
ವಿಂಬಲ್ಡನ್ 2022 ಪಂದ್ಯಾವಳಿ ಆರಂಭ ದಿನಾಂಕ, ಆಟಗಾರರ ವಿವರ!
ವಿಂಬಲ್ಡನ್ 2022, ವರ್ಷದ ಮೂರನೇ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯು ಆರಂಭವನ್ನು ಟೆನಿಸ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಹಸಿರು ಹಾಸಿನ ಮೇಲೆ ದಿಗ್ಗಜ ಆಟಗಾರರ ರೋಚಕ ಪಂದ್ಯಾವಳಿಯನ್ನು ಕಣ್ತುಂಬಿಸಿಕೊಳ್ಳಲು ವೇದಿಕೆ ಸಜ್ಜಾಗಿದೆ. ವಿಂಬಲ್ಡನ್ 2022 ರಲ್ಲಿ, ನೊವಾಕ್ ಜೊಕೊವಿಕ್ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿ ಕಣಕ್ಕಿಳಿಯುತ್ತಿದ್ದರೆ, ಇಗಾ ಸ್ವಿಯಾಟೆಕ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿದ್ದಾರೆ.
ವಿಶ್ವದ ನಂ.1 ಡೆನಿಲ್ ಮೆಡ್ವೆಡೆವ್ ಈ ಬಾರಿ ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆಲ್ ಇಂಗ್ಲೆಮ್ಡ್ ಕ್ಲಬ್ ತೆಗೆದುಕೊಂಡ ನಿರ್ಣಯದಂತೆ ರಷ್ಯಾದ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಯುದ್ಧದ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಇನ್ನು ವಿಶ್ವ ನಂ.2 ಸೀಡ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಕೋವಿಡ್ 19 ಸಾಂಕ್ರಾಮಿಕದ ಭೀತಿ ಕಡಿಮೆಯಾಗಿದ್ದು, ಭರ್ತಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ವೀಕ್ಷಣೆಗೆ ಕ್ರೀಡಾಪ್ರೇಮಿಗಳು ಸಿದ್ಧವಾಗುತ್ತಿದ್ದಾರೆ.
ವಿಂಬಲ್ಡನ್ 2022 ಬಗ್ಗೆ ವಿವರ:
* ಜೂನ್ 24ರಂದು ವಿಂಬಲ್ಡನ್ 2022ರ ವೇಳಾಪಟ್ಟಿ, ಯಾರ ವಿರುದ್ಧ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ತಿಳಿಯಲಿದೆ.
* ಜೂನ್ 27, 2022(ಸೋಮವಾರ)ದಿಂದ ಅಧಿಕೃತವಾಗಿ ಪಂದ್ಯಾವಳಿಗಳು ನಡೆಯಲಿವೆ.
* ಸದ್ಯದ ಮಾಹಿತಿಯಂತೆ ಸುಮಾರು 128 ಪುರುಷ ಹಾಗೂ 128 ಮಹಿಳಾ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
ವಿಂಬಲ್ಡನ್ 2022ರ ಟಾಪ್ 10 ಸೀಡೆಡ್ ಆಟಗಾರರು:
ಪುರುಷರ ಸಿಂಗಲ್ಸ್
ನೋವಾಕ್ ಜೋಕೋವಿಕ್
ರಫೇಲ್ ನಡಾಲ್
ಕ್ಯಾಸ್ಪರ್ ರೂಡ್
ಸ್ಟೆಫನೋಸ್ ಸಿಸಿಪಸ್
ಕಾರ್ಲೊಸ್ ಅಲ್ಕಾರೆಜ್
ಫೆಲಿಕ್ಸ್ ಔಗರ್ ಅಲಿಯಾಸಿಮೆ
ಹೂಬರ್ ಊರ್ಕಾಜ್
ಮಾಟೆ ಬರೆಟ್ಟಿನಿ
ಕೆಮರೂನ್ ನೊರಿ
ಜಾನಿಕ್ ಸಿನ್ನರ್
ವಿಂಬಲ್ಡನ್ ಟಾಪ್ ಸೀಡೆಡ್ ಆಟಗಾರ್ತಿಯರು
ಇಗಾ ಸ್ವಿಯಟೆಕ್
ಅನಿ ಕೊಟಾವೆಟ್
ಓನಸ್ ಜಾಬಿಯರ್
ಪಾಲ್ಸ್ ಬಡೋಸಾ
ಮರಿಯಾ ಸಕ್ಕರಿ
ಕರೋಲಿನಾ ಪಿಲಿಸ್ಕೋವಾ
ಡೆನಿಯಲ್ ಕಾಲಿನ್ಸ್
ಜೆಸ್ಸಿಕಾ ಪೆಗುಲಾ
ಗರ್ಬಿನ್ ಮುಗುರಜಾ
ಎಮ್ಮಾ ರಡುಕಾನು

ವಿಂಬಲ್ಡನ್ 2022 ನೋಡುವುದು ಎಲ್ಲಿ? ಹೇಗೆ?
ಟಿವಿ: ಸ್ಟಾರ್ ಸ್ಪೋರ್ಟ್ಸ್ ಸಮೂಹ ಜಾಲದಲ್ಲಿ ನೇರ ಪ್ರಸಾರವಾಗಲಿದೆ.
ಆನ್ ಲೈನ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್
ಫೈನಲ್ ಪಂದ್ಯ: ವಿಂಬಲ್ಡನ್ 2022ರ ಫೈನಲ್ ಪಂದ್ಯ ಜುಲೈ 10ರ ಭಾನುವಾರ ನಡೆಯಲಿದೆ.
ವಿಂಬಲ್ಡನ್ ಬಹುಮಾನದ ಮೊತ್ತ
ಈ ಬಾರಿ ಪುರುಷ/ ಮಹಿಳಾ ಸಿಂಗಲ್ಸ್ ಗೆಲ್ಲುವ ಟೆನಿಸ್ ಪಟುವಿಗೆ 2 ಮಿಲಿಯನ್ ಪೌಂಡ್ ಪ್ರಶಸ್ತಿ ಮೊತ್ತ, ಫಲಕ ಸಿಗಲಿದೆ.