Virat Kohli: ಅಶ್ವಿನ್ ಹಾದಿಯಲ್ಲಿ ರೋಹಿತ್, ವಿರಾಟ್! ಟೆಸ್ಟ್ ಸರಣಿ ಬಳಿಕ ನಿವೃತ್ತಿ?
ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ಎಂದು ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಶ್ವಿನ್‌ರ ದಿಢೀರ್ ನಿವೃತ್ತಿ ಘೋಷಣೆಗೆ ಕಾರಣವೇನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದು ಆರಂಭ ಮಾತ್ರ ಎನ್ನಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹಿರಿಯ ಆಟಗಾರರು ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್ ಪಡೆದು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಒಂದು ವಿದಾಯ ಪಂದ್ಯ ಕೂಡ ಆಡದೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದು ಪ್ರಾರಂಭವಷ್ಟೇ!
ಜಸ್ಪ್ರೀತ್ ಬುಮ್ರಾ ಹೇಳಿಕೆಯ ಪ್ರಕಾರ ಭಾರತ ತಂಡದಲ್ಲಿ ಪರಿವರ್ತನೆಯ ಅಧ್ಯಾಯ ಶುರುವಾಗಿದೆ. ರವಿಚಂದ್ರನ್ ಅಶ್ವಿನ್ ನಿವೃತ್ತಿಯುವ ಹಲವು ಹಿರಿಯ ಆಟಗಾರರಿಗೆ ನೀಡಿದ ಪರೋಕ್ಷ ಸೂಚನೆಯಾಗಿದೆ ಎನ್ನುವ ಸುದ್ದಿ ಕೂಡ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಆಸ್ಟ್ರೇಲಿಯಾ ವಿರುದ್ದದ ಸರಣಿಯ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ಮುಂದಿನ ಎರಡೂ ಟೆಸ್ಟ್ ಪಂದ್ಯ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲಿದ್ದು, ಹಲವು ಹಿರಿಯ ಆಟಗಾರರಿಗೆ ಅದೇ ಕೊನೆಯ ಟೆಸ್ಟ್ ಆಗುವ ಸಾಧ್ಯತೆ ಇದೆ.
ಒಂದು ವೇಳೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮುಂದಿನ ಎರಡೂ ಪಂದ್ಯಗಳಲ್ಲಿ ಭಾರತ ಸೋತರೆ ಹಿರಿಯ ಆಟಗಾರರು ಅಂದೇ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ. ಇದರಿಂದ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತ ಯುವ ಆಟಗಾರರಿಗೆ ಅವಕಾಶ ಮಾಡಿಕೊಡಲು ಯೋಜಿಸಿದೆ.
2025ರಲ್ಲಿ ಪ್ರಮುಖ ಆಟಗಾರರು ನಿವೃತ್ತಿ
ಹಂತ ಹಂತವಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡಲು ಯೋಜಿಸಲಾಗಿದೆ. 2025ರ ಬೇಸಿಗೆ ವೇಳೆಗೆ ತಂಡದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ. ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಇಬ್ಬರ ಪ್ರದರ್ಶನ ಕೂಡ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ನಾಯಕತ್ವದಲ್ಲೂ ರೋಹಿತ್ ಶರ್ಮಾ ಎಡವುತ್ತಿರುವುದು ಸ್ಪಷ್ಟವಾಗಿದ್ದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಈಗಾಗಲೇ ರೋಹಿತ್ ಶರ್ಮಾ ಅವರಿಗೆ 37 ವರ್ಷ, ವಿರಾಟ್ ಕೊಹ್ಲಿಗೆ 36 ವರ್ಷಗಳಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆಗೆ ರೋಹಿತ್‌ಗೆ 38 ವರ್ಷ, ಆದರೆ ಕೊಹ್ಲಿ 37 ವರ್ಷವಾಗುತ್ತದೆ. ಫಿಟ್‌ನೆಸ್ ವಿಚಾರದಲ್ಲಿ ರೋಹಿತ್ ಹಿಂದಿದ್ದರೂ, ಕೊಹ್ಲಿ ಮಾತ್ರ ಇಂದಿಗೂ ತಮ್ಮ ಫಿಟ್‌ನೆಸ್ ಉಳಿಸಿಕೊಂಡಿದ್ದಾರೆ. ಆದರೆ ಅವರ ಫಾರ್ಮ್, ಪದೇ ಪದೇ ತಪ್ಪಿನಿಂದ ಔಟಾಗುತ್ತಿರುವ ರೀತಿ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.
2008 ರಲ್ಲಿ ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ ಮಾಡಿದಂತೆ 2025 ಭಾರತೀಯ ಕ್ರಿಕೆಟ್‌ನಲ್ಲಿ ನಿವೃತ್ತಿಯ ವರ್ಷವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. 2025ರ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯಲಿದ್ದು ಒಂದು ವೇಳೆ ಭಾರತ ಏನಾದರೂ ಪ್ರಶಸ್ತಿ ಗೆದ್ದರೆ ರೋಹಿತ್, ವಿರಾಟ್ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications