ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ

|
Google Oneindia Kannada News

ಬೆಂಗಳೂರು, ಜೂನ್ 8: ಮಹಿಳಾ ಕ್ರಿಕೆಟ್ ಲೋಕದ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ ಬೆನ್ನಲ್ಲೇ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಏಕದಿನ ಕ್ರಿಕೆಟ್ ಹಾಗೂ ಟಿ20ಐ ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಜೂನ್ 23ರಿಂದ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ಉಭಯ ತಂಡಗಳು ಮೂರು ಟಿ20ಐ ಹಾಗೂ 3 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಲಿವೆ. ಡಂಬುಲಾ ಹಾಗೂ ಕ್ಯಾಂಡಿಯಲ್ಲಿ ಪಂದ್ಯಗಳು ನಿಗದಿಯಾಗಿವೆ.

ಟಿ20ಐ ತಂಡ: ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧಾನ(ಉಪ ನಾಯಕಿ), ಶೆಫಾಲಿ ವರ್ಮ, ಯಸ್ತಿಕಾ ಭಾಟಿಯಾ( ವಿಕೆಟ್ ಕೀಪರ್), ಎಸ್ ಮೇಘನಾ, ದೀಪ್ತಿ ಶರ್ಮ, ಪೂನಮ್ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರಾನ್ ಬಹದೂರ್, ರಿಚಾ ಘೋಶ್(ವಿಕೆಟ್ ಕೀಪರ್), ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ಜೇಮಿಯಾ ರೋಡ್ರಿಗ್ರೇಸ್ ಹಾಗೂ ರಾಧಾ ಯಾದವ್.

Womens ODI and T20I series against Sri Lanka and Rishabh replaces KL Rahul

ಏಕದಿನ ಕ್ರಿಕೆಟ್ ತಂಡ: ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧಾನ(ಉಪ ನಾಯಕಿ), ಶೆಫಾಲಿ ವರ್ಮ, ಯಸ್ತಿಕಾ ಭಾಟಿಯಾ( ವಿಕೆಟ್ ಕೀಪರ್), ಎಸ್ ಮೇಘನಾ, ದೀಪ್ತಿ ಶರ್ಮ, ಪೂನಮ್ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರಾನ್ ಬಹದೂರ್, ರಿಚಾ ಘೋಶ್(ವಿಕೆಟ್ ಕೀಪರ್),ರೇಣುಕಾ ಸಿಂಗ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್.

ಪುರುಷರ ತಂಡದ ನಾಯಕ ಬದಲು
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯಳುವಾಗಿದ್ದು, ಸರಣಿಗೂ ಮುನ್ನವೇ ತಂಡದಿಂದ ಹೊರನಡೆದಿದ್ದಾರೆ. ಅವರ ಸ್ಥಾನದಲ್ಲಿ ರಿಷಬ್ ಪಂತ್ ತಂಡವನ್ನು ಮುನ್ನೆಡಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಕೆಎಲ್ ರಾಹುಲ್ ಹಾಗೂ ಕುಲದೀಪ್ ಯಾದವ್ ಇಬ್ಬರು ಗಾಯಾಳುವಾಗಿದ್ದು, ತಂಡದಿಂದ ಹೊರಗುಳಿಯಲಿದ್ದು, ರಿಷಬ್ ಪಂತ್ ತಂಡದ ನಾಯಕರಾಗಿದ್ದರೆ, ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಐಪಿಎಲ್ ನಂತರ ಬ್ರೇಕ್ ತೆಗೆದುಕೊಂಡಿರುವ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಜಸ್ ಪ್ರೀತ್ ಬೂಮ್ರಾ ಈ ಸರಣಿಯಲ್ಲಿ ಆಡುತ್ತಿಲ್ಲ.

English summary
Harmanpreet Kaur has been appointed as Indian women’s team ODI captain for the upcoming Sri Lanka tour, starting from June 23. The move was made after Mithali Raj announced her retirement on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X