ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ 1204 ಶ್ರೇಯಾಂಕಿತೆ ಸೆರೆನಾ, ವಿಂಬಲ್ಡನ್ ರೀ ಎಂಟ್ರಿ ಕುತೂಹಲ!

|
Google Oneindia Kannada News

ಲಂಡನ್, ಜೂನ್ 25: ಟೆನಿಸ್ ಪ್ರಿಯರ ಬಹುನಿರೀಕ್ಷಿತ ವಿಂಬಲ್ಡನ್ ಪಂದ್ಯಾವಳಿ ಜೂನ್ 27ರಿಂದ ಆರಂಭವಾಗಲಿದೆ. ಮಹಿಳೆಯರ ವಿಭಾಗದಲ್ಲಿ ಇಗಾ ಸ್ವಿಟೆಕ್ ಅವರು ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಸೆರೆನಾ ವಿಲಿಯಮ್ಸ್ ಮತ್ತೆ ಲಯಕ್ಕೆ ಮರಳುವುದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ಸುಮಾರು 12 ತಿಂಗಳ ಬಳಿಕ ರೀ ಎಂಟ್ರಿ ಕೊಡುತ್ತಿದ್ದು, ವಿಶ್ವದ 1204 ಶ್ರೇಯಾಂಕಿತೆ ಸೆರೆನಾ ಕೂಡಾ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಕಣಕ್ಕಿಳಿಯುತ್ತಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಏಳು ಬಾರಿ ಚಾಂಪಿಯನ್ ಆಗಿರುವ ಸೆರೆನಾ ದಾಖಲೆಯ 24 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಂಬಲ್ಡನ್ ಗೆದ್ದ ಮೊದಲ ಶ್ರೇಯಾಂಕರಹಿತ ಮಹಿಳಾ ಆಟಗಾರ್ತಿ ಎನಿಸಿಕೊಳ್ಳಲು ಸೆರೆನಾ ಸಜ್ಜಾಗಿದ್ದು, ಪಂಡಿತರ ಲೆಕ್ಕಾಚಾರ ಉಲ್ಟಾ ಮಾಡುವ ಉತ್ಸಾಹದಲ್ಲಿದ್ದಾರೆ.

 ಪೌರತ್ವ ಬದಲಿಸಿಕೊಂಡ ರಷ್ಯನ್ ತಾರೆಗೆ ವಿಂಬಲ್ಡನ್‌ನಲ್ಲಿ ಆಡುವ ಅವಕಾಶ ಪೌರತ್ವ ಬದಲಿಸಿಕೊಂಡ ರಷ್ಯನ್ ತಾರೆಗೆ ವಿಂಬಲ್ಡನ್‌ನಲ್ಲಿ ಆಡುವ ಅವಕಾಶ

2021ರಲ್ಲಿ ಅಲಿಯಾಕ್ಸಂಡ್ರಾ ಸಾಸ್ನೋವಿಚ್ ವಿರುದ್ಧದ ಮೊದಲ ಸುತ್ತಿನಲ್ಲಿ ಸೋತು ಕಣ್ಣೀರು ಹಾಕುತ್ತಾ ವಿಂಬಲ್ಡನ್‌ನಿಂದ ಹೊರನಡೆದಿದ್ದ ಸೆರೆನಾ, ನಂತರ ವೃತ್ತಿ ಪರ ಟೆನಿಸ್ ಪಂದ್ಯವನ್ನಾಡಲಿಲ್ಲ. ಸೆರೆನಾ ಗ್ರ್ಯಾನ್ ಸ್ಲಾಮ್ ಬೇಟೆ ಇನ್ನೂ ಮುಂದುವರೆದಿದೆ...

ವಿಂಬಲ್ಡನ್ 2022 ಪಂದ್ಯಾವಳಿ ಆರಂಭ ದಿನಾಂಕ, ಆಟಗಾರರ ವಿವರ! ವಿಂಬಲ್ಡನ್ 2022 ಪಂದ್ಯಾವಳಿ ಆರಂಭ ದಿನಾಂಕ, ಆಟಗಾರರ ವಿವರ!

ಅಮೆರಿಕದ ತಾರೆ ಸೆರೆನಾ

ಅಮೆರಿಕದ ತಾರೆ ಸೆರೆನಾ

ಅಮೆರಿಕದ ತಾರೆ ಸೆರೆನಾ ಗರ್ಭಿಣಿಯಾಗಿದ್ದಾಗ 2017ರಲ್ಲಿ ಏಳನೇ ಆಸ್ಟ್ರೇಲಿಯನ್ ಓಪನ್ ಗೆದ್ದು, 23 ಸ್ಲಾಮ್‌ಗಳ ಒಡತಿ ಎನಿಸಿಕೊಂಡಿದ್ದರು. 2018 ಹಾಗೂ 2019ರಲ್ಲಿ ರನ್ನರ್ ಅಪ್ ಆಗಿದ್ದ ಸೆರೆನಾರ 24ನೇ ಗ್ರ್ಯಾನ್ ಸ್ಲಾಮ್ ಬೇಟೆ ಇನ್ನೂ ಮುಂದುವರೆದಿದೆ.

ಟೆನಿಸ್ ಲೋಕದಿಂದ ಬ್ರೇಕ್ ಪಡೆಯುತ್ತಿದ್ದಂತೆ, ನಿವೃತ್ತಿ ಬಗ್ಗೆ ಹಬ್ಬಿದ್ದ ಸುದ್ದಿಯನ್ನು ಅಲ್ಲಗೆಳೆದು, ''ನಾನು ನಿವೃತ್ತಿಯಾಗುತ್ತಿಲ್ಲ, ದೈಹಿಕ, ಮಾನಸಿಕ ವಿಶ್ರಾಂತಿ ಅಗತ್ಯವಿತ್ತು. ಯಾವುದೇ ಯೋಜನೆ ಇಲ್ಲದೆ ಒಂದು ದೀರ್ಘವಿರಾಮಕ್ಕೆ ತೆರಳಿದ್ದೆ, ಈಗ ಉತ್ತಮ ಆಟ ಪ್ರದರ್ಶನ ನೀಡಲು ಕಾತುರಳಾಗಿದ್ದೇನೆ'' ಎಂದು 40 ವರ್ಷ ವಯಸ್ಸಿನ ಟೆನಿಸ್ ತಾರೆ ಹೇಳಿದರು.

ಟೆನಿಸ್ ತಾರೆ ಸ್ವಿಯಾಟೆಕ್

ಟೆನಿಸ್ ತಾರೆ ಸ್ವಿಯಾಟೆಕ್

1998ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಆಡುತ್ತಿದ್ದಾಗ ಸದ್ಯದ ನಂಬರ್ 1 ಆಟಗಾರ್ತಿ ಈಗ ಸ್ವಿಯಾಟೆಕ್ ಇನ್ನೂ ಹುಟ್ಟಿರಲಿಲ್ಲ. 35 ಪಂದ್ಯಗಳ ಗೆಲುವು, ಎರಡನೇ ಫ್ರೆಂಚ್ ಕಿರೀಟ ಧರಿಸಿ ಸಕತ್ ಲಯದಲ್ಲಿ 21 ವರ್ಷದ ಟೆನಿಸ್ ತಾರೆ ಸ್ವಿಯಾಟೆಕ್ ಕಣಕ್ಕಿಳಿಯುತ್ತಿದ್ದಾರೆ.

2022 ರಲ್ಲಿ 6 ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಸ್ವಿಯಾಟೆಕ್, ವೀನಸ್, ಸೆರೆನಾ ಗೆಲುವಿನ ದಾಖಲೆಗಳನ್ನು ಈಗ ಸ್ವಿಯಾಟೆಕ್ ಮುರಿದಿದ್ದಾರೆ.

ಮೊದಲ ಸುತ್ತಿನಲ್ಲಿ ಕ್ರೊಯೇಷಿಯಾದ ಯಾನಾ ಫೆಟ್ ವಿರುದ್ಧ ಸ್ವಿಯಾಟೆಕ್ ಮೊದಲ ಪಂದ್ಯವಾಡಲಿದ್ದಾರೆ. ಆಸ್ಲೆ ಬಾರ್ಟಿ ನಿವೃತ್ತಿ, ನಯೋಮಿ ಒಸಾಕಾ ಗಾಯಾಳುವಾಗಿ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದು ಸ್ವಿಯಾಟೆಕ್ ಹಾದಿ ಸುಗುಮಗೊಳಿಸಬಹುದು. ಆದರೆ, ಸೆರೆನಾ ಬಗ್ಗೆ ಪ್ರತಿಕ್ರಿಯೆ ನೀಡಿ, ಆಕೆ ಟೆನಿಸ್ ಲೋಕದ ಲೆಜೆಂಡ್ ಆಕೆ ಆಡಿರುವಷ್ಟು ಟೆನಿಸ್ ಹಾಗೂ ಗೆಲುವಿನ ಪ್ರಮಾಣ ಮುಟ್ಟಲು ನಾನು ಶ್ರಮಿಸುವೆ ಎಂದಿದ್ದಾರೆ.

ವಿಂಬಲ್ಡನ್ 2022:

ವಿಂಬಲ್ಡನ್ 2022:

ವಿಂಬಲ್ಡನ್ 2022 ರಲ್ಲಿ, ನೊವಾಕ್ ಜೊಕೊವಿಕ್ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿ ಕಣಕ್ಕಿಳಿಯುತ್ತಿದ್ದರೆ, ಇಗಾ ಸ್ವಿಯಾಟೆಕ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿದ್ದಾರೆ.

ವಿಶ್ವದ ನಂ.1 ಡೆನಿಲ್ ಮೆಡ್ವೆಡೆವ್ ಈ ಬಾರಿ ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆಲ್ ಇಂಗ್ಲೆಂಡ್ ಕ್ಲಬ್ ತೆಗೆದುಕೊಂಡ ನಿರ್ಣಯದಂತೆ ರಷ್ಯಾದ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಯುದ್ಧದ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಇನ್ನು ವಿಶ್ವ ನಂ.2 ಸೀಡ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

128 ಆಟಗಾರರು ಕಣಕ್ಕೆ

128 ಆಟಗಾರರು ಕಣಕ್ಕೆ

ಜೂನ್ 27, 2022(ಸೋಮವಾರ)ದಿಂದ ಅಧಿಕೃತವಾಗಿ ಪಂದ್ಯಾವಳಿಗಳು ನಡೆಯಲಿವೆ. ಸದ್ಯದ ಮಾಹಿತಿಯಂತೆ ಸುಮಾರು 128 ಪುರುಷ ಹಾಗೂ 128 ಮಹಿಳಾ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ವಿಂಬಲ್ಡನ್ 2022 ನೋಡುವುದು ಎಲ್ಲಿ? ಹೇಗೆ?
ಟಿವಿ: ಸ್ಟಾರ್ ಸ್ಪೋರ್ಟ್ಸ್ ಸಮೂಹ ಜಾಲದಲ್ಲಿ ನೇರ ಪ್ರಸಾರವಾಗಲಿದೆ.
ಆನ್ ಲೈನ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್
ಫೈನಲ್ ಪಂದ್ಯ: ವಿಂಬಲ್ಡನ್ 2022ರ ಫೈನಲ್ ಪಂದ್ಯ ಜುಲೈ 10ರ ಭಾನುವಾರ ನಡೆಯಲಿದೆ.

English summary
Ranked a lowly 1,204 in the world and without a competitive singles match in 12 months, Serena Williams will sweep into Wimbledon targeting what would be her greatest triumph
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X