182 ರನ್‌ಗಳಿಗೆ ತಲುಪಿತು.
ಬ್ಯಾಟಿಂಗ್‌ನಲ್ಲಿ ಗುಜರಾತ್ ಜೈಂಟ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಆದರೂ ಆರ್‌ಸಿಬಿ ಬೌಲರ್‌ಗಳು ಎದುರಾಳಿ ತಂಡದ ಬ್ಯಾಟರ್ಗಳನ್ನು ನಿಯಂತ್ರಣದಲ್ಲಿಡುವ ಮೂಲಕ ಕಡಿಮೆ ರನ್‌ಗಳಿಗರ ಕಟ್ಟಿಹಾಕಿದರು. ಶ್ರೇಯಾಂಕಾ ಪಾಟೀಲ್ ಮಾರಕ ಬೌಲಿಂಗ್ ದಾಳಿ ನಡೆಸಿ, 3.5 ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಪಡೆದರು.
ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣ
* ಸ್ಫೋಟಕ ಬ್ಯಾಟ್ ಬೀಸಿದ ರಾಧಾ ಯಾದವ್, ರಿಚಾ ಘೋಷ್, ನಾಡಿನ್ ಡಿ ಕ್ಲರ್ಕ್.
* ಮಾರಕ ಬೌಲಿಂಗ್ ದಾಳಿ ನಡೆಸಿದ ಶ್ರೇಯಂಕಾ ಪಾಟೀಲ್, ಲಾರೆನ್ ಬೆಲ್.
* ಗುಜರಾತ್ ಜೈಂಟ್ಸ್ ಬ್ಯಾಟರ್‌ಗಳನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ ಬೌಲರ್‌ಗಳು.
* ಮಧ್ಯಮ ಕ್ರಮಾಂಕದದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ.
* ಐದು ವಿಕೆಟ್ ಕಬಳಿಸಿದ ಕನ್ನಡತಿ ಶ್ರೇಯಂಕಾ ಪಾಟೀಲ್.












Click it and Unblock the Notifications